Get Updates
Get notified of breaking news, exclusive insights, and must-see stories!

'ಲೇಬರ್ ಆಲ್' ಆನ್ ಲೈನ್ ಸಾಫ್ಟ್ ವೇರ್ ಬಿಡುಗಡೆ

ಬೆಂಗಳೂರು, ಮೇ.1: ಬೆಂಗಳೂರಿನ ಖ್ಯಾತ ಕಾರ್ಮಿಕ ನ್ಯಾಯವಾದಿಗಳಲ್ಲಿ ಒಬ್ಬರಾದ ಕೆ. ಶ್ರೀಭೂಮಿ ಯಶಸ್ವಿನಿ ಅವರು ಕಾರ್ಟೆಲ್ ಇನ್ನೋವೇಷನ್ಸ್ ಸಹಯೋಗದಲ್ಲಿ ಒಂದು ಸಮಗ್ರ ಕಾರ್ಮಿಕ ಕಾನೂನು ಅನುಸರಣೆಯ ಆನ್ ಲೈನ್ ತಂತ್ರಾಂಶ - ಲೇಬರ್ ಆಲ್ ಅನಾವರಣಗೊಂಡಿದೆ.

ಕಸ್ತೂರಿ ಅಸೋಸಿಯೇಟ್ಸ್ ಅಡ್ವೊಕೇಟ್ ಶ್ರೀಭೂಮಿ ಅವರೇ ಅಭಿವೃದ್ಧಿಪಡಿಸಿದ ಹಾಗೂ ರೂಪಿಸಿರುವ ಈ 'ಲೇಬರ್ ಆಲ್' ಸಾಫ್ಟ್ ವೇರನ್ನು ಕರ್ನಾಟಕ ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿಗಳಾದ ರಾಮ್ ಮೋಹನ್ ರೆಡ್ಡಿ ಹಾಗೂ ಕಾರ್ಮಿಕ ಆಯುಕ್ತ ಡಾ. ಡಿ.ಎಸ್. ವಿಶ್ವನಾಥ್, ಐ.ಎ.ಎಸ್ ಅವರು ಅನಾವರಣಗೊಳಿಸಿದರು.

ಭವಿಷ್ಯ ನಿಧಿ ಇಲಾಖೆ, ಇಎಸ್‍ಐಸಿ ಮತ್ತು ಫ್ಯಾಕ್ಟರಿ ಇಲಾಖೆಯ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಭೂಮಿ ಅವರು, "ಕೆಲವೊಂದು ಸಂಸ್ಥೆಗಳು ಸರಿಯಾಗಿ ಆಡಿಟ್ ಗಳನ್ನು ಮಾಡಿಸುತ್ತಿದ್ದರೂ, ಕಾರ್ಮಿಕ ಕಾನೂನಿನ ಕೆಲವೊಂದು ಸೆಕ್ಷನ್ ಗಳನ್ನು ಅನುಸರಿಸದ ಕಾರಣ ಕೈಗಾರಿಕಾ ಸಂಸ್ಥೆಗಳ ವಿರುದ್ಧ ಹಲವಾರು ಕೇಸುಗಳು ದಾಖಲಾಗಿರುವುದನ್ನು ನಾವು ಕಳೆದ ಅನೇಕ ವರ್ಷಗಳಿಂದ ನೋಡುತ್ತಿದ್ದೇವೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಈ ಕಾನೂನಿನ ಸ್ವರೂಪ ಹಾಗೂ ಅವುಗಳನ್ನು ಗ್ರಹಿಸುವಿಕೆಯಲ್ಲಿನ ಸಂಕೀರ್ಣತೆ. 'ಲೇಬರ್ ಆಲ್' ಎನ್ನುವುದು ಆನ್ ಲೈನ್ ಕಾರ್ಮಿಕ ಕಾನೂನು ಸಂಬಂಧಿ ಸಾಫ್ಟ್ ವೇರನ್ನು ಸಮಗ್ರ ಸೆಟ್ ಆಗಿದೆ. ಇದು ಫ್ಯಾಕ್ಟರಿ, ಮಳಿಗೆ ಅಥವಾ ಸಂಸ್ಥೆಗಳಿಗೆ ತಮ್ಮ ಕಾನೂನು ಅನುಸರಣೆಯ ಮಟ್ಟವನ್ನು ಅರಿಯಲು ಮತ್ತು ಮುಂದೇನು ಮಾಡಬೇಕು ಎಂಬುದನ್ನು ತಿಳಿಯಲು ನೆರವಾಗುತ್ತದೆ'' ಎಂದರು.

