ತಾಯಿ ಹಾಗೂ ಗರ್ಭಿಣಿ ಮಗಳ ಶವ 4 ದಿನ ರಸ್ತೆಯಲ್ಲೇ ಅನಾಥವಾಗಿ ಬಿದ್ದಿತ್ತು

ಕೇಂದ್ರಪರ, ಸೆಪ್ಟೆಂಬರ್ 23: ತಾಯಿ ಹಾಗೂ ಅವರ ಗರ್ಭಿಣಿ ಮಗಳ ಶವ ನಾಲ್ಕು ದಿನಗಳ ಕಾಲ ರಸ್ತೆಯ ಮೇಲೆಯೇ ಅನಾಥವಾಗಿ ಬಿದ್ದಿದ್ದ ಘಟನೆ ಒಡಿಶಾದ ಕೇಂದ್ರಪರದಲ್ಲಿ ನಡೆದಿದೆ.

ಗರ್ಭಿಣಿ ಮತ್ತವಳ ತಾಯಿಯನ್ನು ಕೊಲೆ ಮಾಡಿ ರಸ್ತೆಯ ಮೇಲೆ ಎಸೆದು ಹೋಗಿದ್ದರು, ನಾಲ್ಕು ದಿನಗಳ ಕಾಲ ಶವ ರಸ್ತೆಯಲ್ಲಿಯೇ ಇತ್ತು.ಅವರ ಶವದ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಟುಂಬ ಹಾಗೂ ಸ್ಥಳೀಯರು ರಾಜನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹುಲಿಯಾ ಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಮೀಳಾನಾಥ್(42), ಅವರ ಮಗಳು ಸತ್ಯಪ್ರಿಯ(22) ಕೊಲೆಯಾದವರು, ಅವರು ಸೆಪ್ಟೆಂಬರ್ 19ರಿಂದ ನಾಪತ್ತೆಯಾಗಿದ್ದರು ಎಂದು ಎಸ್‌ಡಿಪಿಒ ರಂಜನ್ ಕುಮಾರ್ ತಿಳಿಸಿದ್ದಾರೆ.

Bodies Of Woman, Pregnant Daughter Lie On Road For 4 Days In Odisha

ಒಂದು ದಿನದ ಬಳಿಕ ಶವ ಪತ್ತೆಯಾಗಿತ್ತು, ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಈ ಇಬ್ಬರು ಮಹಿಳೆಯರ ಕೊಲೆಯಾಗಿದೆ, ಆದರೆ ಪೊಲೀಸರು ಮಾತ್ರ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+