Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ
Gold Price Forecast April: ಚಿನ್ನ-ಬೆಳ್ಳಿ ಲೋಹಗಳಲ್ಲಿ ನಿರಂತರ ಇಳಿಕೆ ಮುಂದುವರಿದು, ಇಂದು ಮಾರ್ಚ್ 25ರಂದು ಮತ್ತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹದ ದರ ಹೇಗಿರುತ್ತದೆ ಎಂಬ ಚಿಂತೆ ಗ್ರಾಹಕರಲ್ಲಿ ಹಾಗೂ ಹೂಡಿಕೆದಾರರಲ್ಲಿ ಕಾಡುತ್ತಿದೆ. ಇರಾನ್-ಯುಎಸ್ ಯುದ್ಧವು ಚಿನ್ನದ ಬೆಲೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇರಾನ್ ಸಂಘರ್ಷವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಯುದ್ಧ ಆರಂಭವಾದಾಗಿನಿಂದ ಚಿನ್ನವು ಶೇ.15 ರಷ್ಟು ಕುಸಿತ ಕಂಡಿಸಿದೆ. ಹಾಗಾದರೆ ಏಪ್ರಿಲ್ ತಿಂಗಳಲ್ಲಿ ಚಿನ್ನದ ದರ ಯಾವ ರೀತಿ ಇರುತ್ತದೆ ಎಂಬ ಮುನ್ಸೂಚನೆ ಇಲ್ಲಿದೆ.
ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾದ ವೇಗದಷ್ಟೇ ನಿರಂತರವಾಗಿ ಕಡಿಮೆ ಆಗುತ್ತಿದೆ. ಈ ಬೆಳವಣಿಗೆ ಹೂಡಿಕೆದಾರರ ನಷ್ಟಕ್ಕೆ ಕಾರಣವಾಗಿದೆ. ಕಳೆದ ಜನವರಿಯಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕಿಂತ ಶೇಕಡಾ 22 ರಷ್ಟು ಕುಸಿತ ಕಂಡಿದೆ. ಪ್ರತಿ ಬಾರಿಯು ಹಣದುಬ್ಬರದ ಸಂದರ್ಭದಲ್ಲಿ ಬಂಗಾರವನ್ನು ಲಾಭದ, ರಕ್ಷಣೆಯ ದೃಷ್ಟಿಯಲ್ಲಿ ಖರೀದಿಸಲಾಗುತ್ತಿತ್ತು. ಅದರ ಮೇಲೆ ಹೂಡಿಕೆ ಹರಿದು ಬರುತ್ತದೆ. ಸದ್ಯ ಯುದ್ಧದ ಕಾರಣದಿಂದ ಇಂಧನ ಬೆಲೆ ಏರಿಕೆ ಆಗುತ್ತಿದ್ದು, ಅದರ ಬಡ್ಡಿ ದರವು ಹೆಚ್ಚಾಗಿಯೇ ಇರುತ್ತದೆ.

ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಯುದ್ಧವು ಹಣದುಬ್ಬರದ ಭಯ ಹೆಚ್ಚಿಸಿದೆ. ಇಂಧನದ ಬಡ್ಡಿದರ ಕಡಿತದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಇಂತಹ ಜಾಗತಿಕ ಬೆಳವಣಿಗೆಗಳ ಮೇಲೆ ಚಿನ್ನದ ಬೆಲೆ ಏರಿಳಿತವಾಗುತ್ತಿದೆ. ಈ ಬೆಳವಣಿಗೆ ಮುಂದಿನ ಅಲ್ಪಾವಧಿವರೆಗೆ ಹೀಗೆ ಮುಂದುವರಿಯುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಏಪ್ರಿಲ್ ಚಿನ್ನದ ಬೆಲೆ ಮುನ್ಸೂಚನೆ
ಬಂಗಾರದ ಬೆಲೆಯ ವಾತಾವರಣ ಸದಾ ಉತ್ತಮವಾಗಿರಬೇಕು. ಆದರೆ ಮೊದಲು ಹೆಚ್ಚಿನ ಲಾಭ ಗಳಿಕೆ ನಂತರ ದಿವಾಳಿತನವು ಕಂಡು ಬರುತ್ತಿದೆ ಎಂದು ವಿಶ್ವ ಚಿನ್ನದ ಮಂಡಳಿಯ ಹಿರಿಯ ಮಾರುಕಟ್ಟೆ ತಂತ್ರಜ್ಞ ಜಾನ್ ರೀಡ್ ಹೇಳಿದರು. 2025ರ ವಹಿವಾಟುಗಳು ಮುಕ್ತವಾಗಿದ್ದು, 2026ರ ಮೂರು ತಿಂಗಳು ಕಳೆದಿದ್ದೇವೆ. ಇನ್ನಷ್ಟು ಚಿನ್ನ ವಹಿವಾಟು ಕಾಣಲಿದ್ದೇವೆ. ಹೀಗಾಗಿ ದರದ ಮೇಲೆ ಹೆಚ್ಚಿನ ನಿರೀಕ್ಷೆ ಆತಂಕಗಳು ಇಂದಿನ ಸನ್ನಿವೇಶದಲ್ಲಿ ಸೃಷ್ಟಿಯಾಗಿವೆ ಎಂದಿದ್ದಾರೆ.
