Video Viral: ಗಂಗಾವತಿಯಲ್ಲಿ ವಿಲಕ್ಷಣ ಕಳ್ಳನ ಹಾವಳಿ: ಮಹಿಳೆಯರ ಒಳ ಉಡುಪು ಕದಿಯುವ ವ್ಯಕ್ತಿ ದೃಶ್ಯಗಳು ಸೆರೆ

ಕೊಪ್ಪಳ: ಹಗಲು ಹೊತ್ತು ಮನೆ ಆವರಣ, ಕಾಂಪೌಂಡ್ ಮೇಲೆ ಒಣಹಾಕಿದ್ದ ಮಹಿಳೆಯ ಒಳಉಡುಪುಗಳನ್ನು ಗಮನಿಸುತ್ತಿದ್ದ ಆಸಾಮಿ ರಾತ್ರಿಯಾಗುತ್ತಿದ್ದಂತೆ ಯಾರಿಗು ಗೊತ್ತಾಗುತ್ತಿದ್ದಂತೆ ಕಳ್ಳತನ ಮಾಡಿದ್ದಾನೆ. ಈ ವಿಲಕ್ಷಣ ಘಟನೆ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಾಗರಿಕರು ಈ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

2-3 ದಿನಗಳಿಂದ ಬಟ್ಟೆಗಳು ಕಾಣೆ, ಕೃತ್ಯ ಬೆಳಕಿಗೆ

ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿರುವ ವಿಕೃತ ವ್ಯಕ್ತಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಕ್ಷಣವೇ ಈತನ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವಂತೆ ಒತ್ತಾಯ ಹೆಚ್ಚಾಗಿದೆ. ಕಳೆದ 2-3 ದಿನಗಳಿಂದ ತಡರಾತ್ರಿ ಮನೆಯ ಕಾಂಪೌಂಡ್‌ಗಳ ಮೇಲೆ ಹತ್ತಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿರುವುದು ಸಾಬೀತಾಗಿದ್ದು, ಆತಂಕಕಾರಿ ಮತ್ತು ವಿಚಿತ್ರ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಕರ್ನಾಟಕ ಪೋರ್ಟ್‌ಫೋಲೀಯೋ (@karnatakaportf) ಹಂಚಿಕೊಂಡಿದೆ.

Viral Video

ಕತ್ತಲಾದ ನಂತರ ಮನೆಗಳ ಮುಂದೆ ಬಂದು ಮಹಿಳೆಯರ ಒಳ ಉಡುಪುಗಳನ್ನು ಒಯ್ಯುವುದು ವರದಿ ಆಗಿದೆ. ಈ ವಿಚಾರ ನಿವಾಸಿಗಳಲ್ಲಿ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಹಗಲು ಹೊತ್ತು ಈ ವ್ಯಕ್ತಿ ಉದ್ಯಮಿಗಳು, ಗಣ್ಯ ವ್ಯಕ್ತಿಗಳ ಮನೆಗಳಲ್ಲಿ ಎಲ್ಲೆಲ್ಲಿ ಬಟ್ಟೆ ಒಣ ಹಾಕಿರುತ್ತಾರೆ ಎಂಬುದನ್ನು ಗುರುತಿಟ್ಟುಕೊಂಡು ರಾತ್ರಿ ವೇಳೆ ಯಾರು ಇಲ್ಲದ್ದನ್ನು ನೋಡಿಕೊಂಡು ಒಳಉಡುಪುಗಳನ್ನು ಕದಿಯುತ್ತಿದ್ದಾನೆ ಎಂಬುದು ವರದಿ ಆಗಿದೆ.

ಇದು ಕಳ್ಳತನವಲ್ಲ, ವಿಕೃತ ಮನಸ್ಥಿತಿ

ಮನೆ ಮುಂದೆ ಒಣ ಹಾಕಿದ ಬಟ್ಟೆಗಳು ಕಾಣದಿದ್ದಾಗ ಅನುಮಾನಗೊಂಡ ಮನೆ ಮಾಲೀಕರು ಸಿಸಿಟಿ ಪರಿಶೀಲಿಸಿದ್ದಾರೆ. ಆಗ ರಾತ್ರಿ ವ್ಯಕ್ತಿ ಕಾಂಪೌಂಡ್ ಬಳಿ ಬಂದು ಬಟ್ಟೆ ಕದಿಯುವ ದೃಶ್ಯಗಳು ಸೆರೆಯಾಗಿದ್ದು ಕಂಡು ದಂಗಾಗಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಕಳ್ಳತನವೆಂದು ಭಾವಿಸದೇ ವಿಕೃತ ಮನಸ್ಥಿತಿಯ ಸೂಚನೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಮಹಿಳೆಯ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದ್ದು, ಇಂತಹ ಘಟನೆ ತಡೆಯುವಂತೆ ಪೊಲೀಸರಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+