ಟರ್ನಿಂಗ್ ಪೇಜಸ್ ಫೌಂಡೇಶನ್: ಒತ್ತಡದ ಓದಿಗೆ ಬ್ರೇಕ್, ಕಥೆಗಳ ಮೂಲಕ ಮಕ್ಕಳ ಮನ ಗೆದ್ದ ಮಂಗಳೂರಿನ ಈ ಮೂವರು ಸಹೋದರಿಯರು

ಒಂದು ಕಾಲದಲ್ಲಿ ತರಗತಿಯೊಳಗೆ ಪುಸ್ತಕಗಳನ್ನು ಕಂಡರೆ ಆಸಕ್ತಿ ತೋರದೆ, ಅವುಗಳನ್ನು ಎತ್ತಿ ಎಸೆಯುತ್ತಿದ್ದ ಅದೇ ಮಕ್ಕಳು ಇಂದು ಕಥೆಯ ಸಮಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ತರಗತಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ, ಕಣ್ಣಲ್ಲಿ ಏನನ್ನೋ ಕಲಿಯುವ ಹೊಸ ಕುತೂಹಲ!

ಹೌದು, ಇದು ಯಾವುದೋ ಮಾಂತ್ರಿಕ ಕಥೆಯಲ್ಲ, ಬದಲಾಗಿ ಭಾರತದಾದ್ಯಂತ ಸಾವಿರಾರು ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಮರುಹುಟ್ಟು ಹಾಕುತ್ತಿರುವ 'ಟರ್ನಿಂಗ್ ಪೇಜಸ್ ಫೌಂಡೇಶನ್' ತಂದಿರುವ ಅದ್ಭುತ ಬದಲಾವಣೆ. ಪರೀಕ್ಷೆ, ಅಂಕಗಳೆಂಬ ಒತ್ತಡದ ನಡುವೆ ಕಳೆದುಹೋಗಿದ್ದ ಓದಿನ ಖುಷಿಯನ್ನು ಈ ಸಂಸ್ಥೆ ಈಗ ಮತ್ತೆ ಚಿಗುರಿಸುತ್ತಿದೆ.

Turning Pages Foundation

ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ: ಮೂವರು ಸಹೋದರಿಯರ ಕನಸಿನ ಕೂಸು

ಮಂಗಳೂರಿನ ಸಹೋದರಿಯರಾದ ಬಂಟಿ ಪೈ, ಮಾಧುರಿ ಪೈ ಹಾಗೂ ಅವರ ಸಂಬಂಧಿ ನಯನಾ ಪೈ ಸೇರಿ ಹುಟ್ಟುಹಾಕಿದ ಸಂಸ್ಥೆಯೇ ಈ ಟರ್ನಿಂಗ್ ಪೇಜಸ್ ಫೌಂಡೇಶನ್. ತಮ್ಮ ಬಾಲ್ಯದಲ್ಲಿ ಪುಸ್ತಕಗಳೊಂದಿಗೆ ಕಳೆದ ಸುಂದರ ಕ್ಷಣಗಳೇ ಇವರಿಗೆ ಪ್ರೇರಣೆ. ಓದು ಎನ್ನುವುದು ಎಂದಿಗೂ ಮನೆಯ ಕೆಲಸ ಆಗಿರಬಾರದು, ಅದು ಖುಷಿ ಕೊಡುವ, ಕುತೂಹಲ ಕೆರಳಿಸುವ ಅನುಭವವಾಗಬೇಕು ಎಂಬುದು ಇವರ ದೃಢವಾದ ನಂಬಿಕೆ.

