ಝೊಮೊಟೋ ಜಾಹೀರಾತಿನಲ್ಲಿ ಬೆಂಗಳೂರಿಗೆ ಅವಮಾನ
ಬೆಂಗಳೂರು, ಮೇ.22: ವಿಶ್ವದ ಹೊಟೇಲ್‌ಗಳನ್ನು ವಿಮರ್ಷೆ ಮಾಡುವ ಝೊಮೆಟೋ ಕಂಪೆನಿ ತನ್ನ ಉದ್ಯೋಗ ಸಂಬಂಧಿ ಜಾಹೀರಾತಿನಲ್ಲಿ ಬೆಂಗಳೂರನ್ನು ಅವಮಾನ ಮಾಡಿ ಬೆಂಗಳೂರಿಗರ ಅಕ್ರೋಶಕ್ಕೆ ತುತ್ತಾಗಿದೆ.
ಝೊಮೊಟೋ ತನ್ನ ದೆಹಲಿಯ ಉದ್ಯೋಗ ಕಚೇರಿಗಾಗಿ ಬೆಂಗಳೂರು ಮತ್ತು ದೆಹಲಿಯನ್ನು ಸಮೀಕರಣ ಮಾಡಿ ಟಿಕ್ಕಿಗಳಿಗಾಗಿ ನೂತನ ಜಾಹೀರಾತನ್ನು ವೆಬ್‌ಸೈಟ್‌ನಲ್ಲಿರುವ ಕ್ಯಾರಿಯರ್ ವಿಭಾಗದಲ್ಲಿ ಪ್ರಕಟಿಸಿತ್ತು. ಬೆಂಗಳೂರಿಗಿಂತ ದೆಹಲಿ ಶ್ರೇಷ್ಠ ಎಂಬ ಅರ್ಥ ಬರುವಂತೆ ಮೂರು ವಿಷಯಗಳನ್ನು ಸೇರಿಸಿ ಝೊಮೊಟೋ ಜಾಹೀರಾತು ತಯಾರಿಸಿತ್ತು.[ಬೆಂಗಳೂರಿಗೆ ಬರಬೇಡಿ: ಇನ್ಫಿ ನಾರಾಯಣಮೂರ್ತಿ]
ದೇಶದ ಐಟಿ ರಾಜಧಾನಿ ಪಟ್ಟ ಬೆಂಗಳೂರಿಗೆ ಯಾಕೆ? ದೆಹಲಿ ಯಾಕೆ ಆಗಬಾರದು ಎಂದು ಕೇಳಿತ್ತು. ಜೊತೆಗೆ ಬೆಂಗಳೂರಿಗಿಂತ ದೆಹಲಿಯಲ್ಲಿ ಅಗಲವಾದ ರಸ್ತೆಗಳಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ವಿಪರೀತವಾಗಿದ್ದು ಅಲ್ಲೇ ಜೀವನ ಕಳೆದು ಹೋಗುತ್ತಿದೆ. ರಾತ್ರಿಯ ಮ್ಯೂಸಿಕ್ ಪಾರ್ಟಿಗೆ ಬೆಂಗಳೂರಿನಲ್ಲಿ ಕತ್ತರಿ ಹಾಕಲಾಗಿದೆ. ಹೀಗಾಗಿ ಟೆಕ್ಕಿಗಳು ಬೆಂಗಳೂರು ಬಿಟ್ಟು ದೆಹಲಿಗೆ ಬನ್ನಿ ಎನ್ನುವ ಅರ್ಥವಿರುವ ಜಾಹೀರಾತನ್ನು ಪ್ರಕಟಿಸಿತ್ತು.[ಭಾರತದಲ್ಲಿ ನೆಲೆಸಲು ಬೆಂಗಳೂರೇ ಬೆಸ್ಟ್]
ಝೊಮೊಟೋ ಈ ರೀತಿ ಬೆಂಗಳೂರನ್ನು ಅವಮಾನ ಮಾಡಿದ್ದು ತಿಳಿಯುತ್ತಿದ್ದಂತೆ ಬೆಂಗಳೂರಿನ ಟೆಕ್ಕಿಗಳು ಸೋಷಿಯಲ್ ಮೀಡಿಯಾದಲ್ಲಿ ಝೊಮೊಟೋ ವಿರುದ್ಧ ಟೀಕೆಗಳ ಸುರಿಮಳೆ ಆರಂಭಿಸಿದ್ದಾರೆ.
ಇಂಟರ್‌ನೆಟ್‌ನಲ್ಲಿ ಅಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಕಂಪೆನಿ ಬೆಂಗಳೂರಿಗರಲ್ಲಿ ಕ್ಷಮೆಯಾಚಿಸಿದೆ. ರಿಯಾಲಿಟಿ ಚೆಕ್‌ಗಾಗಿ ಜಾಹೀರಾತನ್ನು ತಯಾರಿಸಿದ್ದು, ಯಾರನ್ನು ನೋವಿಸುವ ಉದ್ದೇಶ ಹೊಂದಿಲ್ಲ. ನಾವು ಬೆಂಗಳೂರನ್ನು ಪ್ರೀತಿಸುತ್ತಿದ್ದೇವೆ ಎಂದು ಝೊಮೊಟೋ ಉದ್ಯೋಗಿ ದಿಪೀಂದರ್ ಗೋಯಲ್ ಬ್ಲಾಗ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಝೊಮೊಟೋ ಜಾಹೀರಾತು:
ಝೊಮೋಟೋ ಜಾಹೀರಾತಿನಲ್ಲಿ ದೇಶದ ಐಟಿ ರಾಜಧಾನಿ ದೆಹಲಿ

