ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಆರ್ಥಿಕ ವೇಗ 6.1%- ಐಎಂಎಫ್ ಹೊಸ ಅಂದಾಜು; ಚೀನಾ, ಅಮೆರಿಕಕ್ಕಿಂತ ಉತ್ತಮ

|
Google Oneindia Kannada News

ವಾಷಿಂಗ್ಟನ್, ಅ. 12: ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ವೇಗ ಇನ್ನಷ್ಟು ಕಡಿಮೆಗೊಳ್ಳಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಹೇಳಿದೆ. ಬಹುತೇಕ ಎಲ್ಲಾ ದೇಶಗಳ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತಲೂ ಕಡಿಮೆ ಇರಲಿದೆ. 2023ರಲ್ಲಿ ಜಾಗತಿಕವಾಗಿ ಆರ್ಥಿಕತೆ ಶೇ. 2.7ರಷ್ಟು ಮಾತ್ರ ಬೆಳೆಯಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಇದೇ ಜುಲೈ ತಿಂಗಳಲ್ಲಿ ಐಎಎಂಫ್ ಮಾಡಿದ್ದ ಅಂದಾಜು ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕತೆ ಶೇ. 2.9ರಷ್ಟು ಬೆಳೆಯಬಹುದು ಎನ್ನಲಾಗಿತ್ತು. ಈಗ ಐಎಂಎಫ್ ಮತ್ತೊಮ್ಮೆ ತನ್ನ ಅಂದಾಜನ್ನು ಪರಿಷ್ಕರಿಸಿದೆ.

ಪ್ರಸಕ್ತ 2022ರ ವಿಚಾರಕ್ಕೆ ಬಂದರೆ ಐಎಂಎಫ್ ಪ್ರಕಾರ ಜಾಗತಿಕ ಆರ್ಥಿಕತೆ ಭಾರೀ ಕುಸಿತ ಕಾಣಲಿದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ ಅಂತಾರಾಷ್ಟ್ರೀಯ ಆರ್ಥಿಕತೆ ಶೇ. 6ರಷ್ಟು ಬೆಳವಣಿಗೆ ಸಾಧಿಸಿತ್ತು. ಈ ವರ್ಷ, ಅಂದರೆ 2022ರಲ್ಲಿ ಅದರ ದರ ಶೇ. 3.2ರಷ್ಟು ಮಾತ್ರ ಇರಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.

Breaking: ಎರಡನೇ ಬಾರಿಗೆ ಕೋವಿಡ್‌ ಪಾಸಿಟಿವ್‌ ಆದ ಅಮಿತಾಬ್ ಬಚ್ಚನ್‌ Breaking: ಎರಡನೇ ಬಾರಿಗೆ ಕೋವಿಡ್‌ ಪಾಸಿಟಿವ್‌ ಆದ ಅಮಿತಾಬ್ ಬಚ್ಚನ್‌

ಕೋವಿಡ್‌ನಿಂದ ಶುರುವಾದ ಆರ್ಥಿಕ ದುಃಸ್ಥಿತಿಯ ಬೆಂಕಿಗೆ ರಷ್ಯಾ ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ತುಪ್ಪ ಸುರಿದಿದೆ. ಅಮೆರಿಕ ಸೇರಿದಂತೆ ಜಾಗತಿಕವಾಗಿ ಏರಿರುವ ಬ್ಯಾಂಕ್ ಬಡ್ಡಿ ದರಗಳೂ ಕೂಡ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಐಎಂಎಫ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, 2023ರಲ್ಲಿ ಹಲವು ದೇಶಗಳಿಗೆ ಆರ್ಥಿಕ ಹಿಂಜರಿತದ ಅನುಭವವಾಗಲಿದೆ ಎಂದು ಎಚ್ಚರಿಸಿದೆ.

IMF Cuts India Economic Growth Projection, Still Better Than Most Countries

"ಕೋವಿಡ್‌ನಿಂದ ಉಂಟಾಗಿದ್ದ ಆರ್ಥಿಕ ಪೆಟ್ಟಿನ ನೋವು ಸ್ವಲ್ಪ ಶಮನವಾಗುತ್ತಿರುವಂತೆಯೇ ಈ ವರ್ಷದ ಆಘಾತಗಳು ಮತ್ತೆ ನೋವು ತಂದಿವೆ" ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ಸಮಾಲೋಚಕ ಪಿಯೆರೆ ಓಲಿವಿಯೆರ್ ಗೌರಿಂಚಾಸ್ ಅಭಿಪ್ರಾಯಪಟ್ಟಿದ್ದಾರೆ.

6.1 ದರದಲ್ಲಿ ಭಾರತದ ಓಟ

ಐಎಂಎಫ್ ಅಕ್ಟೋಬರ್ 11ರಂದು ಪ್ರಕಟಿಸಿದ ವಿಶ್ವ ಆರ್ಥಿಕ ನೋಟದ ವರದಿಯಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಯ ಸಾಧ್ಯತೆಯನ್ನು ಬಿಂಬಿಸುವ ಪ್ರಯತ್ನ ಮಾಡಿದೆ.

ಅದರ ಪ್ರಕಾರ ಪ್ರಸಕ್ತ 2022ರ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 6.8ಕ್ಕೆ ಇಳಿಯಬಹುದು ಎಂದಿದೆ. ಆರ್‌ಬಿಐ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳೂ ಕೂಡ ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಿರೀಕ್ಷೆಗಿಂತ ಕಡಿಮೆ ಇರಬಹುದು ಎಂದು ಅಭಿಪ್ರಾಯಪಟ್ಟಿವೆ.

