ಮೋದಿ, ಮೋದಿ ಎಂದು ಕೂಗಿದವರ ಕೈಕುಲುಕಿದ ಪ್ರಿಯಾಂಕಾ: ವಿಡಿಯೋ ವೈರಲ್

Recommended Video

      ಅಚ್ಚರಿ ಮೂಡಿಸಿದ ಪ್ರಿಯಾಂಕ ಗಾಂಧಿ ನಡೆ..!? | Oneindia Kannada

      ಇಂದೋರ್, ಮೇ 14: ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಮ್ಮ ಬೆಂಗಾಲವಲು ಪಡೆ ವಾಹನವನ್ನು ನಿಲ್ಲಿಸಿ ಮೋದಿ ಅವರ ಬೆಂಬಲಿಗರಿಗೆ ಶುಭ ಹಾರೈಸಿದ ವಿಡಿಯೋ ವೈರಲ್ ಆಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ವಿಮಾನ ನಿಲ್ದಾಣದಿಂದ ಆಗಮಿಸುತ್ತಿದ್ದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು ಕಂಡು ವಾಹನ ನಿಲ್ಲಿಸಲು ಸೂಚನೆ ನೀಡಿದರು.

      ಜನದಟ್ಟಣೆ ಇದ್ದ ರಸ್ತೆಯಲ್ಲಿ ಪ್ರಿಯಾಂಕಾ ಅವರ ವಾಹನ ಸಾಗುತ್ತಿತ್ತು. ಆಗ ಯುವಕರ ಗುಂಪೊಂದು 'ಮೋದಿ ಮೋದಿ' ಎಂದು ಘೋಷಣೆ ಕೂಗಿತು. ಕೂಡಲೇ ತಮ್ಮ ಕಪ್ಪು ಟಾಟಾ ಸಫಾರಿ ಎಸ್‌ಯುವಿ ನಿಲ್ಲಿಸಲು ಹೇಳಿದ ಪ್ರಿಯಾಂಕಾ ಕೆಳಕ್ಕಿಳಿದು ಬಂದು ಮೋದಿ ಬೆಂಬಲಿಗರತ್ತ ತೆರಳಿದರು. ಅವರ ಭದ್ರತಾ ಸಿಬ್ಬಂದಿ ಕೂಡ ಅವರನ್ನು ಹಿಂಬಾಲಿಸಿದರು. ಪ್ರಿಯಾಂಕಾ ಗಾಂಧಿ ನಗುತ್ತಾ ಮೋದಿ ಬೆಂಬಲಿಗರ ಕೈಕುಲುಕಿದರು. 'ನೀವು ಎಲ್ಲಿದ್ದೀರೋ ಅಲ್ಲಿ ಇದ್ದೀರಿ. ನಾನು ಎಲ್ಲಿರುವೆನೋ ಅಲ್ಲಿದ್ದೇನೆ. ನಿಮಗೆ ಶುಭವಾಗಲಿ' ಎಂದು ಪ್ರಿಯಾಂಕಾ ಹೇಳಿದರು.

      ಸೋಮವಾರ ರಟ್ಲಂನಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಪ್ರಚಾರ ನಡೆಸಿದ್ದ ವೇಳೆ ಪ್ರಿಯಾಂಕಾ ಗಾಂಧಿ, ತಮ್ಮ ಬೆಂಬಲಿಗರನ್ನು ಭೇಟಿ ಮಾಡಲು ಬ್ಯಾರಿಕೇಡ್ ಹಾರಿದ್ದ ವಿಡಿಯೋ ವೈರಲ್ ಆಗಿತ್ತು.

      ಪರಸ್ಪರ ಶುಭ ಹಾರೈಕೆ

      ಪ್ರಿಯಾಂಕಾ ಅವರ ಈ ಅನಿರೀಕ್ಷಿತ ನಡೆಯಿಂದ ಯುವ ಬಿಜೆಪಿ ಬೆಂಬಲಿಗರು ಅಚ್ಚರಿಗೊಳಗಾದರು. ತಮಗೆ ಶುಭ ಹಾರೈಸಿದ ಪ್ರಿಯಾಂಕಾ ಅವರಿಗೆ ಅವರೂ ಕೂಡ ಶುಭ ಹಾರೈಸಿದರು. ಕೆಲವರು ಪ್ರಿಯಾಂಕಾ ಅವರೊಂದಿಗೆ ಫೋಟೊ ಕೂಡ ತೆಗೆಸಿಕೊಂಡರು.

      ಬ್ಯಾರಿಕೇಡ್ ಹಾರಿದ ಪ್ರಿಯಾಂಕಾ

      ಕಾಂಗ್ರೆಸ್ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಅವರ ಪರ ಪ್ರಿಯಾಂಕಾ ಸೋಮವಾರ ಪ್ರಚಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್‌ನಿಂದ ಪ್ರತ್ಯೇಕಿಸಲಾಗಿದ್ದ ಮಹಿಳೆಯರ ಗುಂಪೊಂದು 'ಪ್ರಿಯಾಂಕಾ ದೀದಿ' ಎಂದು ಕೂಗಿದರು. ಅದನ್ನು ಕೇಳಿದ ಪ್ರಿಯಾಂಕಾ, ಅವರತ್ತ ನಡೆದು ಮರದ ಬ್ಯಾರಿಕೇಡ್ ದಾಟಿದರು. ಅವರ ಭದ್ರತಾ ಸಿಬ್ಬಂದಿ ಕೂಡ ಬ್ಯಾರಿಕೇಡ್ ಹಾರಿ ಅವರ ಜೊತೆ ಸಾಗಿದರು.

      ಆ ಮಹಿಳೆಯರೊಂದಿಗೆ ಬೆರೆತ ಪ್ರಿಯಾಂಕಾ ಕೆಲ ಸಮಯ ಅವರೊಂದಿಗೆ ಮಾತನಾಡಿ, ಕೈಕುಲುಕಿದರು. ಅನೇಕರ ಜತೆ ಸೆಲ್ಫಿ ತೆಗೆಸಿಕೊಂಡರು. ಇದರಿಂದ ಅವರ ಭದ್ರತಾ ಸಿಬ್ಬಂದಿ ಪೇಚಿಗೆ ಸಿಲುಕಿದರು.

      ನಾಲ್ಕನೆಯ ತಲೆಮಾರಿನ ಭೇಟಿ

      ನಾಲ್ಕನೆಯ ತಲೆಮಾರಿನ ಭೇಟಿ

      ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ 2009ರಲ್ಲಿ ಪ್ರಿಯಾಂಕಾ ಅವರ ತಾಯಿ ಸೋನಿಯಾ ಗಾಂಧಿ ಪ್ರಚಾರವೊಂದರಲ್ಲಿ ಪಾಲ್ಗೊಂಡಿದ್ದರು. ಅಜ್ಜಿ ಇಂದಿರಾ ಗಾಂಧಿ ಮತ್ತು ಮುತ್ತಾತ ಜವಹರಲಾಲ್ ನೆಹರೂ ಕೂಡ ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು.

      ಮಧ್ಯಪ್ರದೇಶದಲ್ಲಿ ಪ್ರಚಾರ

      ಮಧ್ಯಪ್ರದೇಶದಲ್ಲಿ ಪ್ರಚಾರ

      ಮಧ್ಯಪ್ರದೇಶದ ರಾಜ್ ಮೊಹಲ್ಲಾ ಪ್ರದೇಶದಕ್ಕೆ ತೆರಳಿದ ಪ್ರಿಯಾಂಕಾ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಾಥ್ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+