ಯುದ್ಧ ಆರಂಭದ ಬಳಿಕ ಬಂಗಾರದ ಒಂದು ದಿನದ ಜಿಗಿತ ಮತ್ತು ಕುಸಿತಗಳು ಗ್ರಾಹಕರು, ಹೂಡಿಕೆದಾರರಿಗೆ ತೀವ್ರ ಆಘಾತ ಉಂಟು ಮಾಡುತ್ತಿವೆ. ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲೂ ಸಹಿತ ಚಿನ್ನದ ಬೆಲೆಗಳು ಏರಿಕೆ ಆಗಿದ್ದು, ಹಣದುಬ್ಬರ ಉಂಟಾಗುತ್ತಿದ್ದಂತೆ ಮತ್ತೆ ಕುಸಿದವು.
2022ರ ನವೆಂಬರ್ ತಿಂಗಳಲ್ಲಿ ಪ್ರತಿ ಚಿನ್ನಕ್ಕೆ ಔನ್ಸ್ (31.1035 ಗ್ರಾಂ) ದರವು 1,650 ರೂ. ಇತ್ತು. 2026ರ ಜನವರಿಯಲ್ಲಿ ದಾಖಲೆಯ 5,595 ರೂ.ಗೆ ತಲುಪಿದೆ. ಇಂತಹ ಗಣನೀಯ ಏರಿಕೆಗೆ ವಿವಿಧ ದೇಶಗಳ ಕೇಂದ್ರ ಬ್ಯಾಂಕ್ಗಳು ಮತ್ತು ಸಾಂಸ್ಥಿಕ ಹೂಡಿಕೆದಾರರಿಂದ ಬಂದ ಹೆಚ್ಚಿನ ಬೇಡಿಕೆಯೇ ಕಾರಣವಾಯಿತು. ಈ ದಾಖಲೆಯ ಏರಿಕೆಯಿಂದ ಚಿಲ್ಲರೆ ಮಾರುಕಟ್ಟೆ ಮೇಲೆ ಒಂದಷ್ಟು ಪರಿಣಾಮ ಬೀರಿತು.
ಗರಿಷ್ಠ ಏರಿಕೆ ನಿರೀಕ್ಷೆ ಇದೆಯೇ?
ವಿಶ್ವದ ಪ್ರಮುಖ ಚಿನ್ನದ ಖರೀದಿದಾರ ಚೀನಾದಲ್ಲಿ ಷೇರು ಮಾರುಕಟ್ಟೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ದರ ಅತೀ ಹೆಚ್ಚು ಕುಸಿದಿದೆ. ಮೊನ್ನೆ ಸೋಮವಾರ (ಮಾರ್ಚ್ 23) ಮುಂಜಾನೆ ಚಿನ್ನದ ಬೆಲೆ ಕನಿಷ್ಠ 4,098 ಕ್ಕೆ ಇಳಿದಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ಅತ್ಯಧಿಕ ಇಳಿಕೆ ಎನ್ನಲಾಗಿದೆ. ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮಾರ್ಚ್ ಕಳೆಯಲು ಇನ್ನೊಂದು ವಾರ ಬಾಕಿ ಇದೆ. ನಂತರ ಏಪ್ರಿಲ್ ತಿಂಗಳಿನಲ್ಲೂ ಚಿನ್ನದ ದರ ಏರಿಳಿತ ಇದೇ ರೀತಿ ಮುಂದುವರಿಯಲಿದೆ. ಗರಿಷ್ಠ ಏರಿಕೆ ನಿರೀಕ್ಷೆ ಇಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ.
ಇರಾನ್ನ ಇಂಧನ ಮೂಲಸೌಕರ್ಯದ ಮೇಲೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆಗಳು ದಾಳಿಗಳ ಮಾಡುತ್ತಿದ್ದಂತೆ ಚಿನ್ನದ ಬೆಲೆಗಳು ಕೊನೆಯದಾಗಿ ಶೇ.2.5ರಷ್ಟು ಕುಸಿದಿತ್ತು. ಆಗ ಪ್ರತಿ ಔನ್ಸ್ಗೆ 4,377 ರೂ. ಕುಸಿಯಿತು. ಇರಾನ್-ಇಸ್ರೇಲ್ ಸಂಘರ್ಷದ ಬಳಿಕ ಜಾಗತಿಕ ಬೇಡಿಕೆ ಆಧಾರದಲ್ಲಿ ಚಿನ್ನ ಸಂಬಂಧಿ ವಿನಿಮಯ-ವಹಿವಾಟು ನಿಧಿಗಳು 7.9 ಬಿಲಿಯನ್ ಅಥವಾ 54.8 ಮೆಟ್ರಿಕ್ ಟನ್ಗಳಷ್ಟು ಹೊರಹರಿವು ದಾಖಲಿಸಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications