ಇದೆಂಥ ಆಸ್ಪತ್ರೆ? ಹೊಲಿಗೆ ಹಾಕೋನು ಜವಾನ, ನಿಂತು ನೋಡೋನು ವೈದ್ಯ!
ರೋಹ್ಟಕ್, ನವೆಂಬರ್ 14: ಆಸ್ಪತ್ರೆಯ ಜವಾನನೇ ರೋಗಿಯ ಗಾಯಕ್ಕೆ ಹೊಲಿಗೆ ಹಾಕುತ್ತಿದ್ದ ದೃಶ್ಯವೊಂದು ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಹರ್ಯಾಣದ ರೋಹ್ಟಕ್ ನ ಆಸ್ಪತ್ರೆಯೊಂದರಲ್ಲಿ ನವೆಂಬರ್ 10 ರಂದು ನಡೆದ ಘಟನೆ ಇದು. ರೋಗಿಯೊಬ್ಬನ ಕೈಗೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ನೋವಿನಿಂದ ಕಿರುಚಾಡುತ್ತಿದ್ದರೂ ವೈದ್ಯರು ತನಗೆ ನೋವು ನಿವಾರಕ ಮಾತ್ರೆಯನ್ನು ನೀಡದೆ, ಜವಾನನೊಬ್ಬನನ್ನು ಕರೆದು ಗಾಯಕ್ಕೆ ಹೊಲಿಗೆ ಹಾಕಿಸಿದರು ಎಂದು ರೋಗಿ ದೂರಿದ್ದಾರೆ. ಜವಾನ ಹೊಲಿಗೆ ಹಾಕುತ್ತಿರುವ ದೃಶ್ಯವನ್ನು ರೋಗಿಯ ಸಂಬಂಧಿಯೊಬ್ಬರು ವಿಡಿಯೋ ಮಾಡಿದ್ದಾರೆ.
"ವೈದ್ಯರು ಅಲ್ಲಿಯೇ ಇದ್ದರೂ ರೋಗಿಯನ್ನು ನೋಡದೆ, ಜವಾನನ ಬಳಿ ಹೊಲಿಗೆ ಹಾಕುವುದಕ್ಕೆ ಸೂಚಿಸಿದರು. ನಾನು ನೋವಿನಿಂದಲೇ ಇದ್ದೆ. ನಂತರ ಆ ಆಸ್ಪತ್ರೆಯಿಂದ ಹೋದ ಮೇಲೆ ನಾನು ಬೇರೊಂದು ಆಸ್ಪತ್ರೆಗೆ ತೆರಳಿ ವೈದ್ಯರನ್ನು ಕಂಡು. ಅವರು ಕೈಗೆ ಹಾಕಿದೆ ಹೊಲಿಗೆ ಸರಿಹೋಗಿಲ್ಲ ಎಂದರು" ಎಂದು ರೋಗಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, 'ವೈದ್ಯರ ಕೊರತೆಯನ್ನು ನೀಗಿಸಲು ನಾವು ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಿದ್ದೇವೆ. ಇಂಥ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ಖೇದಕರ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.












Click it and Unblock the Notifications