Gold and Silver Price: ತಿಂಗಳಾಂತ್ಯದಲ್ಲಿ ಎಷ್ಟಿದೆ 22 ಕ್ಯಾರಟ್ ಬಂಗಾರದ ಬೆಲೆ?

ಆಶಾಢ ಕಳೆದು ಶ್ರಾವಣ ಬಂತು.. ಹಾಗೆಯೇ ಶ್ರಾವಣದಲ್ಲಿ ಚಿನ್ನ ಖರೀದಿಗೆ ಜನ ಕೂಡ ಮುಗಿಬಿದ್ದರು. ಇದರ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಳಿತ ಕಾಣುತ್ತಲೇ ಇದೆ. ಆದ್ರೆ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಹಳದಿ ಲೋಹ ಮಾತ್ರ ಭರ್ಜರಿ ಏರಿಕೆ ಕಂಡಿದೆ.

ಆಭರಣ ಪ್ರಿಯರು ಚಿನ್ನ ಖರೀದಿಸುವ ಮೂನ್ನ ಇಂದಿನ ಚಿನ್ನ ಮತ್ತು ಬೆಳ್ಳಿ ದರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗಸ್ಟ್ 30ರ ಇಂದಿನ ಮಾರುಕಟ್ಟೆಯಲ್ಲಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಹಾಗೂ ಹಬ್ಬದ ಸೀಸನ್‌ನ ಬೇಡಿಕೆಯು ಆಭರಣಗಳ ದರದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಕಂಡು ಬರುತ್ತದೆ.

MCX Gold and Silver Price Today August 30 Bengaluru Rates Update Check City-Wise 22K Gold Price

ಇಂದಿನ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರ ಹೀಗಿದೆ

ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರವು ಸ್ಥಿರತೆಯನ್ನ ಕಾಯ್ದುಕೊಂಡಿದೆ. ಇಂದಿನ ವರದಿಯ ಪ್ರಕಾರ, 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 14,505 ರೂಪಾಯಿ ನಿಗದಿಯಾಗಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,45,050 ರೂಪಾಯಿ ಇದೆ. ಇನ್ನು ಶುದ್ಧ ಚಿನ್ನ ಅಥವಾ 24 ಕ್ಯಾರಟ್ ಬಂಗಾರದ ಬಗ್ಗೆ ಹೇಳುವುದಾದರೆ, 1 ಗ್ರಾಂಗೆ 15,824 ರೂಪಾಯಿ ಹಾಗೂ 10 ಗ್ರಾಂಗೆ 1,58,240 ರೂಪಾಯಿ ದರದಲ್ಲಿ ವಹಿವಾಟು ನಡೆಯುತ್ತಿದೆ.

ಇಂದಿನ ಬೆಳ್ಳಿ ದರ

ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿಯ ಬೆಲೆಯೂ ಹೆಚ್ಚಾಗುತ್ತದೆ. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಇದೆ. ಬೆಂಗಳೂರಿನಲ್ಲಿ ಇಂದಿನ 1 ಗ್ರಾಂ ಬೆಳ್ಳಿಯ ಬೆಲೆ 255 ರೂಪಾಯಿ ಇದೆ. ಹೀಗಾಗಿ 10 ಗ್ರಾಂ ಬೆಳ್ಳಿಗೆ 2,550 ರೂಪಾಯಿ ಹಾಗೂ 1 ಕೆಜಿ ಬೆಳ್ಳಿಗೆ 2,55,000 ರೂಪಾಯಿ ಬೆಲೆ ನಿಗದಿಯಾಗಿದೆ

ಪ್ರಮುಖ ನಗರಗಳಲ್ಲಿ ಇಂದಿನ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ

ದೇಶಾದ್ಯಂತ ಸ್ಥಳೀಯ ತೆರಿಗೆಗಳು ಹಾಗೂ ಮೇಕಿಂಗ್ ಚಾರ್ಜ್‌ಗಳ ಆಧಾರದ ಮೇಲೆ ಚಿನ್ನದ ದರದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಪ್ರಮುಖ ನಗರಗಳ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ ಈ ಕೆಳಗಿನಂತಿದೆ:

* ಬೆಂಗಳೂರು - 14,505 ರೂಪಾಯಿ

* ದೆಹಲಿ - 14,520 ರೂಪಾಯಿ

* ಚೆನ್ನೈ - 14,505 ರೂಪಾಯಿ

* ಮುಂಬೈ - 14,505 ರೂಪಾಯಿ

* ಹೈದರಾಬಾದ್ - 14,505 ರೂಪಾಯಿ

* ಅಹಮದಾಬಾದ್ - 14,510 ರೂಪಾಯಿ

* ಪುಣೆ - 14,505 ರೂಪಾಯಿ

* ಕೋಲ್ಕತ್ತಾ - 14,505 ರೂಪಾಯಿ

ನಿನ್ನೆಗೂ ಮತ್ತು ಇಂದಿಗೂ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ನಿನ್ನೆ (ಆಗಸ್ಟ್ 29) ಬೆಂಗಳೂರು ಮಾರುಕಟ್ಟೆಯಲ್ಲಿ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 14,505 ರೂಪಾಯಿ ಇತ್ತು, ಇಂದು ಕೂಡ ಮಾರುಕಟ್ಟೆಯಲ್ಲಿ ಅದೇ ಬೆಲೆ ಮುಂದುವರಿದಿದೆ.

ಅದೇ ರೀತಿ ಬೆಳ್ಳಿ ಬೆಲೆಯನ್ನು ಗಮನಿಸಿದರೆ, ನಿನ್ನೆ 1 ಕೆಜಿ ಬೆಳ್ಳಿಗೆ 2,55,000 ರೂಪಾಯಿ ಇತ್ತು, ಇಂದು ಸಹ ಅದೇ ದರದಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಏರಿಕೆಯಾಗದ ಕಾರಣ ಗ್ರಾಹಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

22 ಕ್ಯಾರಟ್ ಬಂಗಾರದ ಬೆಲೆ 1 ಗ್ರಾಂಗೆ 14,505 ರೂ. ಇದ್ದರೆ, 1 ಕೆಜಿ ಬೆಳ್ಳಿ ದರ 2,55,000 ರೂ. ದಲ್ಲಿ ಸ್ಥಿರವಾಗಿದೆ. ನಿನ್ನೆಯ ದರಗಳಿಗೆ ಹೋಲಿಸಿದರೆ ಇಂದು ಯಾವುದೇ ಬದಲಾವಣೆ ಆಗದಿರುವುದು ಗ್ರಾಹಕರಿಗೆ ಅನುಕೂಲಕರವಾಗಿದೆ. ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ದರ ಕೊಂಚ ಹೆಚ್ಚಿದೆ, ಆದರೆ ಉಳಿದ ಬಹುತೇಕ ನಗರಗಳಲ್ಲಿ ಒಂದೇ ರೀತಿಯ ದರವನ್ನು ಕಾಣಬಹುದು.

ಗಮನಿಸಿ: ಈ ಮೇಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ದರಕ್ಕೆ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳನ್ನ ಸೇರಿಸಿಲ್ಲ. ಸೇರಿಸಿದಾಗ ಅಂತಿಮ ಬಿಲ್ ಮೊತ್ತದಲ್ಲಿ ಬದಲಾವಣೆಯಾಗಬಹುದು ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+