ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್, 30 : ಐನೂರು-ಸಾವಿರ ನೋಟುಗಳು ಬಂದ್ ಆಗಿದ್ದರೇನಂತೆ ಚಿಂತೆ ಬಿಡಿ ಪೆಟಿಎಂ ಇದೆಯಲ್ಲ. ನಿಮ್ಮ ದಿನನಿತ್ಯದ ಅಗತ್ಯತೆಗಳನ್ನು ನಗದು ಹಣದಿಂದಲೇ ಪೂರೈಸಿಕೊಳ್ಳುವ ಅನಿವಾರ್ಯತೆ ಇಲ್ಲ. ಪೆಟಿಎಂ ಮೂಲಕ ನೀವು ಬಿಲ್ ಗಳನ್ನು ಪಾವತಿಸಬಹುದಾಗಿದೆ.

ಹಾಗೂ ಈ ಪೇಟಿಎಂನಿಂದ ಸುಲಭವಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ. ಪೇಟಿಯಂನಿಂದ ನೀವು ರಿಯಾಯಿತಿ ಪಡೆಯಬಹುದು.[ವಾಲೆಟ್ ಗಳಿರುವಾಗ ಎಟಿಎಂಗಳ ಮುಂದೆ ಕ್ಯೂ ನಿಲ್ಲಬೇಡಿ]

ಸಿನಿಮಾ ಟಿಕೆಟ್, ಬಿಲ್ ಪಾವತಿ ಹಾಗೂ ಮತ್ತಿತರ ಒನ್ ಇಂಡಿಯಾ ಕೂಪನ್ ನೊಂದಿಗೆ ಕ್ಯಾಶ್ ಬ್ಯಾಕ್ ಆಫರ್ಸ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

How to use Paytm Wallet for Bill Payments and Cash Transfers

ಪೇಟಿಎಂನಲ್ಲಿ ಯಾವ-ಯಾವ ವಾಲೆಟ್ ವಿಧಗಳಿವೆ ತಿಳಿಯಿರಿ:
* Minimum KYC Wallet: ಈ ವಾಲೆಟ್ ನಲ್ಲಿ ನೀವು ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ರಿಜಿಸ್ಟರ್ ಮಾಡಬೇಕು. ನಂತರ ತಿಗಳಿಗೆ 10000 ರುವರೆಗೆ ನಿಮ್ಮ ಪೇಟಿಎಂ ನೆರವು ಪಡೆದುಕೊಂಡು ಬಿಲ್ ಪಾವತಿಸಬಹುದು ಅಥವಾ ನಿಮ್ಮ ದಿನನಿತ್ಯಕ್ಕೆ ಬಳಸಿಕೊಳ್ಳಬಹುದು. ಇನ್ನೊಂದು ಮುಖ್ಯವಾದ ಅಂಶವೆಂದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ತಿಂಗಳಿಗೆ 25,000 ರುಗಳನ್ನು ಈ ಮಿನಿಮಮ್ ಕೆವೈಸಿ ವಾಲೆಟ್ ನಿಂದ ವರ್ಗಾವಣೆ ಮಾಡಬಹುದು.

* Full KYC Wallet: ನಿಮ್ಮ ಪೇಟಿಯಂ ಗರಿಷ್ಠ ಮಿತಿ ಹಣ ಅಂದರೆ 1 ಲಕ್ಷದ ವರೆಗೆ ಪಡೆದುಕೊಳ್ಳಬೇಕಾದರೆ ನೀವು ಅಗತ್ಯ ದಾಖಲೆಗಳನ್ನು ಆರ್ ಬಿಐಗೆ ಸಲ್ಲಿಸಿ ನಿಮ್ಮ ಪೇಟಿಯಂನಲ್ಲಿ 1 ಲಕ್ಷದ ವರೆಗೆ ವ್ಯವಹರಿಸಬಹಹುದು. ಇನ್ನು ನಿಮ್ಮ ಪೇಟಿಯಂನಿಂದ ಮತ್ತೊಬ್ಬರ ಪೇಟಿಯಂಗೆ Full KYC Walletನಲ್ಲಿ ಒಂದು ತಿಂಗಳಲ್ಲಿ 25,0000 ರುವರೆಗೆ ರವಾನಿಸಬಹುದು.

