SWR: ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪೀಕ್ ಸಮಯದಲ್ಲಿ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಬೋಗಿ ಹೆಚ್ಚಿಸಲು ಪೂರ್ವ ಕರಾವಳಿ ರೈಲ್ವೆಯು ನಿರ್ಧರಿಸಿದೆ. ಜೊತೆಗೆ ಚನ್ನಸಂದ್ರ ನಿಲ್ದಾಣದಲ್ಲಿ ನಿಲುಗಡೆ ರದ್ದತಿ ಮುಂದುವರಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲು (18463) ಏಪ್ರಿಲ್ 01 ರಿಂದ 30 ರವರೆಗೆ ಒಂದು ಎಸಿ ತ್ರಿ ಟೈಯರ್ ಕೋಚ್ ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಬರುವ ಕೆಎಸ್‌ಆರ್ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲು (18464) ಸಹ ಒಂದು ತಿಂಗಳ ಕಾಲ ಎಸಿ ತ್ರಿ ಟೈಯರ್ ಕೋಚ್‌ನೊಂದಿಗೆ ಕಾರ್ಯಾಚರಣೆ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಮುಕ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಹೇಳಿದರು.

ಚನ್ನಸಂದ್ರ ನಿಲ್ದಾಣ ಸ್ಟಾಪ್ ರದ್ದು ವಿಸ್ತರಣೆ
ಚನ್ನಸಂದ್ರ ರೈಲು ನಿಲ್ದಾನಗಳಲ್ಲಿ ಪಾದಚಾರಿ ಸೇತುವೆಯ ಇಳಿಜಾರು ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಈ ಕೆಎಸ್‌ಆರ್ ಬೆಂಗಳೂರು-ಅನಂತಪುರ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66559/66560) ಹಾಗೂ ಕೆಎಸ್‌ಆರ್ ಬೆಂಗಳೂರು-ಕೋಲಾರ-ಬೆಂಗಳೂರು ಕಂಟೋನ್ಮೆಂಟ್ ಡೆಮು ರೈಲುಗಳ (66591/66592) ಚನ್ನಸಂದ್ರ ನಿಲ್ದಾಣದಲ್ಲಿ ನಿಲುಗಡೆ ರದ್ದತಿಯನ್ನು ಮುಂದಿನ ಮೇ 31ರವರೆಗೆ ವಿಸ್ತರಿಸಲಾಗಿದೆ.
ಹೂಡಿ ಹಾಲ್ಟ್: ತಾತ್ಕಾಲಿಕ ನಿಲುಗಡೆ ವಿಸ್ತರಣೆ
ನಿತ್ಯ ಸಂಚರಿಸುವ ಪ್ರಯಾಣಿಕರ ಅನುಕೂಲ ನೋಡಿಕೊಂಡು ಬೆಂಗಳೂರಿನ ಹೂಡಿ ಹಾಲ್ಟ್ ನಿಲ್ದಾಣದಲ್ಲಿ ನಿಲುಗಡೆ ನೀಡುತ್ತಿದ್ದ ಜೋಲಾರ್‌ಪೇಟೆ-ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟೆ ಮೆಮು ರೈಲಿನ (16519/16520) ತಾತ್ಕಾಲಿಕ ನಿಲುಗಡೆಯನ್ನು ಜೂನ್ 1ರಿಂದ ನವೆಂಬರ್ 30ರವರೆಗೆ ಆರು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.
ರೈಲುಗಳ ಸಮಯ ಪರಿಷ್ಕರಣೆ
ವಿರಂಗನ ಲಕ್ಷ್ಮಿಬಾಯಿ ಝಾನ್ಸಿ ಜಂಕ್ಷನ್‌ನಿಂದ ಹೊಡವು ಹಜರತ್ ನಿಜಾಮುದ್ದೀನ್-ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ (12782) ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕೃರಣೆ ಮಾಡಲಾಗಿದೆ. ಈ ಹೊಸ ಸಮಯದಡಿ ರೈಲು ಆಗಮನ ನಿರ್ಗಮನವು ಮುಂದಿನ ಮೇ 25 ಜಾರಿಗೆ ಬರಲಿದೆ. ಈ ಹಿಂದೆ ಹಿಂದೆ 11:20 ಗಂಟೆಯ ಬದಲಿಗೆ 11:15 ಗಂಟೆಗೆ ಮತ್ತು 11:28 ಗಂಟೆಯ ಬದಲಿಗೆ 11:23 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications