Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು
Bengaluru Viral: ಬೆಂಗಳೂರು ಆಟೋ ಚಾಲಕರೊಬ್ಬರ ಮಾರ್ಕೆಂಟಿಗ್ ಸ್ಟ್ಯಾಟರ್ಜಿಯು ನೆಟ್ಟಿಗರ ಗಮನ ಸೆಳೆದಿದ್ದು, ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಬೆಂಗಳೂರಿನ ಆಟೋ ಚಾಲಕರು ಎಷ್ಟು ಅಪ್ಡೇಟ್ ಆಗುತ್ತಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಇನ್ನು ಬೇಸಿಗೆ ಸಮಯದಲ್ಲಿ ಈ ಸೇವೆಯು ಅನುಕೂಲವಾಗಲಿದೆ ಎನ್ನುವ ಮಾತೂ ಕೇಳಿ ಬಂದಿದೆ. ಇಷ್ಟಕ್ಕೂ ಬೆಂಗಳೂರಿನ ಆಟೋ ಚಾಲಕ ತಮ್ಮ ಆಟೋದಲ್ಲಿ ಅಳವಡಿಸಿಕೊಂಡಿರುವುದೇನು, ಆ ಪೋಸ್ಟ್ ವೈರಲ್ ಆಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಆಟೋ ಚಾಲಕರ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದೆ. ಕೇಳಿದ ಜಾಗಕ್ಕೆ ಬರುವುದಿಲ್ಲ, ದುಬಾರಿ ಶುಲ್ಕವನ್ನು ಕೇಳುತ್ತಾರೆ ಹಾಗೂ ದರ್ಪದಿಂದ ವರ್ತನೆ ಮಾಡುತ್ತಾರೆ ಎನ್ನುವ ಭಾವನೆ ಕೆಲವರಲ್ಲಿ ಇದೆ. ಇದಕ್ಕೆ ಕೆಲವು ಆಟೋ ಚಾಲಕರ ವರ್ತನೆಯೂ ಕಾರಣ. ಕೆಲವು ಆಟೋ ಚಾಲಕರ ದುರ್ವತನೆಯಿಂದಾಗಿ ಇಡೀ ಆಟೋ ಚಾಲಕರ ಸಮೂಹವನ್ನು ಕೆಲವರು ಜಡ್ಜ್ ಮಾಡುವುದು ಸಹ ಇದೆ. ಆದರೆ, ಇದೀಗ ಆಟೋ ಚಾಲಕರೊಬ್ಬರ ವಿಶೇಷ ಸೇವೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಆಟೋ ಚಾಲಕರು ವಿಧಿಸಿರುವ ಶುಲ್ಕದ ಬಗ್ಗೆಯೂ ಚರ್ಚೆ ನಡೆದಿದೆ.

ಆಟೋ ಚಾಲಕನ ಪೋಸ್ಟ್ ವೈರಲ್
ಬೆಂಗಳೂರಿನ ಆಟೋ ಚಾಲಕರೊಬ್ಬರು, ಆಟೋದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಅಂಟಿಸಿರುವ ಬರಹವು ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಆಟೋ ಚಾಲಕರೊಬ್ಬರು ಪ್ರೀಮಿಯಂ ಆಟೋಗೆ ಸ್ವಾಗತ.. ಎನ್ನುವ ಅಡಿ ಬರಹದೊಂದಿಗೆ ಅಂಟಿಸಿರುವ ಪೋಸ್ಟ್ ಹಾಗೂ ಸೇವೆ ವೈರಲ್ ಆಗುತ್ತಿದೆ.
30 ನಿಮಿಷಗಳ ಕಾಲ ಫ್ಯಾನ್ ಕೇವಲ 10 ರೂ.
ಹೊಸ ತಣ್ಣೀರಿನ ಬಾಟಲ್ 500 ಎಂಎಲ್ 12 ರೂ.
ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಯಾವುದೇ ಪಿನ್ ಲಭ್ಯವಿದೆ ಮತ್ತು ಚಾರ್ಜ್ ಮಾಡಬಹುದು ಎನ್ನುವ ಬರಹ ಇದೀಗ ಗಮನ ಸೆಳೆದಿದೆ. ಬೇಸಿಗೆ ಸಮಯದಲ್ಲಿ ಈ ಸೇವೆಗಳು ತುಂಬಾ ಅನುಕೂಲವಾಗಲಿವೆ ಎಂದು ನೆಟ್ಟಿಗರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಶಗುನ್ ಓಹ್ರಿ (Shagun Ohri) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಈ ಆಟೋ ಚಾಲಕನಿಗೆ Ideal Customer Profile / ಗ್ರಾಹಕರಿಗೆ ಏನು ಅವಶ್ಯಕತೆ ಇದೆ ಎನ್ನುವುದು ಗೊತ್ತಿದೆ ಎಂದು ಹೇಳಿದ್ದಾರೆ.
Bengaluru’s auto drivers are getting increasingly creative. 🙏
— Indian Tech & Infra (@IndianTechGuide) March 22, 2026
(📷 - @ShagunOhri) pic.twitter.com/A0mBzkVnT7
ವೈರಲ್ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು ?
ಇನ್ನು ವೈರಲ್ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಣದುಬ್ಬರ ಪ್ರೇರಿತ ಸಮಾಜದಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಲು ನವೀನ ವಿಚಾರಗಳು, ಹೊಸ ಬ್ಯುಸಿನೆಸ್ ಐಡಿಯಾಗಳು ಚೆನ್ನಾಗಿವೆ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ. ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.












Click it and Unblock the Notifications