ಹಣವನ್ನು ನಿಮ್ಮ ವಾಲೆಟ್ ಗೆ ಸೇರಿಸುವುದು ಹೇಗೆ?
* ನೀವು ಮೊದಲಿಗೆ ಪೇಟಿಯಂಗೆ ಲಾಗಿನ್ ಆಗಿ. ಹಣ ಎಂಟ್ರಿ ಮಾಡಿ ನಂತರ add Money ಬಟನ್ ಕ್ಲಿಕ್ ಮಾಡಬೇಕು.
* ನಿಮಗೆ ಆ ಹಣಬೇಕಿದ್ದರೆ ನೀವು ಕೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
* ನಂತರ ನೀವು ಹಣದ ಡಿಟೇಲ್ ತುಂಬಿ. ನಂತರ CVV ಮತ್ತು OTP ಹಾಕಿದರೆ ಸಾಕು ಹಣ ಪೇಟಿಎಂ ವಾಲೆಟ್ ಗೆ ಬಂದು ಬೀಳಲಿದೆ.
* ನಿಮ್ಮ ವಾಲೆಟ್ ಗೆ ಬಂದ ಹಣದಿಂದ ನೀವು ಬಿಲ್ ಗಳು, ಅಂಗಡಿಗಳಲ್ಲಿ, ಶಾಪಿಂಗ್ ಮಾಲ್ ಗಳಲ್ಲಿ ಉಪಯೋಗಿಸಬಹುದು.

ಪೇಟಿಎಂ ವಾಲೆಟ್ ನಿಂದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಹೇಗೆ?
* ಇದು ಕೇವಲ ಪೇಟಿಯಂ ಅಪ್ ಮೂಲಕ ಮಾಡಬಹುದು. paytm.com ಮೂಲಕ ಮಾಡಲು ಬರುವುದಿಲ್ಲ ಇದು ನಿಮಗೆ ತಿಳಿದಿರಲಿ.
* ಪೇಟಿಎಂ ಅಪ್ ಓಪನ್ ಮಾಡಿದರೆ ಮೇಲೆ ಇರುವ 'Pay or Send' ಮೇಲೆ ಕ್ಲಿಕ್ ಮಾಡಿ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.
* ನಂತರ ನೀವು Beneficiary, ಅಕೌಂಟ್ ನಂಬರ್, ಆ ಬ್ಯಾಂಕ್ ಬ್ರಾಂಚ್ ನ ಐಎಫ್ ಎಸ್ ಸಿ ಕೋಡ್ ಹಾಕಿ ಟಾಪ್ ನಲ್ಲಿರುವ Send ಎನ್ನಬೇಕು.
* Send ಆಗಿದ ನಂತರ Congratulations! Your Money will be successfully transferred to the bank account ಎಂದು ಬರುತ್ತದೆ.

ಪೇಟಿಎಂ ವಾಲೆಟ್ ನಿಂದ ಮೊಬೈಲ್ ನಂಬರ್ ಗೆ ಹಣ ವರ್ಗಾವಣೆ ಮಾಡುವುದು ಹೇಗೆ?
* ಪೇಟಿಎಂ ಅಪ್ ಓಪನ್ ಮಾಡಿದರೆ ಮೇಲೆ ಇರುವ 'Pay or Send' ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಆಯ್ಕೆ ಮಾಡಿ.
* ನಂತರ ಮೊಬೈಲ್ ನಂಬರ್ ಟೈಪ್ ಮಾಡಿ. ಹಣ ಎಂಟ್ರಿ ಮಾಡಬೇಕು.
* ಟಾಪ್ ನಲ್ಲಿರುವ Send ಬಟನ್ ಒತ್ತುವ ಮುನ್ನ ನಿಮ್ಮ ಪೇಟಿಎಂ ವಾಲೆಟ್ ನಲ್ಲಿ ಬ್ಯಾಲೆನ್ಸ್ ನೋಡಿಕೊಂಡು Send ಬಟನ್ ಕ್ಲಿಕ್ ಮಾಡಿ.
* Congratulations! you will be notified via SMS/Email informing that they have received the money ಎಂದು ಮೆಸೇಜ್ ಅಥವಾ ಇಮೇಲ್ ಬರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How to use Paytm Wallet. What are the types of Paytm Wallet?, How Do I Add Money To the Paytm Wallet?, How can I transfer money from Paytm wallet to bank account?, How can I transfer money from Paytm wallet to Mobile Number?.and more.
Please Wait while comments are loading...