• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಂಡಮಾರತದ ಅಬ್ಬರ ಕುರಿತ ಅಪ್ಡೇಟ್ಸ್, ಸಹಾಯಕ್ಕಾಗಿ ಡಯಲ್ 1938

|

ನವದೆಹಲಿ, ಮೇ 03: ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಒಡಿಶಾ, ಪಶ್ಚಿಮ ಬಂಗಾಲ ಕರಾವಳಿಯ ಜನರ ಅನುಕೂಲಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 1938 ಸಹಾಯವಾಣಿ ಸಂಖ್ಯೆಗೆ ಚಾಲನೆ ನೀಡಿದೆ. ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಚಂಡಮಾರುತದ ಬಗ್ಗೆ ಅಪ್ಡೇಟ್ಸ್ ಹಾಗೂ ನೆರವು ಪಡೆಯಲು ಈ ಸಂಖ್ಯೆ ಬಳಸಿ, ಮಾಹಿತಿ ಪಡೆಯಬಹುದು.

ಈ ನಡುವೆ ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಲ ಭಾಗಗಳಲ್ಲಿ ಸಂಚರಿಸುತ್ತಿದ್ದ 170ಕ್ಕೂ ಅಧಿಕ ರೈಲುಗಳ ಓಡಾಟ ಮತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಒಡಿಶಾದಲ್ಲಿ 8 ಲಕ್ಷ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಡಿಶಾದಲ್ಲಿ ಅಬ್ಬರಿಸಿದ ಫೋನಿ ಚಂಡಮಾರುತದ ಚಿತ್ರಗಳು

ಫೋನಿ ಚಂಡಮಾರತ ಸಂತ್ರಸ್ತರಿಗೆ ನೆರವಾಗಲು ಭಾರತೀಯ ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿ ಆರ್ ಎಫ್) ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಎನ್ ಡಿಆರ್ ಎಫ್ ನ ಮುಖ್ಯಸ್ಥ ಎಸ್ಎನ್ ಪ್ರಧಾನ್ ಅವರು ಹೇಳಿದ್ದಾರೆ.

28 ತಂಡಗಳು ಒಡಿಶಾದ ಪುರಿಯಲ್ಲಿವೆ, 12 ತಂಡಗಳು ಆಂಧ್ರಪ್ರದೇಶದಲ್ಲಿ ಹಾಗೂ 6 ತಂಡಗಳು ಪಶ್ಚಿಮ ಬಂಗಾಲದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ತಂಡದಲ್ಲೂ ಡಿಐಜಿ ಶ್ರೇಣಿಯ ಅಧಿಕಾರಿಗಳಿದ್ದು, ರಕ್ಷಣೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ ಎಂದರು.

ಎನ್ ಡಿಆರ್ ಎಫ್ ತಂಡದಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಇಂಜಿನಿಯರ್, ಮುಳುಗು ತಜ್ಞರು, ಬೋಟ್, ಜೀವ ರಕ್ಷಕ ಔಷಧ, ಜಾಕೆಟ್ಸ್, ಸ್ಕೂಬಾ ಸೆಟ್, ಸುಧಾರಿತ ಸಂವಹನ ಸಾಧನ(ಕ್ಯೂಡಿಎ) ಸೇರಿದಂತೆ ಅನೇಕ ಉಪಕರಣಗಳಿವೆ ಎಂದು ಪ್ರಧಾನ್ ಹೇಳಿದರು.

ಫೋನಿ ಚಂಡಮಾರುತ ಸಹಾಯವಾಣಿ : +916742534177 ಉಳಿದಂತೆ ಜಿಲ್ಲಾವಾರು ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು ಈ ಕೆಳಗಿನ ಟ್ವೀಟಲ್ಲಿ ನೀಡಲಾಗಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The control room helpline number 1938 set up for cyclone Fani is now operational. The control room set up by the Ministry for Home Affairs would provide the latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more