NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್

ದಾಂಡೇಲಿ: ಉತ್ತರ ಕರ್ನಾಟಕದ ಸುಮಾರು ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೇವೆ ನೀಡುವ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್‌ಗಳು ರಾಜ್ಯ, ಹೊರ ರಾಜ್ಯದವರೆಗೂ ಉತ್ತಮ ಸೇವೆ ನೀಡುತ್ತಿವೆ. ಇದೀಗ ದಾಂಡೇಲಿಯಿಂದ ರಾಜಧಾನಿ ಬೆಂಗಳೂರಿಗೆ ಅತ್ಯುತ್ತಮ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವ 2 ಪಲ್ಲಕ್ಕಿ ಬಸ್‌ಗಳ ಸಂಚಾರಕ್ಕೆ ಮಾಜಿ ಸಚಿವ, ಶಾಸಕ ಆರ್‍‌.ವಿ.ದೇಶಪಾಂಡೆ ಅವರು ಚಾಲನೆ ನೀಡಿದ್ದಾರೆ.

ದಾಂಡೇಲಿಯಿಂದ ಬೆಂಗಳೂರಿಗೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಉತ್ತರ ಕರ್ನಾಟಕ, ಕರಾವಳಿ ಭಾಗದಿಂದ ಬೆಂಗಳೂರಿಗೆ ಬರುವವರಿಗೆ ಅನುಕೂಲವಾಗುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (NWKRTC) ನೂತನ ಪಲ್ಲಕ್ಕಿ ಹವಾನಿಯಂತ್ರಣ ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ.

NWKRTC

ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಕ್ಷೇಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯ ಒದಗಿಸುವುವ ಗುರಿ ಹಾಕಿಕೊಂಡಿದೆ. ಈ ಭಾಗದ ಉದ್ಯೋಗಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಬಸ್ ಸೇವೆಗಳು ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವ ನೀಡಲಿವೆ ಎಂದು ಆರ್.ವಿ.ದೇಶಪಾಂಡೆ ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಬಸ್ ಸೇವೆ

NWKRTC ಸಂಸ್ಥೆ ಇತ್ತೀಚೆಗೆ ತನ್ನ ಬಸ್ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಫೆಬ್ರವರಿ/ಮಾರ್ಚ್ 2026ರಲ್ಲಿ 140 ಸರಿಗೆ (ಕೆಂಪು) ಬಸ್‌ಗಳು, 2 ಪಲ್ಲಕ್ಕಿ ಬಸ್‌ಗಳು ಮತ್ತು 1 ಎಸಿ ಬಸ್‌ಗಳು ನಿಗಮಕ್ಕೆ ಸೇರ್ಪಡೆ ಆಗಿವೆ. ದಾಂಡೇಲಿ ಹಾಗೂ ಬೆಂಗಳೂರಿಗೆ ಇನ್ನಷ್ಟು ಬಸ್‌ಗಳ ಬೇಕೆಂಬ ಅದರಲ್ಲೂ ಸಾರ್ವಜನಿಕ ಸಾರಿಗೆ ಬಸ್‌ಗೆ ಬೇಡಿಕೆ ಇತ್ತು. ಅದೀಗ ಈಡೇರಿದೆ. 2 ಪಲ್ಲಕ್ಕಿ ಬಸ್‌ಗಳು ದಾಂಡೇಲಿ - ಬೆಂಗಳೂರು ಮಾರ್ಗದಲ್ಲಿ ನಿತ್ಯ ಸಂಚರಿಸಲಿದ್ದು, ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿಗರು, ಉದ್ಯೋಗಿಗಳು ಮತ್ತು ಸ್ಥಳೀಯರಿಗೆ ಹೆಚ್ಚುವರಿ ಉತ್ತಮ ಸಾರಿಗೆ ಲಭ್ಯವಾಗದಂತಾಗಿದೆ.

ಪಲ್ಲಕ್ಕಿ ಎಂದರೆ ನಾನ್ ಎಸಿ ಸ್ಲೀಪರ್ ಬಸ್ (Non-Air Conditioned Sleeper Coach) ಆಗಿದ್ದು, ದೂರ/ಸುದೀರ್ಘ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬಸ್ ಆಗಿದೆ. ದೂರದ ಪ್ರಯಾಣಕ್ಕನುಗುಣವಾಗಿ ಬಸ್ ವಿನ್ಯಾಸ ಮಾಡಲಾಗಿದೆ. ಆರಾಮದಾಯಕ ಸ್ಲೀಪರ್ ಸೀಟುಗಳು ಇದರಲ್ಲಿವೆ. ಇನ್ನೂ ಇದೇ ವರ್ಷ ಮಾರ್ಚ್ 13 ರಂದು KSRTC ಸಂಸ್ಥೆಯಿಂದಲೂ 70 ಪಲ್ಲಕ್ಕಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದರು.

ಪಲ್ಲಕ್ಕಿ ಬಸ್ ಮಾರ್ಗ, ಟಿಕೆಟ್ ದರ ಮಾಹಿತಿ

ದಾಂಡೇಲಿ - ಬೆಂಗಳೂರು ಮಧ್ಯ ಸುಮಾರು 400-450 ಕಿಲೋ ಮೀಟರ್ ಅಂತರವಿದೆ. ದಾಂಡೇಲಿಯಿಂದ ಹೊರಟರೆ ಸುಮಾರು 9 ರಿಂದ 11 ಗಂಟೆಗಳಲ್ಲಿ ಬಸ್ ಗಮ್ಯಸ್ಥಾನ ತಲುಪಲಿದೆ. ಇನ್ನೂ ಮಾರ್ಗ ನೋಡುವುದಾದರೆ, ದಾಂಡೇಲಿಯಿಂದ ಯಲ್ಲಾಪುರ, ಸಿರ್ಸಿ, ಹುಬ್ಬಳ್ಳಿ/ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು (ಕೆಂಪೇಗೌಡ ಬಸ್ ನಿಲ್ದಾಣ)ಗೆ ಬಂದು ಸೇರಿಲಿದೆ.

ಒಬ್ಬರಿಗೆ ಪ್ರಯಾಣದ ದರ ಸುಮಾರು 600 ರಿಂದ 1,200 ರೂಪಾಯಿ ಎನ್ನಲಾಗಿದೆ. ಈ ಮಾರ್ಗಗಳು, ಸಮಯ ಕುರಿತು ಅಧಿಕೃತ ಮಾಹಿತಿ ಪ್ರಕಟಿಸಬೇಕಿದೆ. ನೀವು ಈ ಬಸ್‌ ಕುರಿತು ಹೆಚ್ಚಿನ ಮಾಹಿತಿಗೆ ಅಧಿಕೃತ ಜಾಲತಾಣ nwkrtc.karnataka.gov.in/ಬಸ್ ಟೈಮ್ ಟೇಬಲ್ ವಿಭಾಗದಲ್ಲಿ PDFಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ksrtc.in ಲಿಂಕ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+