Water Tank Vastu: ಮನೆಯಲ್ಲಿ ನೀರಿನ ಟ್ಯಾಂಕ್ ಇದೆಯೇ? ವಾಸ್ತು ನಿಯಮಗಳು ತಿಳಿದುಕೊಳ್ಳಿ

ಮನೆ ಕಟ್ಟುವಾಗ ಧರ್ಮಭೇದವಿಲ್ಲದೆ ಅನೇಕರು ವಾಸ್ತು ಶಾಸ್ತ್ರವನ್ನು ಅನುಸರಿಸುತ್ತಾರೆ. ವಾಸ್ತು ತಜ್ಞರ ಪ್ರಕಾರ ಮನೆಯ ಅಡಿಪಾಯದಿಂದ ಹಿಡಿದು ಮೆಲ್ಬಾಗದವರೆಗು ಎಲ್ಲವು ವಾಸ್ತು ಪ್ರಕಾರ ಕಟ್ಟುತ್ತಾರೆ. ಮನೆಯ ನೀರಿನ ಟ್ಯಾಂಕ್ ಕೂಡ ವಾಸ್ತು ಪ್ರಕಾರ ಇಡಬೇಕು ಎಂದು ಹೇಳಲಾಗುತ್ತದೆ.ನೀರಿನ ಟ್ಯಾಂಕ್ ತುಂಬಾ ಭಾರವಾಗಿರುವುದರಿಂದ ಅದರ ದಿಕ್ಕು ಮತ್ತು ಸ್ಥಳದ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ ನೀರಿನ ಟ್ಯಾಂಕ್ ನಿರ್ಮಾಣದಲ್ಲಿ ಸಮಸ್ಯೆಯಿಲ್ಲ, ಆದರೆ ಕೆಲವರು ಟ್ಯಾಂಕ್ ಭಾರವಾಗಿರಲಿ ಎಂಬ ಕಾರಣಕ್ಕೆ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸುತ್ತಾರೆ. ಈ ದಿಕ್ಕಿನಲ್ಲಿ ಭಾರ ಇರಬೇಕು ಎಂಬುದು ಸರಿ. ಆದರೆ ಆ ಭಾರವು ನೀರಿನ ರೂಪದಲ್ಲಿ ಇರಬಾರದು ಎಂದು ವಾಸ್ತು ಹೇಳುತ್ತದೆ. ನೀರಿನ ಟ್ಯಾಂಕ್ ಅನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ.

Water Tank Vastu Tips for Home

ಇನ್ನೂ ನೀರು ದ್ರವ ರೂಪ ಹೊಂದಿರುವುದರಿಂದ ಸರಿಯಾದ ವಾಸ್ತು ದಿಕ್ಕಿನಲ್ಲಿ ಇರದಿದ್ದರೆ ಹಣಕಾಸಿನ ತೊಂದರೆ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನಲಾಗುತ್ತದೆ. ಈ ಕಾರಣದಿಂದ ಈಶಾನ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸುವುದು ತಪ್ಪು ಎಂದು ತಜ್ಞರ ಹೇಳುತ್ತಾರೆ. ಈ ಭಾಗ ಸದಾ ಹಗುರವಾಗಿರಬೇಕು. ಇಲ್ಲಿ ಟ್ಯಾಂಕ್ ನಿರ್ಮಿಸುವುದಾಗಲಿ, ಇಡುವುದಾಗಲಿ ಮಾಡಿದರೆ ಆರ್ಥಿಕ ನಷ್ಟಗಳು ಹಾಗೂ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಅದೇ ರೀತಿ ಆಗ್ನೇಯ ದಿಕ್ಕಿನಲ್ಲಿ ಕೂಡ ಟ್ಯಾಂಕ್ ನಿರ್ಮಿಸುವುದು ಸೂಕ್ತವಲ್ಲ. ಇದು ಅಗ್ನಿ ತತ್ತ್ವದ ಸ್ಥಳವಾಗಿರುವುದರಿಂದ ನೀರು ಮತ್ತು ಅಗ್ನಿಯ ಸಂಘರ್ಷದಿಂದ ಅಪಘಾತಗಳ ಸಾಧ್ಯತೆ ಇರುತ್ತದೆ. ಮನೆಯ ಮಧ್ಯಭಾಗದಲ್ಲಿ ಯಾವುದೇ ಭಾರ ಇರಬಾರದು ಆದ್ದರಿಂದ ಟ್ಯಾಂಕ್‌ನ್ನು ಅಲ್ಲಿ ಇಡುವುದನ್ನು ತಪ್ಪಿಸಬೇಕು.