Labour All software
ಈ ಸಾಫ್ಟ್ ವೇರನ್ನು ಬೆಂಗಳೂರು ಮೂಲದ ಕಾರ್ಟೆಲ್ ಇನ್ನೋವೇಷನ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಸಾಫ್ಟ್ ವೇರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಕೆಲಸವನ್ನೂ ಇದೇ ಸಂಸ್ಥೆ ಮಾಡಲಿದೆ.

ಕಾರ್ಮಿಕ ಕಾನೂನು ಅನನುವರ್ತನೆ; ಒಂದು ಕ್ರಿಮಿನಲ್ ಅಪರಾಧ
ಶ್ರೀಭೂಮಿ ಯಶಸ್ವಿನಿ ಅವರ ಪ್ರಕಾರ, ಕರ್ನಾಟಕದಲ್ಲಿ 69 ಕಾರ್ಮಿಕ ಕಾನೂನುಗಳಿವೆ. ಹಾಗಾಗಿ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಅದಕ್ಕೆ ಅನ್ವಯವಾಗುವ ಬಹು ಕಾನೂನುಗಳನ್ನು ಪರಿಪಾಲನೆ ಮಾಡಲೇಬೇಕು. ಅನನುವರ್ತನೆ ಮಾಡುವ ಅಥವಾ ಕಾನೂನು ಪಾಲಿಸದ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಅವಕಾಶವಿದೆ.

ಉದಾಹರಣೆಗೆ, ಕೇವಲ 2014ರ ವರ್ಷವೊಂದರಲ್ಲೇ, ಕಾರ್ಮಿಕ ಕಾಯ್ದೆ ಮತ್ತು ಫ್ಯಾಕ್ಟರಿ ಕಾಯ್ದೆಯನ್ವಯ ಒಟ್ಟು 15,200 ಕಂಪನಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತವೆ. ಫ್ಯಾಕ್ಟರಿ ಕಾಯ್ದೆಯಡಿಯಲ್ಲೇ 1698 ಉಲ್ಲಂಘನೆಗಳು ನಡೆದಿದ್ದು, 209 ಪ್ರಕರಣಗಳ ವಿಚಾರಣೆ ಆರಂಭವಾಗಿದೆ.

ಕಾರ್ಮಿಕ ಇಲಾಖೆಯು 2,39,345 ತಪಾಸಣೆಗಳನ್ನು ಮಾಡಿದ್ದು, 1,42,498 ಉಲ್ಲಂಘನೆಗಳನ್ನು ಪತ್ತೆ ಹಚ್ಚಿದೆ. 61,414 ಕಂಪನಿಗಳು ತಮ್ಮ ತಪ್ಪನ್ನು ತಿದ್ದಿಕೊಂಡರೆ, 14,984 ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆಯನ್ವಯ ವಿಚಾರಣೆ ಆರಂಭಿಸಲಾಗಿದೆ. ಈ ಪೈಕಿ 6982 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಮತ್ತು 6345 ಪ್ರಕರಣಗಳಲ್ಲಿ ಕಂಪನಿಗಳನ್ನು ದೋಷಿ ಎಂದು ತೀರ್ಪು ನೀಡಲಾಗಿದೆ. ದಂಡದ ರೂಪದಲ್ಲಿ 2,22,67,559/- ರುಪಾಯಿಗಳನ್ನು ಪಡೆದುಕೊಳ್ಳಲಾಗಿದೆ.

