ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ಎ ತಂಡ ಧೂಳೀಪಟವಾಗಿದ್ದು ಇವರಿಂದ
IND Vs SL: ದಂಬುಲ್ಲಾದಲ್ಲಿ ಮಂಗಳವಾರ (ಜೂನ್ 9) ನಡೆದ ಏಕದಿನ ತ್ರಿಕೋನ ಸರಣಿಯ ರೋಚಕ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ 'ಎ' ತಂಡದ ವಿರುದ್ಧ ಭಾರತ 'ಎ' ಟೀಮ್ 8 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣವಾದ ಆಟಗಾರರು ಯಾರು ಎನ್ನುವ ಪ್ರಶ್ನೆಗೆ ಉತ್ತ ಇಲ್ಲಿದೆ ನೋಡಿ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 'ಎ' ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರರಾದ ಬಾಲಕ ವೈಭವ್ ಸೂರ್ಯವಂಶಿ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಅಲ್ಪ ರನ್‌ಗಳಿಗೆ ಔಟಾದರು. ಆದರೆ ಬಳಿಕ ಬಂದ ಋತುರಾಜ್ ಗಾಯಕ್ವಾಡ್ ಅವರ ಆಕರ್ಷಕ ಶತಕದ (101 ರನ್) ನೆರವಿನಿಂದ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್‌ಗಳನ್ನು ಪೇರಿಸಿತು. ಆದರೆ ಲಂಕಾ 48.5 ಓವರ್‌ಗಳಿಗೆ 269 ರನ್ ಕಲೆಹಾಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 8 ರನ್‌ಗಳಿಂದ ಸೋಲನುಭವಿಸಿತು.

ಟೀಮ್ ಇಂಡಿಯಾ ಪರ ಮಿಂಚಿದ ಗಾಯಕ್ವಾಡ್
ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿದ ಋತುರಾಜ್ ಗಾಯಕ್ವಾಡ್ ಸ್ಫೋಟಕ ಶತಕ (101) ಸಿಡಿಸಿ ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ತಿಲಕ್ ವರ್ಮಾ ಅವರು ಅರ್ಧಶತಕ (60) ಸಿಡಿಸಿದರು. ಉಳಿದಂತೆ ವೈಭವ್ ಸೂರ್ಯವಂಶಿ 14(12), ಪ್ರಿಯಾಂಶ್ ಆರ್ಯ 32(32), ಆಯುಷ್ ಬದೋನಿ 24(18), ಸೂರ್ಯಾಂಶ್ ಶೆಡ್ಗೆ ಅಜೇಯ 26(14) ರನ್‌ಗಳ ಕೊಡುಗೆ ನೀಡಿದರು.
ಸಹನ್ ಅರಾಚ್ಚಿ ಅರ್ಧಶತಕ ವ್ಯರ್ಥ
ಬಳಿಕ ಬ್ಯಾಟ್ ಬೀಸಿದ ಶ್ರೀಲಂಕಾ ಎ ತಂಡವು ಇನಿಂಗ್ಸ್‌ನ ಬಹುತೇಕ ಸಮಯದವರೆಗೆ ಪಂದ್ಯವನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡಂತೆ ಕಂಡಿತು. ಆದರೆ ಕೊನೆಯ ಕ್ಷಣದಲ್ಲಿ ದಿಕ್ಕು ತಪ್ಪಿ ಸೋಲೊಪ್ಪಿಕೊಂಡಿತು. ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಾಚ್ಚಿಗೆ ಗಳಿಸಿದ 74(72) ರನ್‌ಗಳ ಹೋರಾಟ ವ್ಯರ್ಥವಾಯಿತು.
ಲಂಕಾ ಪರ ಬ್ಯಾಟ್ ಬೀಸಿದ ನಿರೋಶನ್ ಡಿಕ್ವೆಲ್ಲಾ 47(45), ಅವಿಷ್ಕಾ ಫೆರ್ನಾಂಡೋ 45(59), ಸದೀರ ಸಮರವಿಕ್ರಮ 46(51), ಸಹನ್ ಅರಚ್ಚಿಗೆ 74(72), ವನುಜಾ ಸಹನ್ 23(19) ರನ್ ಗಳಿಸಿದರೆ, ಉಳಿದವರು ಒಂದಂಕಿ ದಾಟದೇ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್‌ಗಳನ್ನು ಮಾತ್ರ ಕಲೆಹಾಕಲು ಸಾಧ್ಯವಾಯಿತು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಶರಣಾಯಿತು.
ಭಾರತ ಬೌಲರ್‌ಗಳ ಆರ್ಭಟಕ್ಕೆ ಲಂಕಾ ಧೂಳೀಪಟ
ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿದ ಅರ್ಷದ್ ಖಾನ್, ಅನುಕುಲ್ ರಾಯ್, ಆಯುಷ್ ಬದೋನಿ, ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ ಒಂದು ವಿಕೆಟ್ ಕಬಳಿಸಿ ಶ್ರೀಲಂಕಾ ಬ್ಯಾಟರ್‌ಗಳ ರನ್ ವೇಗಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಭರವಸೆಯ ಆಟಗಾರನಾಗಿದ್ದ ವೈಭವ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಭಾರತ, ಶ್ರೀಲಂಕಾ ಪ್ಲೇಯಿಂಗ್ 11
ಭಾರತ ಎ ಆಡುವ 11ರ ಬಳಗ: ತಿಲಕ್ ವರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಆಯುಷ್ ಬದೊನಿ, ಸೂರ್ಯಾಂಶ್ ಶೇಡ್ಗೆ, ಅರ್ಷದ್ ಖಾನ್, ವಿಪ್ರಜ್ ನಿಗಮ್, ಅನುಕುಲ್ ರಾಯ್, ಅಂಶುಲ್ ಕಾಂಬೋಜ್
ಶ್ರೀಲಂಕಾ ಎ ಆಡುವ 11ರ ಬಳಗ: ಸಹನ್ ಅರಚ್ಚಿಗೆ (ನಾಯಕ), ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಚಮಿಕಾ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜ ಸಹನ್, ವಿಜಯಕಾಂತ್ ವಿಯಸ್ಕಾಂತ್, ಮೊಹ್ಮದ್ ಶಿರಾಜ್, ಗರುಕ ಸಂಕೇತ್.












Click it and Unblock the Notifications