Get Updates
Get notified of breaking news, exclusive insights, and must-see stories!

ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ 3 ಕಿ.ಮೀ ನಡೆಸಿದ ಮಹಿಳಾ ಪೊಲೀಸ್ ಅಮಾನತು

ಭುವನೇಶ್ವರ, ಮಾರ್ಚ್ 30: ಗರ್ಭಿಣಿ ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣ ಉರಿಬಿಸಿಲಿನಲ್ಲಿ 3 ಕಿ.ಮೀ ನಡೆಸಿ ಅಮಾನವೀಯವಾಗಿ ನಡೆಸಿಕೊಂಡ ಮಹಿಳಾ ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮಯೂರ್ಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಬಿಕ್ರಮ್ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬೈಕ್ ನ ಹಿಂಬದಿ ಕುಳಿತಿದ್ದ 27 ವರ್ಷದ ಗರ್ಭಿಣಿ ಗುರುಬಿರಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸಲು ಬಿಕ್ರಮ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

ಈ ಘಟನೆ ವರದಿಯಾಗುತ್ತಿದ್ದಂತೆ ಮಯೂರ್ಭಂಜ್ ಎಸ್ಪಿ ಪರ್ಮಾರ್ ಸ್ಮಿಟ್ ಪರಶೋತ್ತಮ್ ದಾಸ್ ಸೋಮವಾರ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ ರನ್ನು ಅಮಾನತುಗೊಳಿಸಿದ್ದಾರೆ.

Odisha Police Suspended For Making Pregnant Woman Walk 3 Km

ಬಿಕ್ರಮ್ ಹೆಲ್ಮೆಟ್ ಧರಿಸಿದ್ದರೆ, ಗುರುಬರಿ ದರಿಸಿಲಿಲ್ಲ. ಗುರುಬರಿಯನ್ನು ಸ್ಥಳದಲ್ಲೇ ಬಿಟ್ಟು ದಂಡವನ್ನು ಪಾವತಿಸಲು ಬಿಕ್ರಮ್ ಅವರನ್ನು ಪೊಲೀಸ್ ಠಾಣೆಗೆ ಹೋಗುವಂತೆ ಶರತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೀನಾ ಬಕ್ಸಲ್ ಒತ್ತಾಯಿಸಿದರು.

ಈ ಘಟನೆಯಿಂದ ಅಸಹಯಕಳಾದ ಒಂಬತ್ತು ತಿಂಗಳ ಗರ್ಭಿಣಿ ತೀವ್ರವಾದ ಬಿಸಿಲಿನಲ್ಲಿ ಪೊಲೀಸ್ ಠಾಣೆಗೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿದ್ದರು.

Recommended Video

      U T Khadar ಚುನಾವಣೆಯ ಅರಿವನ್ನ ಮೂಡಿಸಿದ ಪರಿ ಇದು ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+