NEET ಎಕ್ಸಾಮೇ ಅಂತಿಮವಲ್ಲ ಎಂದು ಜಗತ್ತಿಗೆ ತೋರಿಸಿದ ತೀರ್ಥಹಳ್ಳಿಯ ಕುವರಿ: ಇಂದು ರೋಲ್ಸ್ ರಾಯ್ಸ್‌ನಲ್ಲಿ ಕೈತುಂಬಾ ಸಂಬಳ
NEET ಎಕ್ಸಾಮೇ ಅಂತಿಮವಲ್ಲ ಎಂದು ಜಗತ್ತಿಗೆ ತೋರಿಸಿದ ತೀರ್ಥಹಳ್ಳಿಯ ಕುವರಿ: ಇಂದು ರೋಲ್ಸ್ ರಾಯ್ಸ್‌ನಲ್ಲಿ ಕೈತುಂಬಾ ಸಂಬಳ

ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಮಧ್ಯಪ್ರದೇಶದ ಸರ್ಕಾರಿ, ಅನುದಾನಿತ ಹಾಗೂ ಕಡಿಮೆ ಆದಾಯದ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಈಗಾಗಲೇ 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ. 150 ಶಿಕ್ಷಕರಿಗೆ ತರಬೇತಿ ನೀಡಿ, ಸುಮಾರು 15,000 ಪುಸ್ತಕಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ವಲಯದಲ್ಲಿ ದೊಡ್ಡದೊಂದು ಓದಿನ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.

ಅಂಕಗಳಾಚೆಗಿನ ಓದಿನ ಪ್ರಪಂಚ

ಭಾರತದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿರುವ ಬಹುದೊಡ್ಡ ಸಮಸ್ಯೆಯೆಂದರೆ, ಮಕ್ಕಳು ಓದುವುದನ್ನು ಕೇವಲ ಪರೀಕ್ಷೆಗಾಗಿ ಮಾತ್ರ ಸೀಮಿತಗೊಳಿಸಿರುವುದು. ಐದನೇ ತರಗತಿಯಲ್ಲಿದ್ದರೂ ಎರಡನೇ ತರಗತಿಯ ಪಠ್ಯವನ್ನು ಸರಾಗವಾಗಿ ಓದಲು ಕಷ್ಟಪಡುವ ಮಕ್ಕಳಿದ್ದಾರೆ. ಈ ಮನಸ್ಥಿತಿಯನ್ನು ಬದಲಾಯಿಸಲು ಸಂಸ್ಥೆಯು ತರಗತಿಯೊಳಗೆ 'ಡ್ರಾಪ್ ಎವೆರಿಥಿಂಗ್ ಅಂಡ್ ರೀಡ್' (DEAR) ಎಂಬ ವಿಶೇಷ ಅವಧಿಯನ್ನು ಪರಿಚಯಿಸಿದೆ.

Turning Pages Foundation

ದಿನದ 20-30 ನಿಮಿಷಗಳನ್ನು ಕೇವಲ ಕಥೆ ಓದಲು, ಚರ್ಚಿಸಲು ಹಾಗೂ ಕಲ್ಪನಾಶಕ್ತಿಗೆ ಬಿಡಲಾಗುತ್ತದೆ. ಉದಾಹರಣೆಗೆ, ಅಂಧ ಹುಡುಗನೊಬ್ಬ ಹೆಜ್ಜೆಗಳನ್ನು ಎಣಿಸುತ್ತಾ ಸಾಗುವ ಕಥೆಯನ್ನು ಕೇಳಿದ ಮಕ್ಕಳು, ತಾವೂ ಶಾಲೆಯ ಆವರಣದಲ್ಲಿ ಹೆಜ್ಜೆಗಳನ್ನು ಎಣಿಸುತ್ತಾ ಆತನ ಅನುಭವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದು ಈ ಕಾರ್ಯಕ್ರಮದ ಜೀವಂತಿಕೆಗೆ ಸಾಕ್ಷಿ.

ಶಿಕ್ಷಕರಿಗೆ ತರಬೇತಿ

ಈ ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ ಎಂದರೆ ಶಾಲೆಯ ಶಿಕ್ಷಕರು. ಹೊರಗಿನ ಸ್ವಯಂಸೇವಕರ ಮೇಲೆ ಅವಲಂಬಿತರಾಗುವ ಬದಲು, ಶಾಲೆಯ ಶಿಕ್ಷಕರಿಗೇ ಸಂಸ್ಥೆ ವಿಶೇಷ ತರಬೇತಿ ನೀಡುತ್ತದೆ. ಕಥೆ ಓದುವಾಗ ಧ್ವನಿ ಏರಿಳಿತ, ಮಕ್ಕಳೊಂದಿಗೆ ಬೆರೆಯುವ ವಿಧಾನಗಳ ಬಗ್ಗೆ ಮೂರು ದಿನಗಳ ತರಬೇತಿ ನೀಡಲಾಗುತ್ತದೆ.

