ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್‌ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC

Karnataka KSRTC: ಕರ್ನಾಟಕದಾದ್ಯಂತ ಉತ್ತಮ ಸೇವೆ ನೀಡುತ್ತಿರುವ ಹಾಗೂ ತನ್ನ ಉಪಕ್ರಮ, ಪ್ರಯಾಣಿಕ ಸ್ನೇಹಿ ಕಾರ್ಯಕ್ರಮಗಳಿಂದ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ರಾಜ್ಯದ ಹೆಮ್ಮೆಯ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು' (KSRTC) ಇದೀಗ ಪ್ರತಿಷ್ಠಿತ 'ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದೆ.

'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾನವ ರಹಿತ 'ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ'ಕ್ಕೆ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಶನಿವಾರ (ಮಾ.28) ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‍‌ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಪ್ರಶಸ್ತಿ ಮತ್ತು ಗೌರವವನ್ನು ಸ್ವೀಕರಿಸಿದರು.

KSRTC Wins SKOCH National Award

ಸದರಿ ಸಾರಿಗೆ ನಿಗಮವು ಅರ್ಜಿ ಸಲ್ಲಿಕೆಯಿಂದ ಹಿಡಿದು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ಘಟಕ ನಿಯೋಜನೆ ವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ಕಾಪಾಡಿಕೊಂಡು ಬಂದಿದೆ. ನೇಮಕಾತಿಯಲ್ಲಿ ಮಾನವ ಹಸ್ತಕ್ಷೇಪವನ್ನು ನಿಲ್ಲಿಸಲಾಗಿದೆ. ಈ ಮೂಲಕ ಅರ್ಹರಿಗೆ ಉದ್ಯೋಗ ಸಿಗುವಂತೆ ಮಾಡಿ ನೇಮಕಾತಿಯಲ್ಲಿ ಉತ್ತಮ ಬದಲಾವಣೆ ತಂದಿದೆ.

ಸಾವಿರಾರು ಹುದ್ದೆಗಳ ಪಾರದರ್ಶಕ ನೇಮಕಾತಿ

ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ, ಸ್ವಯಂ ಚಾಲಿತ ಚಾಲನಾ ಪರೀಕ್ಷೆ, ಆನ್ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್, ಅಟೋ ಜನರೇಟಡ್ ಅಂಕಪಟ್ಟಿ ನೀಡುವ ಮೂಲಕ 2000 ಚಾಲಕ‌ ಕಂ ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿಗಳು, 441 ಅನುಕಂಪ‌ ಆಧಾರದಲ್ಲಿ‌ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ.

ಮಾತ್ರವಲ್ಲದೇ ಕಳೆದ ಆರು ತಿಂಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಗಿದೆ. ನಿಗಮದ ಸಮಗ್ರ‌ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ ಎಂದು ಕೆಎಸ್‌ಆರ್‍‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಕಾಚ್ ಸಂಸ್ಥೆ ಕುರಿತು..

ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದೆ. 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ದೇಶದ ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ, ಪಾರದರ್ಶಕ ನೀತಿ, ಯೋಜನೆ, ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿರುವ ಕೊಡುಗೆಗಳು ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡಲಾಗುತ್ತದೆ.

ಸದರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಕಾಚ್ ಫೌಂಡೇಶನ್ ಅಧ್ಯಕ್ಷರಾದ ಸಮೀರ್ ಕೊಚ್ಚರ್, ಸ್ಕಾಚ್ ಗ್ರೂಪ್ ಉಪಾಧ್ಯಕ್ಷರಾದ ಡಾ.ಗುರುಚರಣ್ ಧನ್ಜಾಲ್ ಅವರು ನಿಗಮದ ಮುಖ್ಯಸ್ಥರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಹಿಂದೆಯು ವಿವಿಧ ಉಪಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ KSRTC ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ನಿಗಮದವು ಪ್ರಕಟನೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+