"ಹಲವು ವರ್ಷಗಳಿಂದ ಇಂತಹ ವಿಚಾರಣೆಗಳನ್ನು ನಿಭಾಯಿಸಿದ ನನಗೆ, ಇಲ್ಲಿ ಇಂತಹ ಪ್ರಾಸಿಕ್ಯೂಷನ್ ಗಳಿಗೆ ಹಲವಾರು ಕಾರಣಗಳಿವೆ ಎಂಬುವುದು ತಿಳಿದುಬಂದಿದೆ. ಇದರಲ್ಲಿ ಪ್ರಮುಖ ಕಾರಣವೆಂದರೆ, ಹೆಚ್ಚಿನ ಪ್ರಕರಣಗಳಲ್ಲಿ ಬಹುತೇಕ ಕಂಪನಿಗಳಿಗೆ ತಮಗೆ ಅನ್ವಯವಾಗುವ ಕಾನೂನಿನ ಎಲ್ಲ ನಿಬಂಧನೆಗಳ ಬಗ್ಗೆ ಗೊತ್ತಿರುವುದಿಲ್ಲ. ಜತೆಗೆ, ಯಾವುದೇ ಸಂಸ್ಥೆಯಲ್ಲಾದರೂ ಈ ಕಾರ್ಮಿಕ ಕಾನೂನಿನ ಅನುಸರಣೆಗಳ ಹೊಣೆಯನ್ನು ಯಾವತ್ತೂ ಕಾನೂನು ತಂಡಗಳಿಗೆ ಅಥವಾ ಇಲಾಖೆಗಳಿಗೆ ವಹಿಸುವುದಿಲ್ಲ. ಅಲ್ಲದೆ, ಕಾರ್ಮಿಕ ಕಾನೂನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದೂ ಕಷ್ಟ'' ಎಂದೂ ಅವರು ಹೇಳಿದರು.

'ಲೇಬರ್ ಆಲ್' ಬಹಳಷ್ಟು ಸರಳವಾಗಿದ್ದು, ಬಳಕೆಯೂ ಸುಲಭ ಹಾಗೂ ಸುಲಭವಾಗಿ ಅರ್ಥವಾಗುವ ಮತ್ತು ಸಮಯವನ್ನು ಉಳಿಸುವಂಥದ್ದಾಗಿದೆ ಎಂದಿದ್ದಾರೆ ಶ್ರೀಭೂಮಿ. ಮೊದಲ ಹೆಜ್ಜೆಯಾಗಿ, ಲೇಬರ್ ಆಲ್ ಕರ್ನಾಟಕದ ಅತ್ಯಂತ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಒಳಗೊಂಡಿರುತ್ತದೆ.

ಆರು ಬಾರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಬಿ.ವಿ. ಆಚಾರ್ಯ ಅವರು ಈ ಸಾಫ್ಟ್ ವೇರನ್ನು ಶ್ಲಾಘಿಸಿದ್ದಲ್ಲದೆ, "ಒಂದು ಸಂಸ್ಥೆಯ ಉದ್ಯೋಗದಾತ ಅಥವಾ ಮಾಲೀಕ ಅಥವಾ ಮ್ಯಾನೇಜರ್ ತಾವು ಅನುಸರಿಸಬೇಕಾದ ಕಾರ್ಮಿಕ ಕಾನೂನಿನ ಬಗ್ಗೆ ಅರಿತುಕೊಳ್ಳಲು ಈ ಸಾಫ್ಟ್ ವೇರ್ ಒಂದು ವರವಾಗಿದೆ. ಈ ಸಾಫ್ಟ್ ವೇರ್ ಯಾವುದೇ ಕಾನೂನು ರೀತ್ಯ ಪದಪ್ರಯೋಗವಿಲ್ಲದೆ ಸರಳವಾದ ಭಾಷೆಯಲ್ಲಿ ಅಗತ್ಯ ಮಾಹಿತಿಯನ್ನು ನೀಡುವ ಕಾರಣ, ಉದ್ಯೋಗದಾತನು ತನ್ನ ಕಾನೂನಾತ್ಮಕ ಅಗತ್ಯತೆಗಳನ್ನು ಅನುಸರಿಸಲು ಸಾಧ್ಯವಾಗಿದೆ'' ಎಂದರು.

