Viral Video: ಬೆಂಗಳೂರು ಕೆಫೆಯಲ್ಲಿ 'ಟಿಪ್' ಡ್ಯಾನ್ಸ್ ಹಂಗಾಮಾ: ಸಿಬ್ಬಂದಿ ನೃತ್ಯ ನೋಡಿ ನೆಟ್ಟಿಗರು ಫಿದಾ
ಬೆಂಗಳೂರು: ಸಾಮಾಜಿಕ ಜಾಲತಾಣ ಬಂದ ಮೇಲೆ ಸಾಕಷ್ಟು ವಿಷಯಗಳು, ವಿಡಿಯೋಗಳು ನಿತ್ಯ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಕೆಫೆಯೊಂದರಲ್ಲಿನ ವಿಡಿಯೋ ಸಾಕಷ್ಟು ಗಮನ ಸೆಳೆಯುತ್ತಿದೆ. ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಗ್ರಾಹಕರನ್ನು ಸೆಳೆಯಲು, ಅವರಿಗೆ ಇಷ್ಟವಾಗುವಂತೆ ವಿಭಿನ್ನ ಮಾರ್ಗವನ್ನು ಕೆಫೆ ಆರಿಸಿಕೊಂಡಿದೆ. ಇಲ್ಲಿ ನೀವು ಟಿಪ್ ನೀಡಿದರೆ ಸಾಕು ಅಲ್ಲಿನ ಸಿಬ್ಬಂದಿ ನೃತ್ಯ ಮಾಡುತ್ತಾರೆ.
ಹೌದು, ಹೋಟೆಲ್, ರೆಸ್ಟೋರೆಂಟ್ ಹೋದರೆ ನಿಮಗೆ ಟಿಪ್ ನೀಡುವ ಅಭ್ಯಾಸವಿದ್ದರೆ ಅಂಥವರು ಈ ಕೆಫೆಯಲ್ಲಿ ಟಿಪ್ ನೀಡಿ ನೃತ್ಯ ನೋಡಿ ವಿಶೇಷ ಅನುಭವ ಪಡೆಯಬಹುದು. ಬೆಂಗಳೂರಿನ @cafenuvio_bengaluru ಕೆಫೆಯಲ್ಲಿ ಗ್ರಾಹಕರು ಟಿಪ್ ನೀಡಿದರೆ ಸಾಕಷ್ಟು ಅಲ್ಲಿನ ಮಹಿಳಾ ಸಿಬ್ಬಂದಿ ನೃತ್ಯ ಮಾಡುತ್ತಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಕೆಫೆ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಗ್ರಾಹಕರು ಟಿಪ್ ನೀಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ವಿಶೇಷವಾಗಿ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ತುಂಬಾ ಉತ್ಸಾಹಭರಿತವಾಗಿ ಮತ್ತು ಮೋಜಿನಿಂದ ಕೆಫೆ ಸಿಬ್ಬಂದಿ ನೃತ್ಯದಲ್ಲಿ ತೊಡಗಿಕೊಳ್ಳುತ್ತಾರೆ. ನಿತ್ಯ ಕೆಫೆ ಕೆಲಸದ ಜೊತೆಗೆ ಟಿಪ್ ಪಡೆದು ನೃತ್ಯ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ಜನರಿಗೂ ವಿಶೇಷ ರೀತಿಯಲ್ಲಿ ಮನರಂಜನೆ ಸಿಗುತ್ತದೆ.
ಜನರು ಸಾಮಾನ್ಯವಾಗಿ ಕೆಫೆಗಳಿಗೆ ತಿನ್ನಲು, ಚಹಾ-ಕಾಫಿ ಕುಡಿಯಲು ಮತ್ತು ಸ್ನೇಹಿತರೊಂದಿಗೆ ಚಾಟ್ ಮಾಡಲು ಹೋಗುತ್ತಾರೆ. ಆದರೆ ಬೆಂಗಳೂರಿನ ಈ ಕೆಫೆಗೆ ನೀವು ತೆರಳಿದರೆ ಸಿಬ್ಬಂದಿ ನೃತ್ಯ ನೋಡಿ ಬರಬಹುದು. ಇದೀಗ ಈ ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ಗ್ರಾಹಕರು ಟಿಪ್ ನೀಡಿದ ತಕ್ಷಣ ಸಿಬ್ಬಂದಿ ಹಿಂಜರಿಕೆಯಿಲ್ಲದೆ ನೃತ್ಯ ಮಾಡುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅನೇಕರು ಈ ಕಲ್ಪನೆಯನ್ನು "ಜನರಲ್ ಜಿ ಕೆಫೆ ಸಂಸ್ಕೃತಿ" ಎಂದು ಕರೆಯುತ್ತಿದ್ದಾರೆ. ವೀಡಿಯೋ ನೋಡಿದ ಬಳಕೆದಾರರು "ಈ ನೃತ್ಯವು ಆಹಾರಕ್ಕಿಂತ ಉತ್ತಮವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬ 10 ರೂಪಾಯಿ ಟಿಪ್ ಅವರನ್ನು ನೃತ್ಯ ಮಾಡಲು ಒತ್ತಾಯಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವು ಕಾಮೆಂಟ್ಗಳು ಬಂದಿವೆ.
ಗ್ರಾಹಕರು ಸಿಬ್ಬಂದಿಯ ನೃತ್ಯವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಇಬ್ಬರು ಹುಡುಗಿಯರ ನೃತ್ಯ ಇಂಟರ್ನೆಟ್ನಲ್ಲಿ ಜನರ ಹೃದಯಗಳನ್ನು ಗೆದ್ದಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ನೃತ್ಯವು 90ರ ದರ್ಶಕ ನೃತ್ಯ ಗೊಂಬೆಗಳನ್ನು ನೆನಪಿಸುತ್ತದೆ ಎಂದು ನಾಲ್ಕನೇಯ ಬಳಕೆದಾರರು ಹೇಳಿದ್ದಾರೆ. ಸಣ್ಣ ಟಿಪ್ಗಾಗಿ ಭಿಕ್ಷೆ ಬೇಡಲು ಯಾವ ರೀತಿಯ ಮಾರ್ಗ ಅನಸುರಿಸಿದ್ದಾರೆ? ಅಂತಲೂ ವ್ಯಂಗ್ಯ ಪ್ರತಿಕ್ರಿಯೆಗಳು ಬಂದಿವೆ.
-
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications