• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸ್ತಿತ್ವಕ್ಕೆ ಬಂದ ಪೇಟಿಎಂ ಬ್ಯಾಂಕ್: ನೀವು ತಿಳಿಯಬೇಕಾದ 5 ವಿಚಾರ

|

ನವದಹೆಲಿ, ಮೇ 22: ಘೋಷಣೆಯಾಗಿ ಒಂದು ವರ್ಷದ ತರುವಾಯ ಪೇಟಿಎಂ ಬ್ಯಾಂಕ್ ಗೆ ಮೇ 23ರಿಂದ ಅಧಿಕೃತ ಚಾಲನೆ ಸಿಕ್ಕಿದೆ. ಅಪನಗದೀಕರಣದ ನಂತರ, ಆನ್ ಲೈನ್ ಪೇಮೆಂಟ್ ನ ಹೊಸ ಯುಗವೇ ಶುರುವಾದಾಗ ಪೇಟಿಎಂ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು.

ಆದರೆ, ಇದಕ್ಕೆ ಏರ್ ಟೆಲ್ ಹಾಗೂ ಇಂಡಿಯಾ ಪೋಸ್ಟ್ ನಿಂದ ಭಾರೀ ಪೈಪೋಟಿ ನೀಡಿದವು. ಆದರೂ, ಈ ಸಮರದಲ್ಲಿ ಮೇಲೇಳುವಲ್ಲಿ ಯಶಸ್ವಿಯಾದ ಪೇಟಿಎಂ, ಆನಂತರದ ದಿನಗಳಲ್ಲಿ ಆನ್ ಲೈನ್ ಪೇಮೆಂಟ್ ವಿಚಾರದಲ್ಲಿ ಅಗಾಧ ಪ್ರಮಾಣದ ಜನ ವಿಶ್ವಾಸ ಗಳಿಸಿತು. ಇದೀಗ, ಸಂಸ್ಥೆಯು ಪೇಮೆಂಟ್ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಈ ರೀತಿಯಾಗಿ ಪೇಮೆಂಟ್ ಬ್ಯಾಂಕ್ ಆದ ಭಾರತದ ಮೂರನೇ ಬ್ಯಾಂಕ್ ಇದು.[ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?]

ಈ ಹಿಂದೆ, ಏರ್ ಟೆಲ್ ಹಾಗೂ ಇಂಡಿಯಾ ಪೋಸ್ಟ್ ಸಂಸ್ಥೆಗಳೂ ಪೇಮೆಂಟ್ ಬ್ಯಾಂಕ್ ಗಳಾಗಿ ಅಸ್ತಿತ್ವ ಪಡೆದುಕೊಂಡಿವೆ. ನೂತನ ಪೇಟಿಎಂ ಬ್ಯಾಂಕ್ ಬಗ್ಗೆ ನಾವು (ಗ್ರಾಹಕರು) ತಿಳಿಯಬೇಕಾದ ಐದು ಅಂಶಗಳು ಇಲ್ಲಿವೆ.

ಇತರರಿಗೆ ಹೋಲಿಸಿದರೆ ಕಡಿಮೆ ಬಡ್ಡಿದರ

ಇತರರಿಗೆ ಹೋಲಿಸಿದರೆ ಕಡಿಮೆ ಬಡ್ಡಿದರ

ಈಗ ಆರಂಭದಲ್ಲಿ ಬ್ಯಾಂಕ್ ವತಿಯಿಂದ ಠೇವಣಿದಾರರಿಗೆ ವಾರ್ಷಿಕವಾಗಿ ಶೇ. 4ರಷ್ಟು ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ. ಏರ್ ಟೆಲ್ ಹಾಗೂ ಇಂಡಿಯಾ ಪೋಸ್ಟ್ ನೀಡುವ ಬಡ್ಡಿ ದರಗಳಿಗೆ ಇದು ಕಡಿಮೆ. ಏರ್ ಟೆಲ್ ಸಂಸ್ಥೆಯು ಶೇ. 7.3ರಷ್ಟು ಬಡ್ಡಿ ನೀಡುವುದಾಗಿ ಘೋಷಿಸಿದ್ದರೆ, ಇಂಡಿಯಾ ಪೋಸ್ಟ್ ಶೇ. 5.5 ರಷ್ಟು ಬಡ್ಡಿ ನೀಡುವುದಾಗಿ ತಿಳಿಸಿದೆ.

ಸದ್ಯಕ್ಕೆ ಯಾವುದೇ ಶುಲ್ಕವಿಲ್ಲ

ಸದ್ಯಕ್ಕೆ ಯಾವುದೇ ಶುಲ್ಕವಿಲ್ಲ

ಅಂದಹಾಗೆ, ಪೇಟಿಎಂ ಬ್ಯಾಂಕ್ ಸಂಸ್ಥೆಯ ಮೊದಲ ಶಾಖೆ ನೊಯ್ಡಾದಲ್ಲಿ ಶುರುವಾಗಿದೆ. ಇದೇ ವರ್ಷದಲ್ಲಿ ದೇಶದ ವಿವಿದೆಡೆ ಶಾಖೆಗಳು ತೆರೆಯಲ್ಪಡಲಿವೆ. ದೇಶಾದ್ಯಂತ know your customer ಸೇವೆಗೆ ಬ್ಯಾಂಕ್ ಚಾಲನೆ ನೀಡಿದೆ.

