ಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆ

ನವದೆಹಲಿ, ಜೂನ್ 1: ಜೂನ್ 1ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿವಿಧ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ದೇಶದಾದ್ಯಂತ ಎಲ್ಲಾ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲೂ ಈ ಹೊಸ ನಿಯಮ ಅನ್ವಯವಾಗಲಿದೆ. ಈ ಶುಲ್ಕ ಪರಿಷ್ಕರಣೆ ದೇಶದಾದ್ಯಂತ ಇರುವ ಬ್ಯಾಂಕಿನ ಲಕ್ಷಕ್ಕೂ ಅಧಿಕ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಹೊಸ ಅಧಿಸೂಚನೆಯ ಪ್ರಕಾರ ಕೆಲವು ಸೇವೆಗಳಿಗೆ ಹೊಸದಾಗಿ ಶುಲ್ಕ ವಿಧಿಸಲಾಗುತ್ತಿದೆ. ಇನ್ನು ಶುಲ್ಕ ಪಾವತಿಸಬೇಕಾಗಿದ್ದ ಕೆಲವು ಹಳೆಯ ಸೇವೆಗಳ ದರಗಳಲ್ಲೂ ಬದಲಾವಣೆ ಮಾಡಲಾಗಿದೆ. ತ್ವರಿತ ಹಣ ವರ್ಗಾವಣೆ, ಹಾಳಾದ ನೋಟುಗಳ ಬದಲಾವಣೆ, ಸ್ಟೇಟ್ ಬ್ಯಾಂಕ್ ಬುಡ್ಡಿ (buddy) ಸೇವೆಗಳು, ಬೇಸಿಕ್ ಉಳಿತಾಯ ಖಾತೆಗಳ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.[ಶೀಘ್ರದಲ್ಲೇ ಬ್ಯಾಂಕ್ ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆ ಜಾರಿ]

ಪರಿಷ್ಕೃತ ದರಗಳು ಈ ಕೆಳಗಿನಂತಿವೆ..

ಸೇವಿಂಗ್ಸ್ ಖಾತೆಗಳಿಗೆ ಸೇವಾ ಶುಲ್ಕ

ಸೇವಿಂಗ್ಸ್ ಖಾತೆಗಳಿಗೆ ಸೇವಾ ಶುಲ್ಕ

* ಜೂನ್ 1ರಿಂದ ಆರಂಭವಾಗಿ 10 ಚೆಕ್ ಗಳ ಚೆಕ್ ಬುಕ್ಕಿಗೆ ರೂ 30 ಜತೆಗೆ ಸೇವಾ ತೆರಿಗೆಯನ್ನು ಶುಲ್ಕವಾಗಿ ವಿಧಿಸಲಾಗುತ್ತದೆ.

* 25 ಚೆಕ್ ಗಳ ಚೆಕ್ ಬುಕ್ ಗೆ ರೂ. 75 + ಸೇವಾ ತೆರಿಗೆ

* 50 ಚೆಕ್ ಗಳಿರುವ ಚೆಕ್ ಬುಕ್ಕಿಗೆ ರೂ. 150 + ಸೇವಾ ತೆರಿಗೆ ವಿಧಿಸಲಾಗುತ್ತದೆ.[ಎಸ್ಬಿಐಗೆ 4ನೇ ತ್ರೈಮಾಸಿಕದಲ್ಲಿ ಶೇ 125ರಷ್ಟು ಲಾಭ ಹೆಚ್ಚಳ]

ಎಟಿಎಂ ಶುಲ್ಕಗಳ ಪರಿಷ್ಕರಣೆ

ಎಟಿಎಂ ಶುಲ್ಕಗಳ ಪರಿಷ್ಕರಣೆ

* ರೂಪೇ ಕಾರ್ಡುಗಳನ್ನು ಉಚಿತವಾಗಿ ನೀಡಲಾಗುತ್ತದೆ.

* ಆಯಾ ಬ್ಯಾಂಕಿನ ಎಟಿಎಂಗಳನ್ನು ಬಳಸುವುದೂ ಸೇರಿ ತಿಂಗಳಿಗೆ 4 ಬಾರಿ ಉಚಿತವಾಗಿ ಹಣ ಡ್ರಾ ಮಾಡಬಹುದು.

* 4ಕ್ಕಿಂತ ಹೆಚ್ಚಿನ ಬಳಕೆಗೆ ಬೇರೆ ಬ್ಯಾಂಕಿನ ಎಟಿಎಂ ಬಳಸಿದರೆ ರೂ. 20 ಶುಲ್ಕ ಹಾಗೂ ಎಸ್ಬಿಐನಲ್ಲೇ ಆದರೆ ರೂ. 10 ಪಾವತಿಸಬೇಕು.

* ಶಾಖೆಯಲ್ಲಿ 4 ಬಾರಿ ಹಣ ಡ್ರಾ ಮಾಡಬಹುದು. 4ಕ್ಕಿಂತ ಜಾಸ್ತಿ ಡ್ರಾ ಮಾಡಿದರೆ 50 ರೂಪಾಯಿ ಸೇವಾ ತೆರಿಗೆ ನೀಡಬೇಕು.