ನೀರಿನ ಟ್ಯಾಂಕ್‌ನ್ನು ನೇರವಾಗಿ ಸ್ಲ್ಯಾಬ್ ಮೇಲೆ ಇಡುವ ಬದಲು ಕನಿಷ್ಠ 1 ಅಥವಾ 2 ಅಡಿ ಎತ್ತರದ ಕಟ್ಟೆಯನ್ನು ನಿರ್ಮಿಸಿ ಅದರ ಮೇಲೆ ಇಡುವುದು ಉತ್ತಮ. ಇದರಿಂದ ಸ್ಲ್ಯಾಬ್ ಮೇಲೆ ಒತ್ತಡ ಕಡಿಮೆ ಆಗುತ್ತದೆ ಮತ್ತು ತೇವಾಂಶ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಸೋರಿಕೆ ಇದ್ದರೆ ತಕ್ಷಣ ದುರಸ್ತಿ ಮಾಡಬೇಕು. ವಾಸ್ತು ಪ್ರಕಾರ ನೀರು ಸೋರಿಕೆ ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಜ್ಞರ ಹೇಳುತ್ತಾರೆ.

ವಾಸ್ತು ತಜ್ಞರ ಅಭಿಪ್ರಾಯದಂತೆ ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ಸ್ವಲ್ಪ ಎತ್ತರದಲ್ಲಿ ಕಂಬಗಳನ್ನು ನಿರ್ಮಿಸಿ ಅದರ ಮೇಲೆ ನೀರಿನ ಟ್ಯಾಂಕ್ ಇಡುವುದು ಉತ್ತಮ ಪರಿಹಾರವಾಗಿದೆ. ಇದರ ಜೊತೆಗೆ ಟ್ಯಾಂಕ್‌ನ ಸ್ವಚ್ಛತೆಯೂ ಬಹಳ ಮುಖ್ಯವಾಗಿದೆ. ನಿಯಮಿತವಾಗಿ ಟ್ಯಾಂಕ್ ಸ್ವಚ್ಛಗೊಳಿಸದೇ ಇದ್ದರೆ ನೀರಿನ ಗುಣಮಟ್ಟ ಹಾಳಾಗಬಹುದು ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ತಿಂಗಳಿಗೆ ಕನಿಷ್ಠ ಒಂದು ಬಾರಿ ಟ್ಯಾಂಕ್ ಕ್ಲೀನ್ ಮಾಡುವುದು ಒಳ್ಳೆಯದು.

ಹಾಗೆಯೇ ಟ್ಯಾಂಕ್ ಮೇಲೆ ಮುಚ್ಚಳ ಹಾಕುವುದು ಅತ್ಯಂತ ಅಗತ್ಯ. ಇದರಿಂದ ಧೂಳು, ಕೀಟಗಳು ಮತ್ತು ಕಸದ ಪದಾರ್ಥಗಳು ಒಳಗೆ ಹೋಗುವುದನ್ನು ತಡೆಯಬಹುದು. ಸ್ವಚ್ಛ ಮತ್ತು ಸುರಕ್ಷಿತ ನೀರಿನ ಬಳಕೆಗಾಗಿ ಈ ಸಣ್ಣ ಕ್ರಮಗಳನ್ನೂ ಪಾಲಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+