Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್‌ಗೆ ಏಕಾಏಕಿ ಪೆಟ್ಟು
Bengaluru Property: ಮಧ್ಯಪ್ರಾಚ್ಯದಲ್ಲಿನ ಯುದ್ಧವು ಒಂದು ತಿಂಗಳಾದರೂ ಮುಂದುವರಿದಿದೆ. ಇದೀಗ ಈ ಯುದ್ಧದ ಪರಿಣಾಮವು ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳ ಮೇಲೆ ಆಗಿದೆ. ಇರಾನ್ - ಇಸ್ರೇಲ್ ನಡುವಿನ ಸಂಘರ್ಷವು ದಶಕಗಳಿಂದ ನಡೆಯುತ್ತಿದ್ದರೂ, ಇದೀಗ ಅಮೆರಿಕ ನೇರವಾಗಿ ಇಸ್ರೇಲ್ ಬೆಂಬಲಕ್ಕೆ ನಿಂತಿರುವುದು ಸಂಘರ್ಷ ದೀರ್ಘಕಾಲ ಮುಂದುವರಿಯುವುದಕ್ಕೆ ಕಾರಣವಾಗಿದೆ. ಇರಾನ್ - ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ, ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಕಚ್ಚಾ ತೈಲ, ಗ್ಯಾಸ್ ಸಿಲಿಂಡರ್, ಪೆಟ್ರೋಲ್ - ಡೀಸೆಲ್, ಹೋಟೆಲ್ ತಿನಿಸು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಗೂ ಕಾರಣವಾಗಿದೆ. ಇದರಿಂದ ಬೆಂಗಳೂರು ರಿಯಲ್ ಎಸ್ಟೇಟ್ ಹಾಗೂ ಬೆಂಗಳೂರು ಪ್ರಾಪರ್ಟಿಯ ಮೇಲೂ ನೇರವಾದ ಪರಿಣಾಮ ಬೀರಿದೆ.
ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿನ ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಿಯಲ್ ಎಸ್ಟೇಟ್‌ನ ಮೇಲೆ ಮಧ್ಯಪ್ರಾಚ್ಯ ಯುದ್ಧದ ನೇರ ಪರಿಣಾಮ ಎದುರಾಗಿದೆ. ಭಾರತದ ಅತಿದೊಡ್ಡ ಕಟ್ಟಡ ಮಾರುಕಟ್ಟೆಯಾದ ಮುಂಬೈನಲ್ಲಿ ಇರಾನ್ VS ಇಸ್ರೇಲ್, ಅಮೆರಿಕದ ಯುದ್ಧದಿಂದಾಗಿ ಉಕ್ಕಿನ ಬೆಲೆಯಲ್ಲಿ ಏರಿಕೆಯಾಗಿದ್ದು, ಇದರ ಪರಿಣಾಮ ತೀವ್ರವಾಗಿದೆ. ಕಟ್ಟಡ ನಿರ್ಮಾಣ ವೆಚ್ಚಕ್ಕೆ ಪ್ರತಿ ಚದರ ಅಡಿಗೆ ಸರಿಸುಮಾರು 50 ರೂ. ಅಷ್ಟು ಹೆಚ್ಚಳವಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣ ವೆಚ್ಚವು ದುಬಾರಿಯಾಗಿದ್ದು, ಇದೀಗ ಯುದ್ಧದಿಂದ ಇನ್ನಷ್ಟು ಸಂಕಷ್ಟ ಎದುರಾಗಿದೆ.

ದೆಹಲಿ-ಎನ್‌ಸಿಆರ್ ಮತ್ತು ಬೆಂಗಳೂರಿನಂತಹ ಇತರ ಪ್ರಮುಖ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಡೆವಲಪರ್‌ಗಳು ಇದೇ ರೀತಿಯ ವೆಚ್ಚದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷವು ಭಾರತದ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಉಕ್ಕಿನ ಬೆಲೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಮುಖ್ಯವಾಗಿ ಎತ್ತರದ ಕಟ್ಟಡಗಳು ಮತ್ತು ಐಷಾರಾಮಿ ವಸತಿ ನಿರ್ಮಾಣದ ಡೆವಲಪರ್‌ಗಳ ಮೇಲೆ ಭಾರೀ ಒತ್ತಡವನ್ನು ತಂದೊಡ್ಡಿದೆ.
