Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
Gold: ಚಿನ್ನದ ಮೇಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ. ಚಿನ್ನದ ಬೆಲೆಯು ಕಳೆದ 10 ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇನ್ನು 1905ರಿಂದ 2026ರ ವರೆಗೆ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ. ಇಂದು ಚಿನ್ನದ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಭಾರತದ ಮಟ್ಟಿಗೆ ಚಿನ್ನವು ಆಪ್ತಕಾಲದ ಗೆಳೆಯ ಎಂದೇ ಹೇಳಬಹುದು. ಸಂಕಷ್ಟದ ಸಮಯದಲ್ಲಿ ಚಿನ್ನವು ಸಹಾಯಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಭಾರತೀಯರು ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ದಶಕಗಳಿಂದಲೂ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕೂ ಚಿನ್ನದ ಬೆಲೆಯೂ ಸಹ ಹೆಚ್ಚಳವಾಗುತ್ತಿದೆ.
ಭಾರತದಲ್ಲಿ ಚಿನ್ನವನ್ನು ಕೇವಲ ಆಭರಣಕ್ಕೆಂದು ಸೀಮಿತ ಮಾಡಿಲ್ಲ. ಅದೊಂದು ಸಂಪ್ರದಾಯವಾಗಿಯೂ, ಸುರಕ್ಷಿತ ಆದಾಯ ಮೂಲವಾಗಿಯೂ ಬೆಳೆದುಕೊಂಡು ಬಂದಿದೆ. ಮದುವೆ, ನಾಮಕರಣ ಹಾಗೂ ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ಕೊಡುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ. ಇನ್ನು ಭಾರತೀಯರು ತುರ್ತು ಸಂದರ್ಭಗಳಲ್ಲಿ ಚಿನ್ನವನ್ನು ಅಡಮಾನ ಇರಿಸಬಹುದು ಎನ್ನುವ ಧೈರ್ಯದಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಇದೆ. ಆದರೆ ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಹೆಚ್ಚಳವಾಗಿರುವ ಗ್ರಾಫ್ ಗಮನಿಸಿದರೆ, ಮುಂದಿನ ದಿನಗಳಲ್ಲಿ ಚಿನ್ನ ದುಬಾರಿ ಆಗಲಿದೆ. ಬಡವರು ಮಧ್ಯಮವರ್ಗದವರಿಗೆ ತುಸು ಕಷ್ಟವಾಗಬಹುದು ಎನ್ನುವಂತಿದೆ. ಆದರೆ, ಈಗಾಗಲೇ ಚಿನ್ನ ಖರೀದಿ ಮಾಡಿರುವವರಿಗೆ ಬಂಪರ್ ಲಾಭವನ್ನೇ ಚಿನ್ನ ತಂದಿದೆ.

1970ರಿಂದ ಚಿನ್ನದ ಬೆಲೆ ಹೆಚ್ಚಳ
1905ರಿಂದಲೂ ಚಿನ್ನದ ಬೆಲೆಯು ಏರಿಕೆಯ ಹಾದಿಯಲ್ಲೇ ಸಾಗಿದೆ. 1970ರ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. ಇದಾದ ನಂತರ 2000ನೇ ಸಾಲಿನಿಂದ ಚಿನ್ನಕ್ಕೆ ಶುಕ್ರದೆಸೆ ಎಂದೇ ಹೇಳಬಹುದು. 2000ರಲ್ಲಿ 10 ಗ್ರಾಂ ಚಿನ್ನದ ಬೆಲೆಯು 4,400 ರೂಪಾಯಿ ಇತ್ತು. ಅಲ್ಲಿಂದಾಚೆಗೆ ಚಿನ್ನದ ಬೆಲೆಯು ನಿರಂತರವಾಗ ಹೆಚ್ಚಳವಾಗುತ್ತಲ್ಲೇ ಬಂದಿದೆ. ಇನ್ನು 2060ರ ವೇಳೆಗೆ ಚಿನ್ನದ ಬೆಲೆಯು ಬರೋಬ್ಬರಿ 19 ಲಕ್ಷ ರೂ. ತಲುಪುವ ನಿರೀಕ್ಷೆ ಇದೆ.
ಹೌದು 1905ರಲ್ಲಿದ್ದ ಚಿನ್ನದ ಬೆಲೆಗೂ 2026ರ ಚಿನ್ನದ ಬೆಲೆಗೂ ಭಾರೀ ವ್ಯತ್ಯಾಸವಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಣಕಾಸು ತಜ್ಞ, ಎ.ಕೆ ಮಂಧನ್ ಅವರು ಚಿನ್ನದ ಬೆಲೆಯು ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಳವಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ವಿವರ ನೋಡೋಣ.