Labour All software
ಈ ಸಾಫ್ಟ್ ವೇರ್ ನ ಅಗತ್ಯತೆ ಬಗ್ಗೆಯೂ ವಿವರಿಸಿದ ಅವರು, ಒಂದು ಫ್ಯಾಕ್ಟರಿ ಅಥವಾ ಸಂಸ್ಥೆಯ ಉದ್ಯೋಗದಾತನಾಗಲೀ, ಮಾಲೀಕನಾಗಲೀ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಹಲವಾರು ಕಾನೂನುಗಳನ್ನು ಅನುಸರಿಸಬೇಕಾಗುತ್ತದೆ. ಉಲ್ಲಂಘನೆಗಳಾದಲ್ಲಿ ವಿಚಾರಣೆ ಎದುರಿಸಬೇಕಾಗಿಯೂ ಬರುತ್ತದೆ ಮತ್ತು ಕೆಲವೊಂದು ಪ್ರಕರಣಗಳಲ್ಲಿ ಹಲವು ಕಾಲಾವಧಿಯ ಜೈಲು ಶಿಕ್ಷೆಯೂ ಆದದ್ದಿದೆ.

ಹಾಗಾಗಿ ಕಾನೂನಿನ ನಿರ್ದಿಷ್ಟ ನಿಬಂಧನೆಗಳ ಸಮಗ್ರ ಮಾಹಿತಿ, ಅದರಲ್ಲೂ ವಿಶೇಷವಾಗಿ ಉದ್ದಿಮೆ ಅಥವಾ ಫ್ಯಾಕ್ಟರಿಯ ಉದ್ಯೋಗದಾತ ಮತ್ತು ಇತರೆ ಉಸ್ತುವಾರಿಗಳು ನಿರ್ವಹಿಸಬೇಕಾದ ಕೆಲಸಗಳು ಮತ್ತು ಹೊಣೆಗಾರಿಕೆಗಳ ಮಾಹಿತಿಯ ಅವಶ್ಯಕತೆ ಇದ್ದೇ ಇದೆ ಎಂದೂ ಅವರು ಹೇಳಿದರು.

'ಲೇಬರ್ ಆಲ್' ಸಾಫ್ಟ್ ವೇರ್ ಬಗ್ಗೆ
ಲೇಬರ್ ಆಲ್ ಎನ್ನುವುದು ಒಂದು ಆನ್ ಲೈನ್ ಸಾಫ್ಟ್‍ವೇರ್ ಆಗಿದೆ. ಇಲ್ಲಿ ಎಲ್ಲರೂ www.labourall.com ಗೆ ಲಾಗ್ ಇನ್ ಆಗಿ, ಸಾಫ್ಟ್ ವೇರನ್ನು ಆನ್ ಲೈನ್ ನಲ್ಲಿ ಪಡೆಯಬಹುದು. ಇಲ್ಲಿರುವುದು ವಾರ್ಷಿಕ ಚಂದಾ ವ್ಯವಸ್ಥೆ. ಒಬ್ಬ ವ್ಯಕ್ತಿಯು ಎಷ್ಟು ಬಾರಿ ಬೇಕಿದ್ದರೂ ವೆವ್ ಸೈಟ್ ಗೆ ಲಾಗ್ ಇನ್ ಆಗಬಹುದು. ನಂತರ ಹಂತ ಹಂತವಾಗಿ ಅಲ್ಲಿರುವ ಪ್ರಶ್ನಾವಳಿಗೆ ಉತ್ತರಿಸುತ್ತಾ ಹೋಗಬೇಕು.