2023ರಲ್ಲಿ ಭಾರತದ ಬೆಳವಣಿಗೆಯ ವೇಗ ಶೇ. 6.1ಕ್ಕೆ ಇಳಿಯಬಹುದು ಎಂದೂ ಐಎಂಎಫ್ ಹೇಳಿದೆ.

IMF Cuts India Economic Growth Projection, Still Better Than Most Countries

ಬೇರೆ ದೇಶಗಳಿಗಿಂತ ಭಾರತ ಉತ್ತಮ

ಆರ್ಥಿಕ ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಭಾರತ ಮಾತ್ರವಲ್ಲ, ಇದು ಜಾಗತಿಕವಾಗಿ ನಡೆಯುತ್ತಿರುವ ಟ್ರೆಂಡ್ ಆಗಿದೆ. ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆಯೂ ಕುಸಿತ ಕಾಣುತ್ತಿದೆ. ಐಎಂಎಫ್ ಪ್ರಕಾರ, 2023ರಲ್ಲಿ ಅಮೆರಿಕ, ಜರ್ಮನಿ ಮೊದಲಾದ ಪ್ರಮುಖ ಆರ್ಥಿಕತೆಗಳ ವೇಗ ಶೇ. 2ನ್ನೂ ದಾಟುವುದಿಲ್ಲ.

ಕುತೂಹಲವೆಂದರೆ, ಅಮೆರಿಕದಂಥ ಮುಂದುವರಿದ ದೇಶಗಳಿಗಿಂತ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆ ತೋರಿದೆ. ಇಟಲಿ, ಜರ್ಮನಿಯಂಥ ದೇಶಗಳ ಆರ್ಥಿಕತೆ ಮೈನಸ್ ಮಟ್ಟಕ್ಕೆ ಇಳಿಯಬಹುದು. ಅಂದರೆ, ಆರ್ಥಿಕ ಬೆಳವಣಿಗೆ ಬದಲು ಆರ್ಥಿಕ ಹಿನ್ನಡೆ ಆಗಬಹುದು ಎಂಬುದನ್ನು ಐಎಂಎಫ್‌ನ ಅಂಕಿಅಂಶಗಳು ಹೇಳುತ್ತಿವೆ. ಯುದ್ಧದಲ್ಲಿ ಭಾಗಿಯಾಗಿರುವ ರಷ್ಯಾ ಕೂಡ ಮೈನಸ್ 2.3ರಷ್ಟು ಆರ್ಥಿಕ ಹಿನ್ನಡೆ ಹೊಂದಬಹುದು.

2023ರಲ್ಲಿ ಭಾರತದ ಆರ್ಥಿಕತೆ ಶೇ. 6.1ರ ವೇಗದಲ್ಲಿ ಬೆಳೆಯಬಹುದು. ಇದು ಬಹುತೇಕ ಎಲ್ಲಾ ಪ್ರಮುಖ ದೇಶಗಳಿಗಿಂತ ಉತ್ತಮ. ಜಾಗತಿಕವಾಗಿ ಮುಂದುವರಿದ ದೇಶಗಳ ಆರ್ಥಿಕತೆಯ ಸರಾಸರಿ ಬೆಳವಣಿಗೆ 2023ರಲ್ಲಿ ಶೇ. 1.1 ಇರಲಿದೆ. ಇದೇ ಅವಧಿಯಲ್ಲಿ ಭಾರತ, ಚೀನಾದಂಥ ಅಭಿವೃದ್ಧಿಶೀ ದೇಶಗಳ ಸರಾಸರಿ ಆರ್ಥಿಕತೆ ಬೆಳವಣಿಗೆ ಶೇ. 3.7ರಷ್ಟು ಇರಬಹುದು. ಅದರಲ್ಲೂ ಏಷ್ಯನ್ ಅಭಿವೃದ್ಧಿ ದೇಶಗಳು ಶೇ. 4.9ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂಬುದು ಐಎಂಎಫ್ ಮಾಡಿರುವ ಹೊಸ ಅಂದಾಜಿನ ಅಂಕಿ ಅಂಶಗಳು ಹೇಳುತ್ತವೆ.

2023ರ ಆರ್ಥಿಕ ಬೆಳವಣಿಗೆ ಪಟ್ಟಿ

ಅಮೆರಿಕ: ಶೇ. 1
ಜರ್ಮನಿ: ಶೇ. -0.3
ಫ್ರಾನ್ಸ್: ಶೇ. 0.7
ಇಟಲಿ: ಶೇ. -0.2
ಸ್ಪೇನ್: ಶೇ. 1.2
ಜಪಾನ್: ಶೇ. 1.6
ಬ್ರಿಟನ್: ಶೇ. 0.3
ಕೆನಡಾ: ಶೇ. 1.5
ಚೀನಾ: ಶೇ. 4.4
ಭಾರತ: ಶೇ. 6.1
ರಷ್ಯಾ: ಶೇ. -2.3
ಬ್ರೆಜಿಲ್: ಶೇ. 1
ಮೆಕ್ಸಿಕೋ: ಶೇ. 1.2
ಸೌದಿ ಅರೇಬಿಯಾ: ಶೇ. 3.7
ನೈಜೀರಿಯಾ: ಶೇ. 3
ಸೌತ್ ಆಫ್ರಿಕಾ: ಶೇ. 1.1

(ಒನ್ಇಂಡಿಯಾ ಸುದ್ದಿ)

English summary
International Monetary Fund has revised its estimates in its latest World Economy Outlook report and projected further slow in world economy. India's growth forecast is reduced to 6.1% in 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X