ಚಿನ್ನದ ಬೆಲೆ 1905 ರಿಂದ 2026 (10 ಗ್ರಾಂ ಚಿನ್ನದ ಬೆಲೆ ಹೆಚ್ಚಳದ ವಿವರ)
| ವರ್ಷ | ರೂಪಾಯಿ |
|---|---|
| 1900 | 5 |
| 1905 | 7 |
| 1910 | 10 |
| 1920 | 15 |
| 1925 | 18 |
| 1930 | 25 |
| 1935 | 50 |
| 1940 | 60 |
| 1945 | 65 |
| 1946 | 70 |
| 1947 | 80 |
| 1948 | 95 |
| 1949 | 94 |
| 1950 | 99 |
| 1951 | 98 |
| 1952 | 76 |
| 1953 | 73 |
| 1954 | 77 |
| 1955 | 79 |
| 1956 | 90 |
| 1957 | 90 |
| 1958 | 95 |
| 1959 | 102 |
| 1960 | 111 |
| 1961 | 119 |
| 1962 | 119 |
| 1963 | 99 |
| 1964 | 63 |
| 1965 | 71 |
| 1966 | 83 |
| 1967 | 102 |
| 1968 | 162 |
| 1969 | 176 |
| 1970 | 184 |
| 1971 | 193 |
| 1972 | 202 |
| 1973 | 278.50 |
| 1974 | 506 |
| 1975 | 540 |
| 1976 | 432 |
| 1977 | 486 |
| 1978 | 685 |
| 1979 | 1,937 |
| 1980 | 1,330 |
| 1981 | 1,670 |
| 1982 | 1,645 |
| 1983 | 1,800 |
| 1984 | 1,970 |
| 1985 | 2,130 |
| 1986 | 2,140 |
| 1987 | 2,570 |
| 1988 | 3,130 |
| 1989 | 3,140 |
| 1990 | 3,200 |
| 1991 | 3,466 |
| 1992 | 4,334 |
| 1993 | 4,140 |
| 1994 | 4,598 |
| 1995 | 4,680 |
| 1996 | 5,160 |
| 1997 | 4,725 |
| 1998 | 4,045 |
| 1999 | 4,234 |
| 2000 | 4,400 |
| 2001 | 4,300 |
| 2002 | 4,990 |
| 2003 | 5,600 |
| 2004 | 5,850 |
| 2005 | 7,000 |
| 2006 | 8,400 |
| 2007 | 10,800 |
| 2008 | 12,500 |
| 2009 | 14,500 |
| 2010 | 18,500 |
| 2011 | 26,400 |
| 2012 | 31,050 |
| 2013 | 29,600 |
| 2014 | 28,006 |
| 2015 | 26,343 |
| 2016 | 28,620 |
| 2017 | 29,667 |
| 2018 | 31,438 |
| 2019 | 35,220 |
| 2020 | 48,651 |
| 2021 | 48,720 |
| 2022 | 52,677 |
| 2023 | 65,337 |
| 2024 | 77,917 |
| 2025 | 1,35,260 |
| 2026 | 1,79,590 |
PRICE OF #GOLD IN INDIA 🇮🇳
— A K Mandhan (@A_K_Mandhan) February 15, 2026
(Price per 10 grams)
From 1905 to 2026.🔥
1900 - ₹ 5
1905 - ₹ 7
1910 - ₹ 10
1920 - ₹ 15
1925 - ₹ 18
1930 - ₹ 25
1935 - ₹ 50
1940 - ₹ 60
1945 - ₹ 65
1946 - ₹ 70
1947 – ₹80
1948 – ₹95
1949 – ₹94
1950 – ₹99
1951 – ₹98
1952 – ₹76
1953 –…
ಚಿನ್ನದ ಬೆಲೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಳ ಸಾಧ್ಯತೆ
ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಕಳೆದ 10 ವರ್ಷ, 20 ವರ್ಷಗಳ ಹಿಂದೆ ಚಿನ್ನ ಖರೀದಿ ಮಾಡಿದರೂ ಇಂದು ಆ ಚಿನ್ನಕ್ಕೆ ಭರ್ಜರಿ ಬೆಲೆ ಇದೆ. ಅದೇ ರೀತಿ ಈಗ ಚಿನ್ನ ಖರೀದಿ ಮಾಡಿದರೂ ಮುಂದಿನ 5 ಅಥವಾ 10 ವರ್ಷಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಒಟ್ಟಾರೆ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಯಾವುದೇ ನಷ್ಟವಿಲ್ಲ ಎಂದೇ ಹೇಳಬಹುದು ಎನ್ನುವುದು ತಜ್ಞರ ಮಾತಾಗಿದೆ.
ಚಿನ್ನದ ಹೂಡಿಕೆ ಎಂದೆಂದಿಗೂ ಸುರಕ್ಷಿತ
ಇನ್ನು ಚಿನ್ನದ ಹೂಡಿಕೆಯನ್ನು ಎಂದೆಂದಿಗೂ ಸುರಕ್ಷಿತ ಎಂದೇ ಪರಿಗಣಿಸಲಾಗುತ್ತದೆ. ಅಲ್ಪ ಅವಧಿಯಲ್ಲಿ ಚಿನ್ನದ ಬೆಲೆ ಇಳಿಕೆಯಾದರೂ, ದೀರ್ಘ ಅವಧಿಯಲ್ಲಿ ಚಿನ್ನದಿಂದ ಲಾಭ ನಿಶ್ಚಿತವಾಗಿದೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications