ಟೆಲಿಕಾಂ ಸಮರ : ಜಿಯೋ ಪ್ರೈಮ್ vs ಏರ್ ಟೆಲ್, ವೋಡಾಫೋನ್, ಐಡಿಯಾ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09: ರಿಲಯನ್ಸ್ ವೆಲ್ಕಮ್ ಆಫರ್ ಗೆ ಸಿಕ್ಕ ಭರಪೂರ ಮೆಚ್ಚುಗೆ, ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ರಿಲಯನ್ಸ್ ಸಂಸ್ಥೆ ಈಗ ಜಿಯೋ ಪ್ರೈಮ್ ಮೂಲಕ ಟೆಲಿಕಾಂ ದರ ಸಮರಕ್ಕೆ ಕಿಚ್ಚು ಹಚ್ಚಿದೆ.

ಜಿಯೋ ಪ್ರೈಮ್ ಹಾಗೂ ಭಾರ್ತಿ ಏರ್ ಟೆಲ್ ನ ಆಫರ್, ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ಮಧ್ಯದಲ್ಲಿ ಯಾವ ಸಂಸ್ಥೆ ಕೊಡುಗೆ ಸದ್ಯಕ್ಕೆ ಉತ್ತಮವಾಗಿದೆ ಇಲ್ಲಿದೆ ಹೋಲಿಕೆ ಪಟ್ಟಿ...

ರಿಲಯನ್ಸ್ ಜಿಯೋ ವೆಲ್ಕಮ್ ಆಫರ್ : ಸೆಪ್ಟೆಂಬರ್ 5,2016ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಗ್ರಾಹಕರಿಗೆ ಉಚಿತ ಜಿಯೋ ಸಿಮ್, ಅನಿಯಮಿತ ಇಂಟರ್ನೆಟ್ ಡಾಟಾ, ಉಚಿತ ವಾಯ್ಸ್ ಕಾಲ್ ನೀಡಲಾಯಿತು.

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ : ಡಿಸೆಂಬರ್ 01ರಂದು ಚಾಲನೆ ನೀಡಲಾಯಿತು. ಇದರಲ್ಲಿ ಪ್ರತಿ ದಿನ 1 ಜಿಬಿ ಡಾಟಾ ಉಚಿತವಾಗಿದ್ದು, ಮೊದಲ ಬಾರಿಗೆ ಗ್ರಾಹಕರಿಂದ ಹಣ ಪಡೆಯುವ ವ್ಯವಸ್ಥೆಗೆ ರಿಲಯನ್ಸ್ ಕಾಲಿಟ್ಟಿತು.

ಜಿಯೋ ಪ್ರೈಮ್: ಫೆಬ್ರವರಿ 21, 2017ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಪ್ರತಿದಿನ 1 ಜಿಬಿ ಉಚಿತ ಡಾಟಾ 303 ಪ್ರತಿ ತಿಂಗಳ ರೀಚಾರ್ಚ್ ನೊಂದಿಗೆ ಮಾರ್ಚ್ 31, 2017ರ ತನಕ ಲಭ್ಯ. ವಾರ್ಷಿಕ 99ರು ಪಾವತಿಸಿದರೆ ಮಾರ್ಚ್ 31, 2018ರ ತನಕ ಸದಸ್ಯತ್ವ ಖಾತ್ರಿ. ಜತೆಗೆ ಪ್ರತಿ ತಿಂಗಳ 303 ರೀಚಾರ್ಜ್ ನೊಂದಿಗೆ 28 ದಿನಕ್ಕೆ 28ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಿರುತ್ತದೆ.

ಜಿಯೋ ಪ್ರೈಮ್ ನಲ್ಲಿ ಏನೇನಿದೆ?

ಜಿಯೋ ಪ್ರೈಮ್ ನಲ್ಲಿ ಏನೇನಿದೆ?

