Udupi: ಉಡುಪಿ ಜಿಲ್ಲೆಗೆ 'ಸಂಪೂರ್ಣ ಸಾಕ್ಷರತಾ' ಸ್ಥಾನಮಾನ, ಶೀಘ್ರವೇ ಘೋಷಣೆ

ಉಡುಪಿ: ಧಾರ್ಮಿಕವಾಗಿ ಹೆಸರು ಮಾಡಿರುವ ಕರಾವಳಿಯ ಪ್ರಮುಖ ಜಿಲ್ಲೆ ಉಡುಪಿ ವ್ಯಾಪ್ತಿಯಲ್ಲಿ ಕಳೆದ ವರ್ಷ 'ವಯಸ್ಕ ಶಿಕ್ಷಣ ಅಭಿಯಾನ' ಆರಂಭಿಸಲಾಯಿತು. ಇದರಡಿ ಗ್ರಾಮ ಪಂಚಾಯಿತಿಗಳಲ್ಲಿ ಅನಕ್ಷರಸ್ಥನ್ನು ಗುರುತಿಸಿ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು. ಇದೀಗ ಇಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಾಗಲಿದ್ದು, ಉಡುಪಿಯು "ಸಂಪೂರ್ಣ ಸಾಕ್ಷರ" ಜಿಲ್ಲೆಯೆಂದು ಘೋಷಿಸಲು ಸಜ್ಜಾಗಿದೆ. ಶಿಕ್ಷಣ ವಿಚಾರವಾಗಿಯೂ ಜಿಲ್ಲೆ ಮೈಲಿಗಲ್ಲು ಸಾಧನೆಯತ್ತ ಹೆಜ್ಜೆ ಇಟ್ಟಿದೆ.

ಉಡುಪಿ ವ್ಯಾಪ್ತಿಯ ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮತ್ತು ಬೈಂದೂರು ತಾಲ್ಲೂಕುಗಳಿಂದ ಸಂಪೂರ್ಣ ಸಾಕ್ಷರತೆ ದೃಢೀಕರಿಸಲಾಗುತ್ತದೆ ಎಂದು ವಯಸ್ಕ ಶಿಕ್ಷಣ ಕಚೇರಿಯ ಮೂಲಗಳು ತಿಳಿಸಿವೆ. ಉಡುಪಿ ಮತ್ತು ಕುಂದಾಪುರ ತಾಲ್ಲೂಕುಗಳು ತಮ್ಮ ಸಾಕ್ಷರತೆಯ ಘೋಷಣೆಗಳನ್ನು ಸಲ್ಲಿಸಲಿವೆ. ಇದೆಲ್ಲ ವರದಿ ಸ್ವೀಕರಿಸಿ ಜಿಲ್ಲಾ ಪಂಚಾಯತ್ (ಜಿಲ್ಲಾ ಪಂಚಾಯತ್) ಉಡುಪಿಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆಯೆಂದು ಅಧಿಕೃತವಾಗಿ ಘೋಷಿಸುವುದು ಬಹುತೇಕ ಖಚಿತವಾಗಿದೆ ಎಂದು TNIE ವರದಿ ಮಾಡಿದೆ.

Udupi District

ಸಾಕ್ಷರತಾ ಜಿಲ್ಲೆ ಘೊಷಣೆಗೆ ಇರುವ ನಿಯಮವೇನು?