ಇದರ ಪರಿಣಾಮವಾಗಿ, ತರಗತಿಯಲ್ಲಿ ಕೇವಲ ಶಿಕ್ಷಕರು ಮಾತ್ರ ಮಾತನಾಡುವ ಬದಲು, ಈಗ ಮಕ್ಕಳು ಮುಕ್ತವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. "ಈ ಕಥೆ ನಿಜವೇ?", "ಆ ಪಾತ್ರ ಹಾಗೇಕೆ ಮಾಡಿತು?" ಎಂದು ಕಥೆಯ ಪಾತ್ರಗಳ ಬಗ್ಗೆ ನಿರ್ಭೀತಿಯಿಂದ ಚರ್ಚಿಸುತ್ತಾರೆ.

ಮಕ್ಕಳಲ್ಲಿ ಹೆಚ್ಚಿದ ಕಲಿಕೆಯ ಆಸಕ್ತಿ: ಮನೆಗೂ ತಲುಪಿದ ಕಥೆಗಳ ಕಂಪನ

ಶಾಲೆಗಳಲ್ಲಿ ಶುರುವಾದ ಈ ಬದಲಾವಣೆ ಈಗ ಮಕ್ಕಳ ಮನೆಗಳಿಗೂ ತಲುಪಿದೆ. ಆಟಿಸಂ ಅಥವಾ ಕಲಿಕೆಯಲ್ಲಿ ಸ್ವಲ್ಪ ಹಿಂದಿರುವ ಮಕ್ಕಳು ಕೂಡ ಕಥೆಯ ಅವಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.

JEE ಪರೀಕ್ಷೆಯಲ್ಲಿ ಫೇಲ್ ಆಗಿದ್ದವರು ಇಂದು ಐಐಟಿ ಮದ್ರಾಸ್ ನಿರ್ದೇಶಕ! ಇದು ಪದ್ಮಶ್ರೀ ಪ್ರೊ. ಕಾಮಕೋಟಿ ಯಶೋಗಾಥೆ
JEE ಪರೀಕ್ಷೆಯಲ್ಲಿ ಫೇಲ್ ಆಗಿದ್ದವರು ಇಂದು ಐಐಟಿ ಮದ್ರಾಸ್ ನಿರ್ದೇಶಕ! ಇದು ಪದ್ಮಶ್ರೀ ಪ್ರೊ. ಕಾಮಕೋಟಿ ಯಶೋಗಾಥೆ

ಕೇವಲ ಅಂಕಗಳ ಆಧಾರದ ಮೇಲೆ ಮಕ್ಕಳ ಬುದ್ಧಿಮತ್ತೆಯನ್ನು ಅಳೆಯುವ ಬದಲು, ಅವರು ಸ್ವಯಂಪ್ರೇರಿತರಾಗಿ ಪುಸ್ತಕಗಳನ್ನು ಹಿಡಿಯುವಂತೆ ಮಾಡುವುದೇ ಟರ್ನಿಂಗ್ ಪೇಜಸ್ ಫೌಂಡೇಶನ್‌ನ ಅತಿ ದೊಡ್ಡ ಸಾಧನೆ. ಇದು ಕೇವಲ ಅಕ್ಷರ ಜ್ಞಾನದ ಹೋರಾಟವಲ್ಲ, ಬದಲಾಗಿ ಮಕ್ಕಳ ಕಲ್ಪನಾ ಜಗತ್ತಿಗೆ ಬಣ್ಣ ತುಂಬುವ, ಆತ್ಮವಿಶ್ವಾಸ ಹೆಚ್ಚಿಸುವ ಸುಂದರ ಪಯಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+