ಆದರೆ, ಒಂದು ವರ್ಷದಲ್ಲಿ ಕೇವಲ ನಾಲ್ಕು ವರದಿಗಳನ್ನು ಸಿದ್ಧಪಡಿಸಬಹುದು. ಇಲ್ಲಿ ಜನರು ಮುಕ್ತವಾಗಿ ಎಲ್ಲ ಕಾನೂನುಗಳ ಸೆಟ್ ಅನ್ನೇ ಖರೀದಿಸಬಹುದು ಅಥವಾ ತಮ್ಮ ಆಯ್ಕೆಯ ಕಾನೂನುಗಳನ್ನು ಒಟ್ಟುಗೂಡಿಸಬಹುದು. ದರ ಮಾತ್ರ ನೀವು ಖರೀದಿಸಿದ ಕಾನೂನಿನ ಸೆಟ್ ಅನ್ನು ಅವಲಂಬಿಸಿರುತ್ತದೆ. ಇಲ್ಲಿ ಧ್ವನಿ ನೆರವು (ಮ್ಯೂಟ್ ಫೆಸಿಲಿಟಿ ಇರುವ) ವ್ಯವಸ್ಥೆಯೂ ಇದ್ದು, ಅದು ಬಳಕೆದಾರನಿಗೆ ಪ್ರಶ್ನಾವಳಿಗಳನ್ನು ಓದಿ ಹೇಳುತ್ತದೆ.

ಶ್ರೀಭೂಮಿ ಅವರ ಪ್ರಕಾರ, ಕಾಯ್ದೆಯ ಸೆಕ್ಷನ್ ಗಳು ಹೇಗೆ ವ್ಯವಸ್ಥಿತವಾಗಿದೆಯೋ ಅದೇ ಮಾದರಿಯಲ್ಲಿ ಈ ಪ್ರಾಡಕ್ಟ್ ಅನ್ನೂ ಸಿದ್ಧಪಡಿಸಲಾಗಿದೆ. "ಉದಾಹರಣೆಗೆ, ಮಳಿಗೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಲ್ಲಿ, ಮೊದಲ ಸೆಕ್ಷನ್ ನಿಂದ ಕೊನೆಯ ಸೆಕ್ಷನ್ ವರೆಗೂ ಉದ್ಯೋಗದಾತನು ಯಾವೆಲ್ಲ ಕಾನೂನುಗಳನ್ನು ಅನುಸರಣೆ ಮಾಡಬೇಕೋ ಅವುಗಳನ್ನೆಲ್ಲ ಪ್ರಶ್ನಾವಳಿಗಳನ್ನಾಗಿ ಪರಿವರ್ತಿಸಲಾಗಿದೆ. ಈ ಪ್ರಶ್ನೆಗಳು ಸೆಕ್ಷನ್ ನ ಭಾಷಾಂತರವಾಗಿರದೇ, ಅತ್ಯಂತ ಸರಳ ಭಾಷೆಯಲ್ಲಿವೆ. ಕೆಲವೊಂದು ಸಂದರ್ಭಗಳಲ್ಲಿ ಓದುವವರಿಗೆ ಸುಲಭವಾಗಲಿ ಎಂದು ಪಾಲಿಸಬೇಕಾದ ನಿಯಮವನ್ನು ಒಂದಕ್ಕಿಂತ ಹೆಚ್ಚು ಪ್ರಶ್ನೆಗಳನ್ನಾಗಿ ವಿಭಜಿಸಲಾಗಿದೆ'' ಎಂದಿದ್ದಾರೆ.

