ಬೆಂಗಳೂರಿಗೆ ಬರಬೇಡಿ: ಇನ್ಫಿ ನಾರಾಯಣಮೂರ್ತಿ

businessmen-look-beyond-bangalore-it-infy-murthy
ಬೆಂಗಳೂರು, ಜೂನ್ 9: ಕರ್ನಾಟಕದ ರಾಜಧಾನಿಗೆ ಗಣನೀಯ ಕೊಡುಗೆ ಸಲ್ಲಿಸಿ, ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ವಿಶಿಷ್ಟ ಮಹತ್ವ ದಕ್ಕಿಸಿಕೊಟ್ಟ ಹೆಗ್ಗಳಿಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಎಂಬ ಅಪ್ಪಟ ಕನ್ನಡಿಗನದು.

ಆದರೆ ಇಂತಿಪ್ಪ ನಾರಾಯಣ ಮೂರ್ತಿ ಅವರು ಮೊನ್ನೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾ ಭಾವಿ/ಹಾಲಿ ಉದ್ಯಮಿಗಳಿಗೆ ಒಂದಷ್ಟು ಕಿವಿಮಾತು ಹೇಳಿದ್ದಾರೆ. ಎಲ್ಲ ರೀತಿಯಿಂದಲೂ ಬೆಂಗಳೂರು ದಟ್ಟಣೆ ಮಿತಿಮೀರಿದೆ. ಈ ಸುಂದರ ನಗರದ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹೇರುವುದು ಸರ್ವಥಾ ಸಾಧುವಲ್ಲ. ಆದ್ದರಿಂದ ಬೆಂಗಳೂರಿನತ್ತ ಮುಖ ಮಾಡಬೇಡಿ; ಬದಲಿಗೆ ಬೆಂಗಳೂರಿನಿಂದ ವಿಮುಖರಾಗಿ ಎಂದು ಬುದ್ಧಿಮಾತು ಹೇಳಿದ್ದಾರೆ.

ಅಷ್ಟೇ ಅಲ್ಲ. ಈ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಐಟಿ ತುಂಬಿತುಳುಕಿದೆ. ಇನ್ನೂ ಹೆಚ್ಚಿನ ಮಾಹಿತಿ ತಂತ್ರಜ್ಞಾನವವನ್ನು ಇಲ್ಲಿ ತುರುಕಬೇಡಿ. ಆದು saturate ಆಗಿದೆ. ಆದ್ದರಿಂದ IT ಬಿಟ್ಟು ಬೇರೇನಾದರೂ ಇದ್ದರೆ ಅದನ್ನು ಮಾಡಿ ಎಂದಿದ್ದಾರೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹವೂ ಆಗಿದೆ; ಚರ್ಚಾಹವೂ ಆಗಿದೆ.

ಆದರೆ ಈ ರೀತಿ ಬೆಂಗಳೂರಿಗೆ ಬರಬೇಡಿ; ಬೆಂಗಳೂರಿಗೆ ಇನ್ನಷ್ಟು IT ತರಬೇಡಿ ಎಂದಿರುವ ಸನ್ಮಾನ್ಯ ಮಾಜಿ ಇನ್ಫಿ ನಾರಾಯಣ ಮೂರ್ತಿ ಅವರ ಚೆಂದದ ಮಾತಿಗೆ ವಿರುದ್ಧವಾಗಿ Infosys Technologies company ದೇವನಹಳ್ಳಿ ಬಳಿ 60 ಎಕರೆ ಪ್ರದೇಶದಲ್ಲಿ 595 ಕೋಟಿ ರುಪಾಯಿ ವೆಚ್ಚದಲ್ಲಿ SEZ ಸ್ಥಾಪಿಸಲು ಸಮಾವೇಶದಲ್ಲಿ ಅನುಮೋದನೆ ಪಡೆದುಕೊಂಡಿದೆ. ಜತೆಗೆ ವಿಪ್ರೋ, ರಿಯಲನ್ಸ್ ನಂತಹ ದಿಗ್ಗಜ ಕಂಪನಿಗಳೂ ಸಿಲಿಕಾನ್ ಸಿಟಿಯಲ್ಲಿ ಬೀಡುಬಿಡಲು ಅಂಕಿತ ಹಾಕಿವೆ. ಸೋ, ಇನ್ಫಿ ಮೂರ್ತಿ ಹೇಳಿದ್ದೇನು, ಅವರ ಕಂಪನಿ ಸೇರಿದಂತೆ ಉಳಿದ IT ದಿಗ್ಗಜ ಕಂಪನಿಗಳು ಮಾಡಿರುವುದೇನು?

ಅದನ್ನೆಲ್ಲ ಸೂಕ್ತ ಚರ್ಚೆಗೆ ಬಿಟ್ಟು ಒಂದಷ್ಟು ವಾಸ್ತವಾಂಶಗಳನ್ನು ಹೇಳುವುದಾದರೆ ... ಜ್ಞಾನಾಧಾರಿತ IT sector ಕರ್ನಾಟಕದ ರಫ್ತಿಗೆ ಶೇ. 40ರಷ್ಟು ಗಣನೀಯ ಕೊಡುಗೆ ಸಲ್ಲಿಸುತ್ತಿದೆ. ರಾಜ್ಯದ ಒಟ್ಟು ಜಿಡಿಪಿಗೆ (GSDP) Software exports ಕೊಡುಗೆ ಶೇ. 21.4ರಷ್ಟಿದೆ. ಇದರ ಹೊರತಾಗಿ ಮೂಲ ಬೆಂಗಳೂರಿಗರು ಹೇಳುವುದನ್ನೂ ಕೇಳಿ: ಈ ಐಟಿ ಕಂಪನಿಗಳು ಬೆಂಗಳೂರಿಗೆ ಧಾಂಗಿಡಯಿಟ್ಟಿದ್ದೇ ಬಂತು ಸುಂದರ ಬೆಂಗಳೂರು ತನ್ನ ಅಂತಃ ಸತ್ವವವನ್ನೇ ಕಳೆದುಕೊಂಡು ನಿಸ್ಸಾರವಾಗಿ ಹೋಗಿದೆ. ರಿಯಲ್ ಎಸ್ಟೇಟು, ಇನ್ನಿತರ ಮೌಲ್ಯಗಳು ಗಗನ ಸೇರಿಕೊಂಡು ಯಾವುದೋ ಕಾಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+