ದೆಹಲಿ ಬೆಂಗಳೂರಿಗಿಂತ ಬೆಸ್ಟ್ !
ದೇಶದ ಐಟಿ ರಾಜಧಾನಿ ಪಟ್ಟ ಬೆಂಗಳೂರಿಗೆ ಯಾಕೆ? ದೆಹಲಿ ಯಾಕೆ ಆಗಬಾರದು? ಜೊತೆಗೆ ಬೆಂಗಳೂರಿಗಿಂತ ದೆಹಲಿಯಲ್ಲಿ ಅಗಲವಾದ ರಸ್ತೆಗಳಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ವಿಪರೀತವಾಗಿದ್ದು ಅಲ್ಲೇ ಜೀವನ ಕಳೆದು ಹೋಗುತ್ತಿದೆ. ರಾತ್ರಿಯ ಮ್ಯೂಸಿಕ್ ಪಾರ್ಟಿಗೆ ಬೆಂಗಳೂರಿನಲ್ಲಿ ಕತ್ತರಿ ಹಾಕಿದೆ .

ಕ್ಷಮೆ ಕೇಳಿದ ಕಂಪೆನಿ:
ರಿಯಾಲಿಟಿ ಚೆಕ್‌ಗಾಗಿ ಜಾಹೀರಾತನ್ನು ತಯಾರಿಸಿದ್ದು, ಯಾರನ್ನು ನೋವಿಸುವ ಉದ್ದೇಶ ಹೊಂದಿಲ್ಲ.ನಾವು ಬೆಂಗಳೂರನ್ನು ಪ್ರೀತಿಸುತ್ತಿದ್ದೇವೆ ಎಂದು ಝೊಮೊಟೊ ಉದ್ಯೋಗಿ ದಿಪೀಂದರ್ ಗೋಯಲ್ ಬ್ಲಾಗ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಗಿಂತ ಬೆಂಗಳೂರು ಬೆಸ್ಟ್:
ನಾನು ಮೂಲತ: ಉತ್ತರ ಭಾರತದವನು. ಬೆಂಗಳೂರು ಜನತೆ ತುಂಬಾ ಒಳ್ಳೇಯವರು. ಕಳೆದ ಆರು ವರ್ಷಗಳಿಂದ ನಾನು ಬೆಂಗಳೂರಿನಲ್ಲಿದ್ದೇನೆ. ದೆಹಲಿಗಿಂತ ನಾನು ಬೆಂಗಳೂರನ್ನು ಹೆಚ್ಚು ಇಷ್ಟ ಪಡುತ್ತೇನೆ.
- ವಿಕಾಸ್ ಶ್ರೀವಾಸ್ತವ್, ಗೂಗಲ್ ಪ್ಲೇ ಸ್ಟೋರ್‌ನಲ್ಲಿ
|
ಆಂಡ್ರಾಯ್ಡ್ ಆಪ್ ಡಿಲೀಟ್
ಬೆಂಗಳೂರನ್ನು ಅವಮಾನ ಮಾಡಿದ್ದಕ್ಕೆ ಥ್ಯಾಂಕ್ಸ್. ಝೊಮೊಟೋ ಆಂಡ್ರಾಯ್ಡ್ ಆಪ್ ಡಿಲೀಟ್ ಮಾಡಿದ್ದೇನೆ.
- ಲಲಿತ್ ಶರ್ಮಾ

ಸ್ಟುಪಿಡ್ ಅಪ್ಲಿಕೇಶನ್! ಸ್ಟುಪಿಡ್ ಕ್ಯಾಂಪೇನ್!
ಯಾವತ್ತು ಝೊಮೊಟೋದಿಂದ ಈ ರೀತಿ ಪ್ರಚಾರ ಜಾಹೀರಾತನ್ನು ನಿರೀಕ್ಷೆ ಮಾಡಿರಲಿಲ್ಲ.
ಅಯ್ಯಪ್ಪನ್ ಪಿಳ್ಳೈ ಗೂಗಲ್ ಪ್ಲೇ ಸ್ಟೋರ್‌ನಲ್ಲಿ












Click it and Unblock the Notifications