ಸೆಕ್ಷನ್‍ನಲ್ಲಿ ಯಾವುದಾದರೂ ವಿನಾಯಿತಿಗಳಿದ್ದರೆ, ಅಂತಹ ಸಂದರ್ಭದಲ್ಲಿ ಅದಕ್ಕೆ ಒಳಪಡದ ವ್ಯಕ್ತಿಗಳು ಅನಗತ್ಯ ಪ್ರಶ್ನೆಗಳಿಗೆ ಉತ್ತರಿಸದಂತೆ ಮಾಡಲಾಗಿದೆ. "ಈ ರೀತಿಯಾಗಿ ನಾವು ಕೆಲವೊಂದು ಕಾರ್ಮಿಕ ಕಾನೂನುಗಳನ್ನು ಕವರ್ ಮಾಡಿದ್ದು, ಇನ್ನೂ ಅನೇಕ ಕಾನೂನುಗಳನ್ನು ಸೇರಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ವರ್ಷದ ಡಿಸೆಂಬರ್ ಅಂತ್ಯದಲ್ಲಿ, ನಮ್ಮ ವೆವ್ ಸೈಟ್ (www.labourall.com) ನಲ್ಲಿ ಕಾರ್ಮಿಕ ಕಾನೂನುಗಳ ದೊಡ್ಡ ಪಟ್ಟಿಯೇ ಸಿದ್ಧವಾಗಿರಲಿದೆ'' ಎಂದಿದ್ದಾರೆ ಶ್ರೀಭೂಮಿ.

ಪ್ರಸ್ತುತ ಕಾರ್ಮಿಕ ಕಾನೂನಿನಡಿಯಲ್ಲಿ ಇರುವ ಕಾನೂನುಗಳೆಂದರೆ, ಫ್ಯಾಕ್ಟರಿ ಕಾಯ್ದೆ 1948, ಕರ್ನಾಟಕ ಮಳಿಗೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952, ನೌಕರರ ರಾಜ್ಯ ವಿಮೆ ಕಾಯ್ದೆ, 1948, ಮೆಟರ್ನಿಟಿ ಬೆನಿಫಿಟ್ ಕಾಯ್ದೆ 1961, ವೇತನ ಪಾವತಿ ಕಾಯ್ದೆ 1936, ಬೋನಸ್ ಪಾವತಿ ಕಾಯ್ದೆ 1965 ಮತ್ತು ಸಮಾನ ಸಂಭಾವನೆ ಕಾಯ್ದೆ 1976. ಎಲ್ಲ ಕಾನೂನುಗಳನ್ನು ಸೇರ್ಪಡೆಗೊಳಿಸುವವರೆಗೂ ನಿಯಮಿತವಾಗಿ ಹೆಚ್ಚುವರಿಯಾದದ್ದನ್ನು ಸೇರಿಸುತ್ತಾ ಹೋಗುತ್ತೇವೆ.

ಕಾರ್ಟೆಲ್ ಇನ್ನೋವೇಷನ್ಸ್ ಸಲಹೆಗಾರ ಪ್ರದೀಪ್ ಕುಮಾರ್ ಮಾತನಾಡಿ, ನಾವು ಮಾರ್ಕೆಟಿಂಗ್ ಮತ್ತು ಮಾರಾಟ ತಂಡವನ್ನು ಹೊಂದಿದ್ದೇವೆ ಮತ್ತು ಸಂಭಾವ್ಯ ಗ್ರಾಹಕರ ಪಟ್ಟಿಯೂ ನಮ್ಮ ಕೈಯ್ಯಲ್ಲಿದೆ. ಈ ಜನರೊಂದಿಗೆ ನಾವು ಸಂಪರ್ಕದಲ್ಲಿದ್ದು, ಅವರೂ ಈ ಸಾಫ್ಟ್ ವೇರ್ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದಿದ್ದಾರೆ.

ಭವಿಷ್ಯದ ಯೋಜನೆಗಳು: ಶ್ರೀಭೂಮಿ ಮತ್ತು ಕಾರ್ಟೆಲ್ ಇನ್ನೋವೇಷನ್ಸ್ ಹಂತ ಹಂತವಾಗಿ ಈ ಉತ್ಪನ್ನವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ, ಕರ್ನಾಟಕದ ಎಲ್ಲ 69 ಕಾರ್ಮಿಕ ಕಾನೂನುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ನಂತರ ನಾವು ಭಾರತದ ಕೈಗಾರಿಕಾ ರಾಜ್ಯಗಳ ಗುರಿ ಹಾಕಿಕೊಳ್ಳಲಿದ್ದೇವೆ. ಕ್ರಮೇಣವಾಗಿ, ನಾವು ಈ ಉತ್ಪನ್ನವನ್ನು ಭಾರತದಾದ್ಯಂತ ಎಲ್ಲ ರಾಜ್ಯಗಳಿಗೂ ತಲುಪಿಸಲಿದ್ದೇವೆ. ಇದು ನಮ್ಮ ಒಟ್ಟಾರೆ ಧ್ಯೇಯವಾಗಿದೆ ಎಂದಿದ್ದಾರೆ ಭೂಮಿ.

