Daily Horoscope June 5: ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶ, ವ್ಯವಹಾರದಲ್ಲಿ ಲಾಭ
Today's Horoscope: ಜೂನ್ 05 ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮಗೆ ಒಳಿತು ತರುತ್ತಾರೆ. ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ಎಂಬುದನ್ನು ಇಲ್ಲಿ ತಿಳಿಯಿರಿ.
ಮೇಷ ರಾಶಿ
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷವನ್ನು ತರುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಕೆಲಸದಲ್ಲಿ ನಿಮ್ಮ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ಹೊಸ ಅನುಭವಗಳು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.

ವೃಷಭ ರಾಶಿ
ಉತ್ಸಾಹ, ಪ್ರಗತಿ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವ ಸೂಚನೆಗಳಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ.
ಮಿಥುನ ರಾಶಿ
ಇಂದು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಬರುವುದು. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಆಲೋಚನೆಗಳು ನಿಮ್ಮ ಗುರಿ ತಲುಪಲು ಸಹಾಯ ಮಾಡುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು.
ಕಟಕ ರಾಶಿ
ಸಂವಹನ, ಸಂಪರ್ಕಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಅನುಕೂಲಕರ ದಿನ. ಮಾತನಾಡುವ ವಿಧಾನವು ಇತರರನ್ನು ಮೆಚ್ಚಿಸುತ್ತದೆ. ಹೊಸ ಅವಕಾಶಗಳು ಮತ್ತು ಹೊಸ ಸಂಪರ್ಕಗಳ ಸಾಧ್ಯತೆ ಇದೆ. ಕೆಲವು ಸಣ್ಣ ಸವಾಲುಗಳನ್ನು ಎದುರಿಸಿದರೂ, ಬುದ್ಧಿವಂತಿಕೆಯಿಂದ ಅವುಗಳನ್ನು ಪರಿಹರಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ ರಾಶಿ
ಸ್ಥಿರತೆ, ತಾಳ್ಮೆ ಮತ್ತು ಉತ್ತಮ ಫಲಿತಾಂಶಗಳನ್ನು ತರುವ ದಿನ. ದೀರ್ಘ ಯೋಜಿತ ಕೆಲಸಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ. ಕುಟುಂಬದಲ್ಲಿ ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೂಡಿಕೆ ಆಡುವಾಗ ಆತುರ ಬೇಡ. ತಾಳ್ಮೆ ಮತ್ತು ಆಲೋಚನಾ ವಿಧಾನವು ಯಶಸ್ಸಿಗೆ ಕಾರಣವಾಗುತ್ತದೆ.
ಕನ್ಯಾ ರಾಶಿ
ಗುರಿಗಳತ್ತ ವೇಗವಾಗಿ ಹೆಜ್ಜೆ ಇಡುವಿರಿ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷವನ್ನು ತರುತ್ತದೆ.
ತುಲಾ ರಾಶಿ
ಹೊಸ ಆಲೋಚನೆಗಳು ಮತ್ತು ಅವಕಾಶಗಳು ಬರುತ್ತವೆ. ಕೆಲಸದಲ್ಲಿ ನಿಮ್ಮ ಸಲಹೆಗಳನ್ನು ಪ್ರಶಂಸಿಸಲಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಧ್ಯಾನ ಮಾಡಿ. ಶಿಸ್ತಿನಿಂದ ಮುನ್ನಡೆದರೆ, ಯಶಸ್ಸು ನಿಮ್ಮದಾಗುತ್ತದೆ.
ವೃಶ್ಚಿಕ ರಾಶಿ
ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಬರಲಿವೆ. ಕಠಿಣ ಪರಿಶ್ರಮವನ್ನು ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ಮೆಚ್ಚುತ್ತಾರೆ. ಆರೋಗ್ಯಕ್ಕೆ ಆದ್ಯತೆ ನೀಡಿ.
ಧನು ರಾಶಿ
ನೀವು ಎಲ್ಲಾ ಕೋನಗಳಿಂದಲೂ ಸಮಸ್ಯೆಗಳ ಬಗ್ಗೆ ಯೋಚಿಸುವಿರಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಸಣ್ಣ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವುದು.
ಮಕರ ರಾಶಿ
ಆತ್ಮಾವಲೋಕನ ಮತ್ತು ವೈಯಕ್ತಿಕ ಬೆಳವಣಿಗೆಗೆ ಒಳ್ಳೆಯ ದಿನ. ಹೊಸ ಆಲೋಚನೆಗಳು ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಬಹುದು. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಬಾಂಧವ್ಯ ಬಲಗೊಳ್ಳುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ಅವಕಾಶಗಳು ಯಶಸ್ಸನ್ನು ತರಬಹುದು.
ಕುಂಭ ರಾಶಿ
ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ. ಕುಟುಂಬ ಸದಸ್ಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಭವಿಷ್ಯದ ಯೋಜನೆಗಳತ್ತ ಗಮನಹರಿಸಲು ಇದು ಒಳ್ಳೆಯ ಸಮಯ.
ಮೀನ ರಾಶಿ
ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ಸಾಮಾಜಿಕ ಜೀವನದಲ್ಲಿ ನಿಮಗೆ ಉತ್ತಮ ಮನ್ನಣೆ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬರುವ ಅವಕಾಶಗಳನ್ನು ಬಳಸಿಕೊಳ್ಳಿ.
(ಬರಹ: ರಂಜಿತಾ ಆರ್.ಕೆ)












Click it and Unblock the Notifications