ಆಸ್ಪತ್ರೆಯಲ್ಲಿ ಮೃತ ಕೊವಿಡ್ ರೋಗಿಯ ದೇಹ ಕಚ್ಚಿ ತಿಂದ ಇಲಿಗಳು
ಇಂದೋರ್, ಸೆಪ್ಟೆಂಬರ್ 21: ಇಂದೋರ್‌ನ ಆಸ್ಪತ್ರೆಯೊಂದರಲ್ಲಿ ಕೊವಿಡ್ 19 ರೋಗದಿಂದ ಮೃತಪಟ್ಟಿದ್ ವ್ಯಕ್ತಿಯ ದೇಹವನ್ನು ಇಲಿಗಳು ಕಚ್ಚಿರುವ ಆರೋಪ ಕೇಳಿಬಂದಿದೆ.
ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು, ಶವಾಗಾರದಲ್ಲಿದ್ದ ವ್ಯಕ್ತಿಯ ದೇಹವನ್ನು ಕುಟುಂಬದವರಿಗೆ ಆಸ್ಪತ್ರೆ ಹಸ್ತಾಂತರ ಮಾಡಿತ್ತು ಆದರೆ ಕಾಲು ಹಾಗೂ ಮುಖವನ್ನು ಇಲಿಗಳು ಕಚ್ಚಿ ತಿಂದಿದ್ದವು.
ಆಸ್ಪತ್ರೆಯ ಬೇಜವಾಬ್ದಾರಿ ತನಕ್ಕೆ ರೋಗಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ನಾಲ್ಕು ಗಂಟೆಗಳಲ್ಲಿ ಹೇಗೆ ಕಚ್ಚಿ ತಿಂದಿವೆ ನೋಡಿ ಎಂದು ಕುಟುಂಬದವರು ಶವವನ್ನು ತೋರಿಸಿದ್ದಾರೆ. ಅವರು ಇದಕ್ಕೆ ಉತ್ತರ ನೀಡಲಿ ಬಳಿಕವಷ್ಟೇ ನಾವು ದೇಹವನ್ನು ಆಸ್ಪತ್ರೆಯಿಂದ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

ನಾವು ದೇಹವನ್ನು ನೋಡಿದಾಗ ಒಮ್ಮೆ ಗಾಬರಿಗೊಂಡೆವು ಕಣ್ಣುಗುಡ್ಡೆಗಳನ್ನು ಕಿತ್ತು ತಿಂದಿದ್ದವು, ಮುಖ, ಕಿವಿ, ಕಾಲು ಇಡೀ ದೇಹದಲ್ಲಿ ಕಚ್ಚಿದ ಗಾಯಗಳಿವೆ.
ಕುಟುಂಬದವರು ರಸ್ತೆಯಲ್ಲಿ ವ್ಯಕ್ತಿಯ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ.ಆಸ್ಪತ್ರೆ ಸಿಬ್ಬಂದಿ ಕುಟುಂಬದವರೆದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ. ಮೃತ ವ್ಯಕ್ತಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು ಎಂಬುದು ತಿಳಿದುಬಂದಿದೆ.












Click it and Unblock the Notifications