ಜೂ.15ರಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿಲ್ಲ
ನವದೆಹಲಿ, ಜೂ.15: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಮಂಗಳವಾರ (ಜೂನ್ 15) ದಂದು ಪರಿಷ್ಕರಣೆಯಾಗಿಲ್ಲ. ಆದರೆ, ಮೇ 4ರಿಂದ ಇಲ್ಲಿ ತನಕ ಒಟ್ಟಾರೆ 25ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಜೂನ್ 14ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 28 ರಿಂದ 29 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 30 ರಿಂದ 31 ಪೈಸೆಯಷ್ಟು ಏರಿಕೆಯಾಗಿತ್ತು.
ಜೂನ್ 9ರಂದು ಸರಾಸರಿ 23-25 ಪೈಸೆ ಏರಿಕೆಯಾಗಿತ್ತು. ಜೂನ್ 11ರಂದು ಪೆಟ್ರೋಲ್ ಬೆಲೆ 31 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ 28 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿತ್ತು. ನಂತರ ಎರಡು ದಿನ ಏರಿಕೆಯಾಗಿ ಹಲವೆಡೆ ಪೆಟ್ರೋಲ್, ಡೀಸೆಲ್ ಎರಡರ ಬೆಲೆ 100 ರು ಗಡಿ ದಾಟಿತ್ತು. ಆದರೆ, ಜೂನ್ 15ರಂದು ದರದಲ್ಲಿ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ ದರ ಮಂಗಳವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 96.41ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 87.28ರು ಆಗಿದೆ.
ಒಂದು ತಿಂಗಳಲ್ಲಿ ಪೆಟ್ರೋಲ್ 7 ರು ಹಾಗೂ ಡೀಸೆಲ್ 8 ರು ಗೂ ಅಧಿಕ ಮೊತ್ತದಷ್ಟು ಏರಿಕೆಯಾಗಿದೆ. ಮೇ ತಿಂಗಳಲ್ಲಿ 2021ರಲ್ಲಿ ದೇಶದೆಲ್ಲೆಡೆ ಪೆಟ್ರೋಲ್ 16ರು ಹಾಗೂ ಡೀಸೆಲ್ 18 ರು ಏರಿಕೆಯಾಗಿತ್ತು.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ
ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 102.58ರು ಪ್ರತಿ ಲೀಟರ್, ಡೀಸೆಲ್ 94.70ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಮೇ 29ರಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ 100ರು ಗಡಿ ದಾಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಲಡಾಕ್ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 107.48ರು ನಷ್ಟಿದೆ, ಡೀಸೆಲ್ ಬೆಲೆ 100.29ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡು 72.99ಯುಎಸ್ ಡಾಲರ್(1 USD=73.25ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ನಗರ-ಇಂಧನ ದರ ಪ್ರತಿ ಲೀಟರ್ ರುಗಳಲ್ಲಿ
ನವದೆಹಲಿ: ಪೆಟ್ರೋಲ್ 96.41ರು- ಡೀಸೆಲ್ 87.28ರು
ಕೋಲ್ಕತಾ: ಪೆಟ್ರೋಲ್ 96.34ರು- ಡೀಸೆಲ್ 90.12ರು
ಮುಂಬೈ: ಪೆಟ್ರೋಲ್ 102.58ರು- ಡೀಸೆಲ್ 94.70ರು
ಚೆನ್ನೈ: ಪೆಟ್ರೋಲ್ 97.69ರು- ಡೀಸೆಲ್ 91.92ರು
ಬೆಂಗಳೂರು: ಪೆಟ್ರೋಲ್ 99.63ರು- ಡೀಸೆಲ್ 92.52ರು
ತಿರುವನಂತಪುರಂ: ಪೆಟ್ರೋಲ್ 98.39ರು- ಡೀಸೆಲ್ 93.74ರು
ಪಾಟ್ನ: ಪೆಟ್ರೋಲ್ 98.49ರು- ಡೀಸೆಲ್ 92.59ರು
ಹೈದರಾಬಾದ್: ಪೆಟ್ರೋಲ್ 99.62ರು- ಡೀಸೆಲ್ 95.14ರು
ನೋಯ್ಡಾ: ಪೆಟ್ರೋಲ್ 93.71ರು- ಡೀಸೆಲ್ 87.73ರು
ಜೈಪುರ: ಪೆಟ್ರೋಲ್ 102.99ರು- ಡೀಸೆಲ್ 96.20ರು

ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಎಷ್ಟು
ಮೇ 2020ರಿಂದ ಇಂದಿನ ತನಕ ಪೆಟ್ರೋಲ್ ದರ 20 ರು ಹೆಚ್ಚಾಗಿದೆ. ಕಚ್ಚಾತೈಲ ಬೆಲೆ ಮೇ 2020ರಲ್ಲಿ 31 ಯುಎಸ್ ಡಾಲರ್ ಇದ್ದಿದ್ದು ಈಗ ಸರಾಸರಿ 66ಡಾಲರ್ ಆಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೂಡಾ ಪೆಟ್ರೋಲ್ ಮೇಲೆ 13, ಡೀಸೆಲ್ ಮೇಲೆ 16 ರು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ಮೇ 1, 2020ರಂದು ದೆಹಲಿಯಲ್ಲಿ ಪೆಟ್ರೋಲ್ ದರ 69.59ರು ಇತ್ತು, ಡೀಸೆಲ್ ರೀಟೈಲ್ ದರ 62.29 ರು ಇತ್ತು. ಜೊತೆಗೆ ತೆರಿಗೆ ರಹಿತ ದರ 27.95 ಪ್ರತಿ ಲೀಟರ್, ಡೀಸೆಲ್ 24.85ಪ್ರತಿ ಲೀಟರ್ ನಷ್ಟಿತ್ತು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 77 ಪೈಸೆ ಹಾಗೂ 74 ಪೈಸೆ ಪ್ರತಿ ಲೀಟರ್‌ಗೆ ಏರಿಕೆ ಕಂಡಿತ್ತು. 2021ರಲ್ಲಿ ಒಟ್ಟಾರೆ, ದೇಶದೆಲ್ಲೆಡೆ ಪೆಟ್ರೋಲ್ 11ರು ಹಾಗೂ ಡೀಸೆಲ್ 12 ರು ಏರಿಕೆಯಾಗಿದೆ.

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.