Rajat Patidar: ಎಂ.ಎಸ್ ಧೋನಿ - ರೋಹಿತ್ ಶರ್ಮಾ ಸಾಲಿಗೆ ಆರ್‌ಸಿಬಿ ನಾಯಕ: ಬೆಂಗಳೂರು ಗೆಲುವಿನೊಂದಿಗೆ ಹೊಸ ದಾಖಲೆ

Rajat Patidar: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಸತತ ಎರಡನೇ ಬಾರಿ ಐಪಿಎಲ್‌ನಲ್ಲಿ ಚಾಂಪಿಯನ್ಸ್‌ ಆಗಿ ಹೊರ ಹೊಮ್ಮಿದೆ. ಈ ಮೂಲಕ ಸತತವಾಗಿ ಐಪಿಎಲ್ ಟ್ರೋಫಿ ಗೆದ್ದ ನಾಯಕರುಗಳಾದ ಧೋನಿ ಹಾಗೂ ರೋಹಿತ್ ಶರ್ಮಾ ಅವರ ಸಾಲಿಗೆ ರಜತ್ ಪಾಟಿದಾರ್ ಅವರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಸಹ ರಜತ್ ಪಾಟಿದಾರ್ ಅವರು ಬರೆದಿದ್ದಾರೆ. ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ನಾಯಕರುಗಳ ಸಾಲಿನಲ್ಲಿ ರಜತ್ ಪಾಟಿದಾರ್ ಅವರು ಸೇರ್ಪಡೆಯಾಗಿದ್ದಾರೆ. ಎಂಎಸ್ ಧೋನಿ, ರೋಹಿತ್ ಶರ್ಮಾ ಹಾಗೂ ರಜತ್ ಪಟಿದಾರ್ ಅವರು ಐಪಿಎಲ್‌ನಲ್ಲಿ ಈ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ತಮ್ಮ ತಂಡವನ್ನು ಸತತ ಚಾಂಪಿಯನ್‌ಶಿಪ್‌ಗಳನ್ನಾಗಿ ಮುನ್ನಡೆಸಿದ ಮೂರನೇ ಐಪಿಎಲ್‌ ನಾಯಕ ರಜತ್ ಪಟಿದಾರ್ ಆಗಿದ್ದಾರೆ. ಈ ಹಿಂದೆ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕರಲ್ಲಿ ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಇದ್ದರು ಎನ್ನುವುದು ವಿಶೇಷ.

ನಾಯಕನಾಗಿಯೂ ದಾಖಲೆ

ಇನ್ನು ರಜತ್ ಪಾಟಿದಾರ್ ಅವರು ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿಯನ್ನು ಗೆದ್ದ ನಾಯಕ ಮಾತ್ರವಲ್ಲದೆ. ಇದೇ ಸಂದರ್ಭದಲ್ಲಿ ಮತ್ತೊಂದು ದಾಖಲೆಯನ್ನೂ ಸಹ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಎರಡು ವರ್ಷದಲ್ಲಿ ಎರಡು ಪ್ರಶಸ್ತಿ ಗೆದ್ದ ಮೊದಲ ನಾಯಕ ರಜತ್ ಪಾಟಿದಾರ್ ಎನ್ನುವ ಖ್ಯಾತಿಗೂ ರಜತ್ ಪಾಟಿದಾರ್ ಅವರು ಭಾಜನರಾಗಿದ್ದಾರೆ.

Rajat Patidar

ಮೂರನೇ ಭಾರತೀಯ ನಾಯಕ

ಸತತ ಎರಡು ವರ್ಷ ಅಥವಾ ಬ್ಯಾಕ್ ಟು ಬ್ಯಾಕ್ ಐಪಿಎಲ್ ಚಾಂಪಿಯನ್ ಟ್ರೋಫಿಯನ್ನು ಗೆದ್ದವರಲ್ಲಿ ಮೂವರು ಸಹ ಭಾರತೀಯ ನಾಯಕರೇ ಇದ್ದಾರೆ. 2026ನೇ ಸಾಲಿನಲ್ಲಿ ಈ ದಾಖಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ರಜತ್ ಪಾಟಿದಾರ್ ಅವರು ಸಹ ಪಾತ್ರರಾಗಿದ್ದಾರೆ.

ಬರ್ತಡೆಗೆ ಸ್ಪೇಷಲ್ ಗಿಫ್ಟ್‌

ಇನ್ನು ರಜತ್ ಪಾಟಿದಾರ್‌ಗೆ ಬರ್ತಡೆಗೆ ಆರ್‌ಸಿಬಿ ತಂಡದಿಂದ ವಿಶೇಷ ಗಿಫ್ಟ್‌ ಸಿಕ್ಕಂತೆ ಆಗಿದೆ. ಇಂದು ಜೂನ್ 1ರಂದು ರಜತ್ ಪಾಟಿದಾರ್ ಅವರು ಜನ್ಮದಿನ. ರಜತ್ ಪಾಟಿದಾರ್ ಅವರು ಇಂದು 33ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದಲ್ಲಿ ಅವರಿಗೆ ತಂಡದಿಂದ ವಿಶೇಷ ಗಿಫ್ಟ್‌ ಸಿಕ್ಕಂತೆ ಆಗಿದೆ. ಜನ್ಮದಿನದ ಹಿಂದಿನ ದಿನವಾದ ಮೇ 31ರ ಭಾನುವಾರ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್ ಆಗಿದೆ.

ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌

ಗುಜರಾತ್ ಟೈಟಾನ್ಸ್ ಪಂದ್ಯಕ್ಕೂ ಮುಂಚೆ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು ಪೋಸ್ಟ್‌ವೊಂದನ್ನು ಮಾಡಿದ್ದರು. One more game. One more push. We need all of you ❤️ ಇನ್ನೊಂದು ಆಟ. ಇನ್ನೊಂದು ಪ್ರಯತ್ನ. ನಮಗೆ ನಿಮ್ಮೆಲ್ಲರ ಸಹಕಾರ ಬೇಕು ❤️ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕಾರಗಿರುವ ರಜತ್ ಪಾಟಿದಾರ್ ಅವರು ಪೋಸ್ಟ್‌ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+