ಎಚ್‍ಆರ್ ಮತ್ತು ಕಾನೂನು ಸಿಬ್ಬಂದಿ ಏನು ಹೇಳುತ್ತಾರೆ...
ಈ ಉತ್ಪನ್ನದ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಪಿ.ಎಲ್. ಮ್ಯಾಥ್ಯೂ, "ನನಗೆ ಇದರಲ್ಲಿರುವ ಅಂಶಗಳು ಸಮಗ್ರವಾಗಿದೆ ಎಂದೆನಿಸುತ್ತಿದೆ. ಇದು ಸದ್ರಿ ಕಾಯ್ದೆಯ ಎಲ್ಲ ಸೆಕ್ಷನ್‍ಗಳು ಮತ್ತು ನಿಬಂಧನೆಗಳನ್ನು ಒಳಗೊಂಡಿದೆ. ಭಾಷೆಯು ಸರಳವಾಗಿದ್ದು, ವಿಷಯಗಳು ಕೂಡ ಒಂದಕ್ಕೊಂದು ಅಂತರ್ ಸಂಪರ್ಕ ಹೊಂದಿವೆ. ಎಲ್ಲ ವಿವರಗಳನ್ನೂ ಸೇರಿಸಲು ಬಹಳಷ್ಟು ಪರಿಶ್ರಮ ಪಡಲಾಗಿದೆ. ನನ್ನ ಅಭಿಪ್ರಾಯದ ಪ್ರಕಾರ, ಅನುಸರಣೆಯಲ್ಲಿ ಭಾಗಿಯಾದ ಎಲ್ಲರಿಗೂ ಈ ಸಾಫ್ಟ್‍ವೇರ್ ಅತ್ಯಂತ ಸಹಕಾರಿಯಾಗಲಿದೆ'' ಎಂದರು.

ಪ್ರಾಡಕ್ಟ್ ಬಗ್ಗೆ ವಿವರಣೆ ನೀಡಿದ ಹರ್ಬಾಲೈಫ್ ನ ಪ್ರಾಣೇಶ್ ಕೆ.ಎಸ್., "ಫ್ಯಾಕ್ಟರಿಗಳು, ಮಳಿಗೆಗಳು, ಸಂಸ್ಥೆಗಳು ಇತ್ಯಾದಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ. ಇಲ್ಲಿರುವ ಪ್ರಶ್ನೆಗಳು ಮತ್ತು ಉತ್ತರದ ಅರ್ಜಿಗಳು ಅತ್ಯಂತ ಸುಲಭವಾಗಿದ್ದು, ಬಳಕೆದಾರ ಸ್ನೇಹಿಯಾಗಿವೆ. ಎಲ್ಲ ಅಗತ್ಯ ನಿಬಂಧನೆಗಳನ್ನು ಅನುಸರಿಸಲು ಮತ್ತು ಅರ್ಥಮಾಡಿಕೊಳ್ಳಲು ಸಾಫ್ಟ್ ವೇರ್ ನೆರವಾಗಲಿದೆ. ಈ ಸಾಫ್ಟ್ ವೇರ್ ನಿಂದಾಗಿ ಎಲ್ಲರೂ ಎಲ್ಲದಕ್ಕೂ ಅಡ್ವೊಕೇಟ್ ಗಳ ಮೊರೆ ಹೋಗುವ ಪ್ರಮೇಯಗಳು ಕಡಿಮೆಯಾಗಲಿದೆ'' ಎಂದು ಅಭಿಪ್ರಾಯಪಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+