Daily Horoscope: ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ, ವ್ಯವಹಾರದಲ್ಲಿ ಲಾಭ,ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ

Horoscope June 1: ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಸೋಮವಾರ ರಾಹುಕಾಲವು ಬೆಳಿಗ್ಗೆ 07:30 ರಿಂದ 09:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಭವಿಷ್ಯಕ್ಕಾಗಿ ಹೂಡಿಕೆ ಮಾಡಲು, ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಇಂದು ಉತ್ತಮ ದಿನ. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲಸದಲ್ಲಿ ತಾಳ್ಮೆ ಕಾಪಾಡಿಕೊಳ್ಳುವುದರಿಂದ ಅಪೇಕ್ಷಿತ ಯಶಸ್ಸು ಸಿಗುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

Horoscope June 1

ವೃಷಭ ರಾಶಿ:

ಮಹತ್ವದ ಮತ್ತು ವಿಶೇಷ ಜವಾಬ್ದಾರಿ ಸಿಗಬಹುದು. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ವ್ಯಾಪಾರ ವಿಸ್ತರಣೆ ಬಗ್ಗೆ ಯೋಚಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ:

ಬಾಕಿ ಇರುವ ಕೆಲಸ ಪೂರ್ಣವಾಗುವುದು. ಸರ್ಕಾರಿ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಿ. ನಿಮ್ಮ ಯೋಜನೆಗಳ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ. ಹಣಕಾಸಿನ ವಹಿವಾಟುಗಳಲಲ್ಲಿ ಎಚ್ಚರಿಕೆ ಇರಲಿ.

ಕಟಕ ರಾಶಿ:

ಜನಪ್ರಿಯತೆ ಹೆಚ್ಚಾಗುತ್ತದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಕುಟುಂಬ ವಿಷಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಮುಖ್ಯವಾಗಿರುತ್ತವೆ. ಆದಾಯ ಹೆಚ್ಚಾಗುವುದು, ಖರ್ಚುಗಳು ಸಹ ಇರುತ್ತವೆ.

ಸಿಂಹ ರಾಶಿ:

ವಿವಾದಗಳಲ್ಲಿ ಭಾಗಿಯಾಗಬೇಡಿ. ಕಚೇರಿಯಲ್ಲಿ ಉದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ.

ಕನ್ಯಾರಾಶಿ:

ವ್ಯವಹಾರವು ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ.ಹೊಸ ಕೆಲಸ ಆರಂಭಿಸಲು ಯೋಚಿಸುತ್ತಿದ್ದರೆ ಸಮಯ ಅನುಕೂಲಕರವಾಗಿರಲಿದೆ. ಆಧ್ಯಾತ್ಮದತ್ತ ಒಲವು ಹೆಚ್ಚಾಗುವುದು.
ಉದ್ಯೋಗದಲ್ಲಿರುವವರ ಒತ್ತಡ ಹೆಚ್ಚಾಗುವುದು.

ತುಲಾ ರಾಶಿ:

ಸಾಲದಿಂದ ಮುಕ್ತಿ ಸಿಗುವುದು. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ವ್ಯವಹಾರದಲ್ಲಿ ಹೊಸ ಗಳಿಕೆಯ ಮಾರ್ಗಗಳು ತೆರೆದುಕೊಳ್ಳುತ್ತವೆ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದು.

ವೃಶ್ಚಿಕ ರಾಶಿ:

ಬಾಕಿ ಇರುವ ಹಣಕಾಸಿನ ಕೆಲಸಗಳು ಪೂರ್ಣವಾಗುವುದು. ವ್ಯವಹಾರದಲ್ಲಿ ಗಮನಾರ್ಹವಾದ ಸಕಾರಾತ್ಮಕ ಬದಲಾವಣೆಯಾಗುವುದು.ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಮನ್ನಣೆ ಇರುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಧನು ರಾಶಿ:

ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ಇಂದು ಗಮನಾರ್ಹ ಯಶಸ್ಸು ಸಿಗುವುದು. ದಿನದ ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಮಕರ ರಾಶಿ:

ವ್ಯವಹಾರದಲ್ಲಿ ಯಾವುದೇ ಕಾನೂನು ಅಡೆತಡೆಗಳಿದ್ದರೂ ನಿವಾರಣೆಯಾಗುವುದು. ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೂ ಪರಿಹಾರ ಸಿಗುವುದು. ಗುರಿಗಳನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ.

ಕುಂಭ ರಾಶಿ:

ರಾಜಕೀಯ ಅಥವಾ ಸಾಮಾಜಿಕ ಜೀವನದಲ್ಲಿ ತೊಡಗಿರುವವರಿಗೆ ಉತ್ತಮ ಲಾಭವಾಗುವುದು. ವಿದ್ಯಾರ್ಥಿಗಳಿಗೆ ದಿನ ಉತ್ತಮವಾಗಿರುವುದು. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ಮೀನ ರಾಶಿ:

ವಾಹನ ಅಥವಾ ದುಬಾರಿ ಎಲೆಕ್ಟ್ರಾನಿಕ್ ವಸ್ತು ಇದ್ದಕ್ಕಿದ್ದಂತೆ ಹಾಳಾಗುವುದರಿಂದ ಗಮನಾರ್ಹ ವೆಚ್ಚಗಳು ಉಂಟಾಗಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಅದ್ಭುತ ಯಶಸ್ಸು ಸಿಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+