ವಧುವಿಗೆ ಕೊರೊನಾ; ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

ಭೋಪಾಲ್, ಏಪ್ರಿಲ್ 27: ವಧುವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವರ, ವಧು ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಸಂಗತಿ ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ನಡೆದಿದೆ. ಏಪ್ರಿಲ್ 19ರಂದು ವಧು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.

ಅವರ ಮದುವೆಯನ್ನು ಸೋಮವಾರ ಆಯೋಜಿಸಲಾಗಿದ್ದು, ವಧುವಿಗೆ ಸೋಂಕು ಇರುವ ಸಂಗತಿ ತಿಳಿಯುತ್ತಿದ್ದಂತೆ ಮದುವೆ ನಿಲ್ಲಿಸಲು ಸ್ಥಳೀಯ ಆಡಳಿತವೂ ಮುಂದಾಗಿತ್ತು.

Couple Ties Knot In PPE Kits As Groom Tests Corona Positive

"ವಧುವಿಗೆ ಕೊರೊನಾ ಸೋಂಕು ತಗುಲಿತ್ತು. ನಾವು ಮದುವೆ ನಿಲ್ಲಿಸಲು ಬಂದಿದ್ದೆವು. ಆದರೆ ಒತ್ತಾಯದ ಮೇರೆಗೆ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ಮದುವೆ ಕಾರ್ಯ ನಡೆಸಲಾಯಿತು. ಸೋಂಕು ಹರಡದಂತೆ ಇಬ್ಬರಿಗೂ ಪಿಪಿಇ ಕಿಟ್ ಧರಿಸಲು ನಿರ್ದೇಶನ ನೀಡಿ ಶೀಘ್ರವೇ ಮದುವೆ ಮಾಡಲಾಗಿದೆ" ಎಂದು ರತ್ಲಾಂ ತಹಸಿಲ್‌ದಾರ್ ನವೀನ್ ಗರ್ಗ್ ತಿಳಿಸಿದ್ದಾರೆ.

ಪಿಪಿಇ ಕಿಟ್ ಧರಿಸಿಯೇ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಕೆಲವು ಸಂಬಂಧಿಗಳು ಹಾಗೂ ಪೊಲೀಸರು ಇದ್ದರು.

ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್!
ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಭೋಪಾಲ್‌ನಲ್ಲಿ ಮೂರನೇ ಬಾರಿ ಕರ್ಫ್ಯೂ ವಿಸ್ತರಿಸಲಾಗಿದೆ. ದಿನನಿತ್ಯದ ಕೊರೊನಾ ಪ್ರಕರಣಗಳಲ್ಲೂ ಏರಿಕೆಯಾಗುತ್ತಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 485703 ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+