ಕುಡಿತ ಬಿಡಿಸಲು ಕೌನ್ಸೆಲಿಂಗ್ ಕೇಳಿದ್ದೇವೆ, ಆದರೆ ಕಲಿಯಲೂ ಕೂಡ ಕೌನ್ಸೆಲಿಂಗ್?

vಭೋಪಾಲ್, ಜೂನ್ 28: ಕುಡಿತವನ್ನು ಬಿಡಿಸಲು ಕೌನ್ಸೆಲಿಂಗ್ ಮಾಡುವುದು ಕೇಳಿದ್ದೇವೆ, ಆದರೆ ಇದೇ ಮೊದಲ ಬಾರಿಗೆ ಕುಡಿತ ಕಲಿಯಲು ಕೌನ್ಸೆಲಿಂಗ್‌ಗೆ ಹೋದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪತಿ ತನ್ನ ಪತ್ನಿಗೆ ಮದ್ಯಪಾನವನ್ನು ಕಲಿಸಲು ಕೌನ್ಸೆಲಿಂಗ್‌ಗೆ ಕರೆದೊಯ್ದ ವಿಚಿತ್ರ ಘಟನೆ ಇದು. ಮದುವೆಯಾಗಿಹತ್ತು ವರ್ಷ ಕಳೆದಿದೆ. ಗಂಡನಿಗೆ ಹೆಂಡತಿ ಹಾಗಿಬೇಕು ಹೀಗಿರಬೇಕು ಎನ್ನುವ ಆಸೆಯಿರುವುದು ಸಹಜ ಆದರೆ ಈ ಪತಿಗೆ ಹೆಂಡತಿ ಒಮ್ಮೆ ಮದ್ಯಪಾನ ಮಾಡಬೇಕು ಎನ್ನುವ ಆಸೆಯಿದೆ.

ಮನೆಯಲ್ಲಿನ ಇತರ ಸದಸ್ಯರೆಲ್ಲ ಮದ್ಯ ಸೇವಿಸುತ್ತಾರೆ. ಪತ್ನಿ ಕೂಡ ಮದ್ಯ ಸೇವನೆಯನ್ನು ಆರಂಭಿಸಬೇಕು. ಕನಿಷ್ಠ ಪಕ್ಷ ವಿಶೇಷ ಸಮಾರಂಭ, ಔತಣಕೂಟಗಳಲ್ಲಾದರೂ ಆಕೆ ಕುಡಿಯಬೇಕು ಎಂಬುದು ಆತನ ಆಸೆ.

counselling for start drinking

ಆತನ ತಾಯಿ. ತಂದೆ, ಸಹೋದರ, ಸಹೋದರಿಯರು, ಚಿಕ್ಕಮ್ಮ, ಅತ್ತೆ, ಸಹೋದರ ಸಂಬಂಧಿಗಳು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕುಡಿಯುತ್ತಾರೆ. ಪತ್ನಿ ಮಾತ್ರ ಕುಡಿಯುವುದಿಲ್ಲ. ಮದುವೆಯಾದ ಆರಂಭದ ದಿನಗಳಲ್ಲಿ ಆಕೆ ಮದ್ಯದಿಂದ ದೂರವಿರುವುದು ಆತನಿಗೆನೂ ಬೇಸರವೆನಿಸಲಿಲ್ಲ. ಆದರೆ ನಿಧಾನವಾಗಿ ಕುಡಿ ಎಂದು ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ. ಆದರಾಕೆ ನಿರಾಕರಿಸಿದಾಗ ಪತಿ- ಪತ್ನಿ ನಡುವೆ ಜಗಳ ಆರಂಭವಾಗಿದೆ, ಎಂದು ಆಪ್ತ ಸಮಾಲೋಚಕಿ ಶೈಲ್ ಆವಸ್ತಿ ಹೇಳುತ್ತಾರೆ.

ಮಹಿಳೆ ಇಚ್ಛೆಗೆ ವಿರುದ್ಧವಾಗಿ ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸುವ ಪ್ರಯತ್ನ ನಿಲ್ಲಿಸಿ ಎಂದು ಆಪ್ತ ಸಮಾಲೋಚಕರು ಮನವರಿಕೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ದಂಪತಿಗೆ ಮೂವರು ಮಕ್ಕಳಿದ್ದಾರೆ, ಮದುವೆಯಾದ ಆರಂಭದಲ್ಲೇ ಅವರ ನಡುವೆ ಮದ್ಯ ಕುಡಿಯುವ ವಿಚಾರಕ್ಕೆ ಜಗಳ ಆರಂಭವಾಗಿದ್ದು , ಅದು ತಾರಕಕ್ಕೇರಿದಾಗ ಪತ್ನಿ ಮಕ್ಕಳ ಸಮೇತ ತವರಿಗೆ ಹೋಗುತ್ತಿದ್ದಳು. ಕುಡಿಯುವುದಿರಲಿ ಮುಟ್ಟಲು ಸಹ ಆಕೆ ಒಪ್ಪಿಕೊಳ್ಳುತ್ತಿರಲಿಲ್ಲ, ಕಾರಣ ಆಕೆಯ ಮನೆಯಲ್ಲಿ ಯಾರು ಕೂಡ ಮದ್ಯ ಸೇವನೆ ಮಾಡುತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+