ಈ ವರ್ಷ ದೇಶದಾದ್ಯಂತ ಸುಮಾರು 31 ಶಾಖೆಗಳನ್ನು ತೆರೆಯಲು ಕಂಪನಿ ಉದ್ದೇಶಿಸಿದೆ. ಇವುಗಳ ಜತೆಯಲ್ಲೇ ಸುಮಾರು 3000 ಕಸ್ಟಮರ್ ಸರ್ವೀಸ್ ಕೇಂದ್ರಗಳನ್ನು ತೆರೆಯಲೂ ಕಂಪನಿ ಚಿಂತನೆ ನಡೆಸಿದೆ.

www.paytmpaymentsbank.com ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಗ್ರಾಹಕರು ತಮಗೆ ಬ್ಯಾಂಕ್ ಖಾತೆಯನ್ನು ತೆರಯಲು ಅನುಕೂಲವಾಗುವ ಆಹ್ವಾನವನ್ನು ತಾವೇ ಪಡೆದುಕೊಳ್ಳಬಹುದು.

5 ಮಿಲಿಯನ್ ಆಫ್ ಲೈನ್ ಠೇವಣಿದಾರರು

5 ಮಿಲಿಯನ್ ಆಫ್ ಲೈನ್ ಠೇವಣಿದಾರರು

ಪೇಟಿಎಂ ಅಪ್ಲಿಕೇಷನ್ ನಲ್ಲಿ ಈವರೆಗೆ ಚಾಲ್ತಿಯಲ್ಲಿದ್ದ ಸುಮಾರು 220 ಮಿಲಿಯನ್ ವ್ಯಾಲೆಟ್ ಗಳನ್ನು ಖಾತೆದಾರರನ್ನಾಗಿ ಪೇಟಿಎಂ ಬದಲಾಯಿಸಿಕೊಂಡಿದೆ. ಕಂಪನಿಗೆ ಈಗ ಸುಮಾರು 5 ಮಿಲಿಯನ್ ಆಫ್ ಲೈನ್ ಠೇವಣಿದಾರರು ಲಭ್ಯವಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರು.ಗಳಿಗಿಂತಲೂ ಅಧಿಕ ವ್ಯವಹಾರ ನಡೆಸಲು ಸಂಸ್ಥೆ ಉದ್ದೇಶಿಸಿದೆ. 2020ರೊಳಗೆ ಸುಮಾರು 500 ಮಿಲಿಯನ್ ಖಾತೆದಾರರನ್ನು ಹೊಂದಲು ಬ್ಯಾಂಕ್ ಉದ್ದೇಶಿಸಿದೆ.

ಎಟಿಎಂನ ಉಚಿತ ಬಳಕೆ 5ಕ್ಕೆ ನಿಗದಿ

ಎಟಿಎಂನ ಉಚಿತ ಬಳಕೆ 5ಕ್ಕೆ ನಿಗದಿ

ಪೇಟಿಎಂ ಬ್ಯಾಂಕ್ ನಲ್ಲಿ ರುಪೇ ಮೂಲಕ ವಾವತಿಸುವ ಅನುಕೂಲ ಕಲ್ಪಿಸಲಾಗಿದೆ. ಮೆಟ್ರೋ ನಗರಗಳ ಹೊರತಾದ ಉಳಿದ ನಗರಗಳಲ್ಲಿನ ಪೇಟಿಎಂ ಗ್ರಾಹಕರಿಗೆ ತಿಂಗಳಿಗೆ ಐದು ಬಾರಿ ಮಾತ್ರ ಉಚಿತವಾಗಿ ಎಟಿಎಂನಿಂದ ಹಣ ಹಿಂಪಡೆಯುವ ಸೌಕರ್ಯ ನೀಡಲಾಗಿದೆ. ಐದು ಉಚಿತ ವ್ಯವಹಾರಗಳ ನಂತರ, ಪ್ರತಿ ಹಣ ಹಿಂಪಡೆತಕ್ಕೆ ರು. 20ರಂದು ಶುಲ್ಕ ವಿಧಿಸಲಾಗುತ್ತದೆ.

ಇಂಡಿಯಾ ಪೋಸ್ಟ್ ಮಾತ್ರ ಕಾರ್ಡ್ ನೀಡಿರೋದು

ಇಂಡಿಯಾ ಪೋಸ್ಟ್ ಮಾತ್ರ ಕಾರ್ಡ್ ನೀಡಿರೋದು

ಹಣ ಹಿಂಪಡೆದ ವಿಚಾರದಲ್ಲಿ ಇಂಡಿಯಾ ಪೋಸ್ಟ್ ಮಾತ್ರ ತನ್ನ ಗ್ರಾಹಕರಿಗೆ ಪ್ರತ್ಯೇಕ ಡಿಬಿಟ್ ಕಾರ್ಡ್ ನೀಡಿ ಇಂಡಿಯೋ ಪೋಸ್ಟ್ ನ ಎಟಿಎಂಗಳಲ್ಲಿ ಹಣ ಹಿಂಪಡೆಯುವ ಸೌಲಭ್ಯ ನೀಡಿದೆ. ಆದರೆ, ಪೇಟಿಂಗ್ ಮತ್ತು ಏರ್ ಟೆಲ್ ಮಾತ್ರ ಹಾಗೆ ಮಾಡಿಲ್ಲ. ಏರ್ ಟೆಲ್ ಸಂಸ್ಥೆಯು ಪ್ರತಿ ಹಿಂಪಡೆತದ ಹಣದ ಮೇಲೆ ಶೇ. 0.65ರಷ್ಟು ಹಣವನ್ನು ಶುಲ್ಕವಾಗಿ ಪಡೆಯುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After a delay of nearly a year, Paytm’s payments bank saw the light of day on Monday. It is the third payments bank in the country, after Airtel and India Post. Here are the FIVE important things about Paytm bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more