ಮಧ್ಯಪ್ರದೇಶ ಸಚಿವ ತುಳಸಿ ಸಿಲಾವತ್ ಹಾಗೂ ಪತ್ನಿಗೆ ಕೊರೊನಾ ಸೋಂಕು

ಭೋಪಾಲ್, ಜುಲೈ 29: ಮಧ್ಯಪ್ರದೇಶ ಸಚಿವ ತುಳಸಿ ಸಿಲಾವತ್ ಹಾಗೂ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

Recommended Video

      North Korea Kim Jong un ಯುದ್ಧದ ಬಗ್ಗೆ ಹೇಳಿದ್ದೇನೆ | Oneindia Kannada

      ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚನೆಯಂತೆ ಎಲ್ಲರೂ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಂಡಿದ್ದೆವು.ನಮಗ್ಯಾರಿಗೂ ಸೋಂಕಿನ ಲಕ್ಷಣಗಳಿರಲಿಲ್ಲ ಆದರೂ ಸೋಂಕಿದೆ ಎಂದು ಸಚಿವರು ತಿಳಿಸಿದ್ದಾರೆ.

      ಮುಖ್ಯಮಂತ್ರಿ ಸೂಚನೆ ಮೇರೆಗೆ ಕೊವಿಡ್ ಸ್ಕ್ರೀನಿಂಗ್‌ಗೆ ಒಳಗಾಗಿದ್ದೆ, ಯಾವುದೇ ಲಕ್ಷಣಗಳಿರಲಿಲ್ಲ. ನಮ್ಮಿಬ್ಬರಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ನಿಮ್ಮ ಶುಭ ಹಾರೈಕೆಯಿಂದ ಆದಷ್ಟು ಬೇಗ ಗುಣಮುಖರಾಗುತ್ತೇವೆ ಎಂಬ ಭರವಸೆ ಇದೆ.

      MP Minister Silawat, Wife Test Positive For Coronavirus

      ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಗೂ ಕೊರೊನಾ ಸೋಂಕು ತಗುಲಿದ್ದು, ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಶಿವರಾಜ್‌ ಸಿಂಗ್ ಚೌಹಾಣ್ ಖುದ್ದಾಗಿ ಸರಣಿ ಟ್ವೀಟ್ ಮಾಡಿದ್ದಾರೆ. ಯಾರು ತಮ್ಮ ಬಳಿ ಸಂಪರ್ಕ ಹೊಂದಿದ್ದಾರೋ ಅವರೆಲ್ಲರೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಿದ್ದಾರೆ.

      ನಮ್ಮನ್ನು ಯಾರು ಸಂಪರ್ಕ ಮಾಡಿದ್ದರೋ ಅವರು ಕಡ್ಡಾಯವಾಗಿ ಗೃಹ ಬಂಧನಕ್ಕೆ ಒಳಗಾಗಬೇಕು. ನಾನು ಕೂಡ ಗೃಹ ಬಂಧನಕ್ಕೊಳಗಾಗಿದ್ದೇನೆ. ರಾಜ್ಯದ ಜನತೆ ಎಚ್ಚರದಿಂದಿರುವಂತೆ ಸಲಹೆ ನೀಡಿದ್ದಾರೆ. ಕೊರೊನಾ ಲಕ್ಷಣಗಳು ಗೋಚರಿಸಿತ್ತು.

      ಬಳಿಕ ವರದಿಯಲ್ಲಿ ಪಾಸಿಟಿವ್ ಬಂದಿದೆ. ತಕ್ಷಣವೇ ಯಾರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರೋ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.ಮಧ್ಯಪ್ರದೇಶದಲ್ಲಿ 28,589 ಕೊರೊನಾ ಸೋಂಕಿತರಿದ್ದಾರೆ. 19791 ಮಂದಿ ಗುಣಮುಖರಾಗಿದ್ದಾರೆ. 820 ಮಂದಿ ಸಾವನ್ನಪ್ಪಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+