'ಕಾಂಗ್ರೆಸ್ ಮುಖಂಡನಿಂದ ಉದ್ಯಮಿಯ ಹನಿಟ್ರ್ಯಾಪ್: ಕೋಟಿ ಕೋಟಿ ದೋಚಿದ ಇಬ್ಬರ ಬಂಧನ'

ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡನಿಂದಲೇ ಹನಿಟ್ರ್ಯಾಪ್ ನಡೆದಿರುವುದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಉದ್ಯಮಿಯೊಬ್ಬರಿಗೆ ಅಶ್ಲೀಲ ವಿಡಿಯೋ ಮೂಲಕ ಬೆದರಿಸಿ ಕೋಟಿ ಕೋಟಿ ರೂಪಾಯಿ ಹಣ ಸುಲಿಗೆ ಮಾಡಿದ್ದ ಕಾಂಗ್ರೆಸ್ ಯುವ ನಾಯಕ ಸೇರಿ ಇಬ್ಬರನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ಬಂಧಿತ ಆರೋಪಿಗಳಲ್ಲಿ ಓರ್ವ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್, ಮತ್ತೊಬ್ಬ ಜಿತೇಶ್ ಬಂಧಿತರು. ಉದ್ಯಮಿಯೋಬ್ಬರನ್ನು ಜಿತೇಶ್ ಎಂಬಾತ ವಿಡಿಯೋ ಇನ್ನಿತರ ಕಾರಣಗಳನ್ನು ಇಟ್ಟುಕೊಂಡು ನಿರಂತರವಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ. ಸಂತ್ರಸ್ತರಿಂದ ಕೋಟ್ಯಾಂತರ ಹಣ ಸುಲಿಗೆ ಮಾಡುತ್ತಿದ್ದ. ಕಾಂಗ್ರೆಸ್ ಮುಖಂಡ ನಿಝಾಮ್ ಸಹಿತ ಅದೇ ಕಾಯಕವನ್ನು ಮುಂದುವರಿಸಿದ್ದು, ಇದೀಗ ಉದ್ಯಮಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

Mangaluru Youth Congress Leader

ಉದ್ಯಮಿ ಗೆಅಶ್ಲೀಲ ವಿಡಿಯೋ ತೋರಿಸಿ ಬೆದರಿಸಿದ ನಿಝಾಮ್ ಒಟ್ಟು 2.77 ಕೋಟಿ ರೂಪಾಯಿ ವಸೂಲಿ ಮಾಡಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸದ್ಯ ಆಡಳಿತ ಪಕ್ಷದ ಯುವ ನಾಯಕನೊಬ್ಬ ಹನಿಟ್ರ್ಯಾಪ್‌ ಮಾಡಿ ಪೊಲೀಸರ ಅತಿಥಿ ಆಗಿದ್ದು ಭಾರೀ ಸುದ್ದಿಯಾಗಿದೆ. ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಎಕ್ಸ್‌ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದೆ.

"ಡಿಕೆ ಶಿವಕುಮಾರ್ ಸರ್ಕಾರಕ್ಕೆ ಹೊಸ ಸಂಕಷ್ಟ; ಟೂಲ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ''

ಉನ್ನತ ಹುದ್ದೆಗೆ ಏರಲು ಕಾಂಗ್ರೆಸ್‌ನಲ್ಲಿ ಹನಿಟ್ರ್ಯಾಪ್ ಕಡ್ಡಾಯ: ಬಿಜೆಪಿ

ಬಿಜೆಪಿಯು 'ಕರ್ನಾಟಕ ಪ್ರದೇಶ ಹನಿಟ್ರ್ಯಾಪ್ ಕಾಂಗ್ರೆಸ್ ಘಟಕ'ವು ರಾಜ್ಯದಲ್ಲಿ ಕಾಂಗ್ರೆಸ್ ಕರ್ನಾಟಕ ಸಂಘಟನೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಯುವ ಕಾಂಗ್ರೆಸ್‌ ಮುಖಂಡ ನಿಝಾಮ್ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಕೋಟಿ ಕೋಟಿ ವಸೂಲಿ ಮಾಡಿದ್ದಾನೆ'.

ಡಿ.ಕೆ.ಶಿವಕುಮಾರ್ ಅವರೇ, ಹರಿಪ್ರಸಾದ್ ಅವರೇ, ಈ ಹನಿಟ್ರ್ಯಾಪ್ ಮಾಡುವವರೆಲ್ಲಾ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ಗಮನಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಹನಿಟ್ರ್ಯಾಪ್ ಕಡ್ಡಾಯ ಎಂಬ ನಿಯಮವನ್ನೇನಾದರೂ ಬೈಲಾದಲ್ಲಿ ಸೇರಿಸಲಾಗಿದೆ ಎಂಬ ಅನುಮಾನ ಸಾರ್ವಜನಿಕರಿಗೆ ಶುರುವಾಗಿದೆ. ದಯವಿಟ್ಟು ಸಾರ್ವಜನಿಕರ ಅನುಮಾನ ಬಗೆಹರಿಸಿ' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸದರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ಮುಖಭಂಗವಾದಂತಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಏನೆಲ್ಲ ಕ್ರಮ ಕೈಗೊಳ್ಳಲಿದೆ ಎನ್ನುವುದು ರಾಜ್ಯದ ಜನರ ಕೂತೂಹಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+