ಅನಾರೋಕ್ ಪ್ರಾಪರ್ಟಿ ಕಂಸಲ್ಟೆಂಟ್ಸ್ ಅಂದಾಜಿನ ಪ್ರಕಾರ ಉಕ್ಕಿನ ಬೆಲೆಗಳು ಸುಮಾರು ಶೇ.20 ಪ್ರತಿ ಶತದಷ್ಟು ಏರಿಕೆಯಾಗಿದೆ. ಅಲ್ಲದೆ ಪ್ರತಿ ಟನ್‌ಗೆ ಸುಮಾರು 72,000 ರೂ. ಮುಟ್ಟಿದೆ. ಅಲ್ಲದೆ ಇದರೊಂದಿಗೆ ಪೂರಕವಾಗಿ ಹೆಚ್ಚಿನ ಸಾಗಣೆ ವೆಚ್ಚಗಳು ಮತ್ತು ಯುದ್ಧ ಸಂಬಂಧಿತ ಸವಾಲುಗಳು ಸಹ ಕಟ್ಟಡದ ಸಾಮಾಗ್ರಿಗಳು ಹಾಗೂ ವೆಚ್ಚವನ್ನು ಹೆಚ್ಚಳ ಮಾಡಿದ್ದು, ಇದರ ಪರಿಣಾಮವು ರಿಯಲ್ ಎಸ್ಟೇಟ್‌ನ ಮೇಲೆ ಆಗುತ್ತಿದೆ. ಮನೆ ನಿರ್ಮಾಣ ವೆಚ್ಚವು ಹೆಚ್ಚಳವಾಗುತ್ತಿದ್ದು, ಮನೆ ನಿರ್ಮಾಣ ವಿಳಂಬ ಹಾಗೂ ಖರೀದಿ ಮತ್ತು ಮಾರಾಟದ ಮೇಲೂ ಪರಿಣಾಮ ಬೀರುತ್ತಿದೆ.
ಏಕಾಏಕಿ ಉಕ್ಕಿನ ಬೆಲೆ ಹೆಚ್ಚಳವಾಗಿರುವುದರಿಂದ ಈಗಾಗಲೇ ಪ್ರಮುಖ ನಗರಗಳಲ್ಲಿ ನಿರ್ಮಾಣ ವೆಚ್ಚ ಭಾರೀ ಮೊತ್ತದಲ್ಲಿ ಹೆಚ್ಚಳವಾಗಿದೆ. ಭಾರತದ ಅತಿದೊಡ್ಡ ಎತ್ತರದ ಕಟ್ಟಡ ಮಾರುಕಟ್ಟೆಯಾದ ಮುಂಬೈನಲ್ಲಿ ಉಕ್ಕಿನ ಬೆಲೆಗಳಲ್ಲಿನ ಏರಿಕೆಯು ನಿರ್ಮಾಣ ವೆಚ್ಚಕ್ಕೆ ಪ್ರತಿ ಚದರ ಅಡಿಗೆ ಸರಿಸುಮಾರು 50 ರೂ. ಹೆಚ್ಚಾಗುತ್ತಿದೆ. ದೆಹಲಿ-ಎನ್‌ಸಿಆರ್ ಮತ್ತು ಬೆಂಗಳೂರಿನಂತಹ ಇತರ ಪ್ರಮುಖ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಡೆವಲಪರ್‌ಗಳು ಇದೇ ರೀತಿಯ ವೆಚ್ಚದ ಒತ್ತಡ ಎದುರಾಗಿದೆ.
Bengaluru Property: ಸರಕು - ಸಾಗಾಣಿಕೆ ವೆಚ್ಚ ಹೆಚ್ಚಳ
ಇನ್ನು ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಸರಕು ಮತ್ತು ಸಾಗಾಣಿಕೆ ವೆಚ್ಚವು ಹೆಚ್ಚಾಗಿದೆ. ಪೆಟ್ರೋಲ್ - ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಕೆಲವು ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ಸೇರಿದಂತೆ ಎಲ್ಲಾ ಕಾರಣಗಳಿಂದ ರಿಯಲ್ ಎಸ್ಟೇಟ್‌ಗೆ ಪೆಟ್ಟು ಬಿದ್ದಂತೆ ಆಗಿದೆ.












Click it and Unblock the Notifications