Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ
ಬೆಂಗಳೂರು: ವಾರದ ಆರಂಭದಲ್ಲೇ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಬಂಗಾರದಂತಹ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು ಗಣನೀಯ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರಗಳು ಇಳಿಕೆಯಾಗಿದ್ದು, ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿದ್ದ ಗ್ರಾಹಕರಿಗೆ ಇದು ಉತ್ತಮ ಅವಕಾಶ ಎಂದರೆ ತಪ್ಪಾಗದು.
ಇಂದಿನ ಮಾರುಕಟ್ಟೆ ದರದ ಪ್ರಕಾರ, ಅತ್ಯಂತ ಶುದ್ಧವಾದ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹81ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ ₹14,728ಕ್ಕೆ ತಲುಪಿದೆ. ಅದೇ ರೀತಿ, ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ ₹75 ರಷ್ಟು ಇಳಿಕೆ ಕಂಡು ₹13,500ರಷ್ಟಿದೆ. ಇದರೊಂದಿಗೆ 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ ₹61 ರಷ್ಟು ಕಡಿಮೆಯಾಗಿದ್ದು, ₹11,046ಕ್ಕೆ ಮಾರಾಟವಾಗುತ್ತಿದೆ.

ದರ ಇಳಿಕೆಯ ವಿವರ:
ಅತ್ಯಂತ ಶುದ್ಧವಾದ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ನಿನ್ನೆ ₹1,48,090 ಇತ್ತು, ಇಂದು ಅದು ₹1,47,280ಕ್ಕೆ ಇಳಿದಿದೆ. ಅಂದರೆ ಬರೋಬ್ಬರಿ ₹810ರಷ್ಟು ಲಾಭ ಗ್ರಾಹಕರಿಗೆ ಸಿಗಲಿದೆ. ಇನ್ನು 100 ಗ್ರಾಂ ಖರೀದಿ ಮಾಡುವವರಿಗೆ ₹8,100ರಷ್ಟು ದೊಡ್ಡ ಮಟ್ಟದ ಉಳಿತಾಯವಾಗಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತಿ ಗ್ರಾಂಗೆ ₹75 ರಷ್ಟು ಕಡಿಮೆಯಾಗಿದೆ. ನಿನ್ನೆ ₹1,35,750 ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು ₹1,35,000ಕ್ಕೆ ತಲುಪಿದೆ. 100 ಗ್ರಾಂ ಖರೀದಿಯ ಮೇಲೆ ₹7,500 ರಷ್ಟು ದರ ಇಳಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ ₹61ರಷ್ಟು ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ ಇಂದು ₹1,10,460 ದರ ನಿಗದಿಯಾಗಿದೆ.
ಬೆಂಗಳೂರು ಮಾತ್ರವಲ್ಲದೆ, ನೆರೆಯ ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಚಿನ್ನದ ದರದಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬಂದಿದೆ. ನೀವು ಒಂದು ವೇಳೆ ಹೂಡಿಕೆಯ ದೃಷ್ಟಿಯಿಂದ ಅಥವಾ ವೈಯಕ್ತಿಕ ಬಳಕೆಗಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದರೆ, ಇಂದಿನ ದರ ಇಳಿಕೆಯು ನಿಮಗೆ ಲಾಭದಾಯಕವಾಗಲಿದೆ. ಮುಂದಿನ ದಿನಗಳಲ್ಲಿ ಬೆಲೆಗಳು ಮತ್ತಷ್ಟು ಇಳಿಕೆಯಾಗುತ್ತವೆಯೇ ಅಥವಾ ಮತ್ತೆ ಏರಿಕೆ ಹಾದಿ ಹಿಡಿಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹245ರಷ್ಟಿದೆ. ಇನ್ನು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಖರೀದಿಸುವವರಿಗೆ ಪ್ರತಿ ಕಿಲೋಗ್ರಾಂಗೆ ₹2,45,000 ದರ ನಿಗದಿಯಾಗಿದೆ. ಕಳೆದ ಕೆಲವು ದಿನಗಳಿಂದ ಬೆಳ್ಳಿಯ ಬೆಲೆಯಲ್ಲಿ ಕಂಡುಬರುತ್ತಿದ್ದ ಏರಿಳಿತಕ್ಕೆ ಸದ್ಯ ಬ್ರೇಕ್ ಬಿದ್ದಿದ್ದು, ಬೆಲೆಯು ಸ್ಥಿರವಾಗಿ ಮುಂದುವರಿಯುತ್ತಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆಯು ಆಭರಣ ಪ್ರಿಯರ ಗಮನ ಸೆಳೆಯುತ್ತಿದೆ. ಇಂದಿನ ಮಾರುಕಟ್ಟೆ ದರದಂತೆ ಪ್ರತಿ ಗ್ರಾಂ ಪ್ಲಾಟಿನಂ ಬೆಲೆ ₹5,671ರಷ್ಟಿದೆ. ಇನ್ನು 10 ಗ್ರಾಂ ಪ್ಲಾಟಿನಂ ಖರೀದಿಸುವವರಿಗೆ ₹56,710 ದರ ನಿಗದಿಯಾಗಿದೆ. ಆಧುನಿಕ ಶೈಲಿಯ ಆಭರಣಗಳನ್ನು ಇಷ್ಟಪಡುವ ಯುವಜನತೆಗೆ ಈ ಸ್ಥಿರ ದರವು ಪೂರಕವಾಗಿದೆ.












Click it and Unblock the Notifications