ತ್ವರಿತ ಹಣ ವರ್ಗಾವಣೆಗೆ ಶುಲ್ಕ

ತ್ವರಿತ ಹಣ ವರ್ಗಾವಣೆಗೆ ಶುಲ್ಕ

INB, MB, UPI ಮತ್ತು USSD ಮೂಲಕ ತ್ವರಿತ ಹಣ ವರ್ಗಾವಣೆ ಮಾಡುವವರೂ ಶುಲ್ಕ ಪಾವತಿಸಬೇಕು. 1 ಲಕ್ಷದವರೆಗೆ ವರ್ಗಾವಣೆಗೆ ರೂ 5 ರೂಪಾಯಿ ಶುಲ್ಕ ಹಾಗೂ ಸೇವಾ ತೆರಿಗೆ ಪಾವತಿಸಬೇಕು. 1-2 ಲಕ್ಷಕ್ಕೆ ರೂ. 15 ಮತ್ತು ಸೇವಾ ತೆರಿಗೆ ಹಾಗೂ 5 ಲಕ್ಷಕ್ಕಿಂತ ಹೆಚ್ಚಿನ ವರ್ಗಾವಣೆಗೆ ರೂ. 25 ಶುಲ್ಕ + ಸೇವಾ ತೆರಿಗೆ ಪಾವತಿಸಬೇಕು.[ಪೇಟಿಯಂ ವ್ಯಾಲೆಟ್ ಗೂ ಪೇಮೆಂಟ್ ಬ್ಯಾಂಕಿಗೂ ಏನು ವ್ಯತ್ಯಾಸ?]

ನೋಟು ಬದಲಾವಣೆಗೆ ಶುಲ್ಕ

ನೋಟು ಬದಲಾವಣೆಗೆ ಶುಲ್ಕ

ಹರಿದ, ಗೀಚಿದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲೂ ಶುಲ್ಕ ನೀಡಬೇಕು. 20 ನೋಟು ಅಥವಾ ಗರಿಷ್ಠ 5,000 ರೂಪಾಯಿವರೆಗಿನ ನೋಟು ಬದಲಾವಣೆಗೆ ಯಾವುದೇ ಶುಲ್ಕವಿಲ್ಲ. 20ಕ್ಕಿಂತ ಅಥವಾ 5,000 ಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳಿದ್ದರೆ ಒಂದು ನೋಟಿಗೆ 2 ರೂಪಾಯಿ ಅಥವಾ 1,000 ರೂಪಾಯಿಗೆ 5 ರೂ. (ಇವುಗಳಲ್ಲಿ ಯಾವುದು ಗರಿಷ್ಠವೋ ಅದು) ಶುಲ್ಕ ನೀಡಬೇಕು.

ಸ್ಟೇಟ್ ಬ್ಯಾಂಕ್ ಬುಡ್ಡಿ(buddy) ಸೇವೆ

ಸ್ಟೇಟ್ ಬ್ಯಾಂಕ್ ಬುಡ್ಡಿ(buddy) ಸೇವೆ

ಸ್ಟೇಟ್ ಬ್ಯಾಂಕ್ ಆ್ಯಪ್ ಬಳಕೆ ಮಾಡುವವರಿಗೂ ಶುಲ್ಕಗಳ ಬಿಸಿ ಕಾದಿದೆ. ವ್ಯಾಲೆಟ್ ನಿಂದ ಎಟಿಎಂಗಳ ಮೂಲಕ ಹಣ ಡ್ರಾ ಮಾಡಿದರೆ ಒಂದು ಬಾರಿಗೆ ರೂ. 25 ರೂ ಶುಲ್ಕ ನಿಗದಿಪಡಿಸಲಾಗಿದೆ.

ಇನ್ನು ಬಿಸಿನೆಸ್ ಕರೆಸ್ಪಾಂಡೆಂಟ್ ಮುಖಾಂತರ ವ್ಯಾಲೆಟ್ ಗೆ ಹಣ ಹಾಕಿದರೆ ಶೇಕಡಾ 0.25 ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಕನಿಷ್ಠ 2 ರೂ ಹಾಗೂ ಗರಿಷ್ಠ 8 ರೂ + ಸೇವಾ ತೆರಿಗೆ ಪಾವತಿಸಬೇಕು.

ಒಂದೊಮ್ಮೆ ಬಿಸಿನೆಸ್ ಕರೆಸ್ಪಾಂಡೆಂಟ್ ಮುಖಾಂತರ ವ್ಯಾಲೆಟ್ ನ ಹಣವನ್ನು 100ರ ನೋಟುಗಳಂತೆ 2,000 ರೂಪಾಯಿವರೆಗೆ ಡ್ರಾ ಮಾಡಿದರೆ ಶೇಕಡಾ 2.50 ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಶುಲ್ಕ 6 ರೂಪಾಯಿಗಳಾಗಿರುತ್ತದೆ.[ಅಸ್ತಿತ್ವಕ್ಕೆ ಬಂದ ಪೇಟಿಎಂ ಬ್ಯಾಂಕ್: ನೀವು ತಿಳಿಯಬೇಕಾದ 5 ವಿಚಾರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+