ಒಂದು ಜಿಲ್ಲೆ ಸಂಪೂರ್ಣ ಸಾಕ್ಷರತಾ ಜಿಲ್ಲೆ ಆಗಬೇಕಾದರೆ ಆ ಪ್ರದೇಶದಲ್ಲಿ ಶೇ. 95ಕ್ಕಿಂತ ಹೆಚ್ಚಿನ ಪ್ರಮಾಣದ ಸಾಕ್ಷರರು ಇರಬೇಕೆಂಬುದು ಕೇಂದ್ರ ಸರ್ಕಾರದ ನಿಯಮಗಳು ಹೇಳಿತ್ತವೆ. ಅದನ್ನು ಉಡುಪಿ ಜಿಲ್ಲೆ ಸಾಧಿಸುವ ಹಂತದಲ್ಲಿದೆ. ಕೇಂದ್ರದ ಶಿಕ್ಷಣ ಮಾನದಂಡ ಪೂರೈಸಿದರೆ ಅದನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂದು ಪರಿಗಣಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಮೂಲಕ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಜಿಲ್ಲೆಯಲ್ಲಿ ಒಟ್ಟು 158 ಗ್ರಾಮ ಪಂಚಾಯಿತಿಗಳು ಇವೆ. ಅವೆಲ್ಲ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಕುರಿತು ವರದಿಗಳು ಈಗಾಗಲೇ ಸಲ್ಲಿಕೆ ಆಗಿವೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತಿಮವಾಗಿ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು (EO) ಸಾಕ್ಷರತಾ ವರದಿಯನ್ನು ಅನುಮೋದನೆಗಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರವಾನಿಸುತ್ತಾರೆ.

ಏನಿದು ಅಭಿಯಾನ?

ಜಿಲ್ಲೆ ವ್ಯಾಪ್ತಿಯಲ್ಲಿ ವಯಸ್ಕ ಸಾಕ್ಷರತಾ ಅಭಿಯಾನದಡಿ 1,246 ಅನಕ್ಷರಸ್ಥ ವಯಸ್ಕರನ್ನು ಗುರುತಿಸಲಾಯಿತು. ನಂತರ ಅವರಿಗೆ ನಾಲ್ಕು ತಿಂಗಳ ವಿಶೇಷ ಸಾಕ್ಷರತಾ ಕೋರ್ಸ್‌ಗಳಿಗೆ ಸೇರಿ ವಯಸ್ಕ ಶಿಕ್ಷಣ ಕಚೇರಿಯಿಂದ ನಡೆಸಿದ ಶಿಕ್ಷಣ ಕಾರ್ಯಕ್ರಮಗಳಲ್ಲಿ ಅವರಿಗೆ ಮೂಲಭೂತ ಓದು, ಬರವಣಿಗೆ ಮತ್ತು ಅಂಕಗಣಿತ ಅಭ್ಯಾಸಗಳನ್ನು ಹೇಳಿಕೊಡಲಾಯಿತು. ಕಲಿಕಾ ಸಾಮಗ್ರಿಗಳೆಲ್ಲ ಬಳಸಿ ಕಲಿಸಿಕೊಡಲಾಯಿತು. ಕೊನೆಗೆ ಕಲಿಕೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಈ ಕೋರ್ಸ್‌ಗಳಲ್ಲಿ ಸಣ್ಣ ವಯಸ್ಸಿನಲ್ಲಿ ಶಾಲಾ ಶಿಕ್ಷಣ ತಪ್ಪಿಸಿಕೊಂಡ ವ್ಯಕ್ತಿಗಳು, ವೃದ್ಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಯಸ್ಕರಿಗೆ ಶಿಕ್ಷಣ ನೀಡಲು ಇಲ್ಲಿನ ಜಿಲ್ಲಾ ಪಂಚಾಯತ್‌ನ ಜಿಲ್ಲಾ ವಯಸ್ಕ ಶಿಕ್ಷಣ ಅಧಿಕಾರಿ ಯೋಗನರಸಿಂಹ ಸ್ವಾಮಿ ಕೆ.ಎಂ., 'ಬಾಳಿಗೆ ಬೆಳಕು' ಮತ್ತು 'ಸವಿ ಬರಹ' ಎಂಬ ಎರಡು ಪಠ್ಯಪುಸ್ತಕಗಳನ್ನು ವಿನ್ಯಾಸಗೊಳಿಸಿದ್ದರು. ಅವುಗಳಿಂದ ವಯಸ್ಕರಿಗೆ ಶಿಕ್ಷಣ ನೀಡಲಾಯಿತು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+