Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ
Gold Rate March 23: ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಮಾರ್ಚ್ 23ರ ಸೋಮವಾರ ಭರ್ಜರಿ ಇಳಿಕೆ ಕಂಡಿದೆ. ಮಧ್ಯಪ್ರಾಚ್ಯದ ಸಂರ್ಘದ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಭಾರೀ ಹೆಚ್ಚಳ ಕಂಡಿತ್ತು. ಇದೀಗ ಚಿನ್ನದ ಬೆಲೆಯು ಶೇ4.39% ರಷ್ಟು ಇಳಿಕೆ ಕಂಡಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಸಹ ಭರ್ಜರಿ ಇಳಿಕೆಯಾಗಿದೆ. ಮಾರ್ಚ್ 23 ರಂದು ಚಿನ್ನದ ಬೆಲೆಯು ಯಾರೂ ನಿರೀಕ್ಷೆ ಮಾಡದಷ್ಟು ಕುಸಿತ ಕಂಡಿದೆ.
ಸತತವಾಗಿ ಚಿನ್ನದ ಬೆಲೆ ಒಂದೇ ದಿನದಲ್ಲಿ ಎರಡು ಬಾರಿ ಇಳಿಕೆಯಾಗಿರುವುದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಇರಾನ್ ಸಂಘರ್ಷಕ್ಕೆ ಸಂಬಂಧಿಸಿದ ಉದ್ವಿಗ್ನತೆಗಳು ತೈಲ ಬೆಲೆಗಳ ಏರಿಳಿತಕ್ಕೆ ಕಾರಣವಾಗಿದೆ. ಯುಎಸ್ ಡಾಲರ್ ಮೌಲ್ಯವೂ ಸಹ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

ಚಿನ್ನ, ಬೆಳ್ಳಿ ಮತ್ತೆ ಕುಸಿತವಾಗಿದ್ದು Multi Commodity Exchange of India Ltd (MCX)ನಲ್ಲಿ ಚಿನ್ನದ ಬೆಲೆಯು ಶೇ 4.39% ಇಳಿಕೆ ಹಾಗೂ ಬೆಳ್ಳಿ ಬೆಲೆಯು ಶೇ. 3.58% ಇಳಿಕೆ ಆಗಿದೆ. ಮಾರ್ಚ್ 23 ರಂದು ಭಾರತೀಯ ಕಾಲಮಾನ 17:39ಕ್ಕೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 6,348 ರೂಪಾಯಿ ಅಂದರೆ ಶೇ4.39% ಇಳಿಕೆಯಾಗಿದ್ದು, 1,38,144 ರೂಪಾಯಿಗೆ ತಲುಪಿದೆ. ಬೆಳಿಗ್ಗೆ 10 ಗ್ರಾಂ ಚಿನ್ನದ ಬೆಲೆಯು 1,44,492 ರೂಪಾಯಿ ಆಗಿತ್ತು. ಬೆಳ್ಳಿ ಬೆಲೆಯು 8,123 ರೂಪಾಯಿ ಆಗಿದೆ. ಈ ಮೂಲಕ ಶೇ 3.58% ಇಳಿಕೆ ಆಗಿದೆ. ಪ್ರತಿ ಕೆಜಿಗೆ ಬೆಳ್ಳಿ ಬೆಲೆಯು 2,18,649 ರೂಪಾಯಿ ಆಗಿದೆ. ಹಿಂದಿನ ದರವು 2,26,772 ರೂಪಾಯಿ ಆಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾಮೆಕ್ಸ್ ಚಿನ್ನವು ಔನ್ಸ್‌ಗೆ 2.47% ಇಳಿಕೆಯಾಗಿದ್ದು, ಡಾಲರ್ 4,492.00ಕ್ಕೆ ತಲುಪಿದ್ದರೆ, ಕಾಮೆಕ್ಸ್ ಬೆಳ್ಳಿ ಬೆಲೆಯು ಶೇ 4.78% ಇಳಿಕೆಯಾಗಿ ಡಾಲರ್ 67.810 ಕ್ಕೆ ತಲುಪಿದೆ.
Gold Rate ಮಾರ್ಚ್ 23ರ ದಿನಾಂತ್ಯಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಚಿನ್ನದ ಬೆಲೆಯು ಮಾರ್ಚ್ 23ರ ದಿನಾಂತ್ಯಕ್ಕೆ 1 ಗ್ರಾಂಗೆ 10,174 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,01,740 ರೂ. ಆಗಿದೆ. ಈ ಮೂಲಕ 1 ಗ್ರಾಂನ ಮೇಲೆ 774 ರೂಪಾಯಿ ಹಾಗೂ 10 ಗ್ರಾಂನ ಮೇಲೆ 7,740 ರೂ. ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನಲ್ಲೂ ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 12,435 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,24,350 ರೂ. ಆಗಿದೆ. ಇನ್ನು 1 ಗ್ರಾಂನ ಮೇಲೆ 945 ರೂಪಾಯಿ ಹಾಗೂ 10 ಗ್ರಾಂನ ಮೇಲೆ 9,450 ರೂಪಾಯಿ ಭರ್ಜರಿ ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 18 ಹಾಗೂ 22 ಕ್ಯಾರೆಟ್‌ನಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 13,565 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,35,650 ರೂಪಾಯಿ ಆಗಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆಯು 1,032 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 10,320 ರೂಪಾಯಿ ಭರ್ಜರಿ ಇಳಿಕೆ ಕಂಡಿದೆ.
Gold Rate March 23: ಬೆಳ್ಳಿ ಬೆಲೆ ಎಷ್ಟಾಗಿದೆ
ಇನ್ನು ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 230 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 15 ರೂಪಾಯಿ ಹಾಗೂ ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ 2,30,000 ಆಗಿದೆ. ಇನ್ನು ಕೆ.ಜಿ ಬೆಳ್ಳಿ ಬೆಲೆಯು 15,000 ರೂಪಾಯಿ ಇಳಿಕೆಯಾಗಿದೆ.












Click it and Unblock the Notifications