• 12 ತಿಂಗಳುಗಳಿಗೆ ಆಫರ್ ಮಾನ್ಯವಾಗಿರುತ್ತದೆ, ಅಂದರೆ 2018ರ ಮಾರ್ಚ್ ತನಕ ಆಫರ್ ಕೇವಲ ಕೆಲವೆ ಆಯ್ದ ಬಳಕೆದಾರರಿಗೆ, ಆಪರೇಟರ್‍ಗಳು ಆಯ್ಕೆ ಮಾಡಿದ (ವಿಭಜಿತ ಆಫರ್) ಬಳಕೆದಾರರಿಗೆ ಮಾತ್ರ ಮಾನ್ಯ.
• 15ನೇ ಮಾರ್ಚ್ 2017ಕ್ಕಿಂತ ಮುನ್ನ ಮೊದಲ ರಿಚಾರ್ಜ್ ಮಾಡಿದರೆ ಮಾತ್ರ ಆಫರ್ ಲಭ್ಯ.
• 4ಜಿ ಹ್ಯಾಂಡ್‍ಸೆಟ್‍ಗಳಿಗೆ ಮಾತ್ರ ಮಾನ್ಯ.
• 3ಜಿ ಬಳಕೆದಾರರಿಗೆ ಆಫರ್ ಮಾನ್ಯವಿರುವುದಿಲ್ಲ
• ಆಯ್ದ ವೃತ್ತಗಳಲ್ಲಿ ಮಾತ್ರ ಲಭ್ಯ
12 ತಿಂಗಳ ಖಾತರಿ ಇಲ್ಲ, ಯಾವುದೇ ವೇಳೆಯಲ್ಲಿ ಪೂರ್ವಸೂಚನೆ ಇಲ್ಲದೆ ಆಫರ್ ಹಿಂದೆಗೆದುಕೊಳ್ಳುವ ಹಕ್ಕನ್ನು ಆಪರೇಟರ್ ಹೊಂದಿದೆ

ಜಿಯೋ ಪ್ರೈಮ್ ಜತೆ ಹೋಲಿಕೆ

ಜಿಯೋ ಪ್ರೈಮ್ ಜತೆ ಹೋಲಿಕೆ

ಟೆಲಿಕಾಂ ಸಮರ : ಜಿಯೋ ಪ್ರೈಮ್ 303 vs ಏರ್ ಟೆಲ್ 349 vs ವೋಡಾಫೋನ್ 346 vs ಐಡಿಯಾ 348 ಆಫರ್ ಬಗ್ಗೆ ಚಿತ್ರ ನೋಡಿ.
* ಏರ್ ಟೆಲ್ ನಲ್ಲಿ ಹಗಲು ರಾತ್ರಿ ಮಾತ್ರ ಆಫರ್ ಇದ್ದರೆ, ವೋಡಾಫೋನ್ ಹಾಗೂ ಐಡಿಯಾದಲ್ಲಿ ಇಂಥ ಸೌಲಭ್ಯವಿಲ್ಲ
* ಜಿಯೋದಲ್ಲಿ 5 ಜಿಬಿ ಅಧಿಕ ಡಾಟಾ ಪಡೆಯುವ ಅವಕಾಶವಿದೆ. ವೋಡಾಫೋನ್ ನಲ್ಲಿ ಡಬಲ್ ಡಾಟಾ ಹಾಗೂ ವ್ಯಾಲಿಡಿಟಿ ಸಿಗುತ್ತದೆ.

ವಾಯ್ಸ್ ಕಾಲ್ ಹೋಲಿಕೆ

ವಾಯ್ಸ್ ಕಾಲ್ ಹೋಲಿಕೆ

ಟೆಲಿಕಾಂ ಸಮರ : ಜಿಯೋ ಪ್ರೈಮ್ 303 vs ಏರ್ ಟೆಲ್ 349 vs ವೋಡಾಫೋನ್ 346 vs ಐಡಿಯಾ 348 ಆಫರ್ ಬಗ್ಗೆ ಚಿತ್ರ ನೋಡಿ.

ಏರ್ ಟೆಲ್ ಹಾಗೂ ಜಿಯೋದಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯವಿದ್ದರೆ, ವೋಡಾಫೋನ್ ಸೌಲಭ್ಯವಿಲ್ಲ. ರೀಚಾರ್ಜ್ ಕೂಡಾ ಆಯ್ದ ಬಳಕೆದಾರರರಿಗೆ ಮಾತ್ರ

5 ಜಿ ಮೇಲೆ ಕಣ್ಣು

5 ಜಿ ಮೇಲೆ ಕಣ್ಣು

ಜಿಯೋಗೆ ಬಿಡುಗಡೆಯಾದ 170 ದಿನಗಳೊಳಗೆ ದಾಖಲೆಯ 100 ಮಿಲಿಯನ್ ಚಂದಾದಾರರ ನೆಲೆಯನ್ನು ಕಂಡಿರುವ ರಿಲಯನ್ಸ್ ಜಿಯೋ ಜತೆಗೆ ಎಲ್‍ಟಿಇ-ಸುಧಾರಿತ ಪ್ರೊ ಮತ್ತು 5ಜಿಗಾಗಿ ಹೊಸ ಮಾದರಿಯನ್ನು ಸೃಷ್ಟಿಸಲು ಸ್ಯಾಮ್ ಸಂಗ್ ಶ್ರಮಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jio announced the Jio Prime membership on February 21, 2017, under which users can get 1GB data per day for Rs.303 per month. Jio Prime is available to users until March 31, 2017. Here is comparative study with Airtel, Vodafone and Idea
Please Wait while comments are loading...