• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗನ್ ಇಟ್ಟು ಕೊಲೆ ಬೆದರಿಕೆ ಒಡ್ಡಿದ ಸುನಾಮಿ ಕಿಟ್ಟಿಯ ಬಂಧನ

By Nayana Bj
|
Google Oneindia Kannada News
   ಬಿಗ್ ಬಾಸ್ ವಿನ್ನರ್ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್ ಮೇಲೆ ಅರೆಸ್ಟ್ | Oneindia Kannada

   ಬೆಂಗಳೂರು, ಮಾರ್ಚ್ 03 : ಬಾರ್ ಸಪ್ಲೈಯರ್ ಗಿರೀಶ್ ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಶನಿವಾರ ಬಂಧಿಸಲಾಗಿದೆ.

   ಬಾರ್ ಸಪ್ಲೈರ್ ನ್ನು ಬಂಧಿಸಿ ಚಿತ್ರ ಹಿಂಸೆ ನೀಡಿದಷ್ಟೇ ಅಲ್ಲದೆ ಪಾಯಿಂಟ್ ಬ್ಲಾಂಕ್ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ, ಚಿತ್ರಹಿಂಸೆ ಕೂಡ ಕೊಟ್ಟಿರುವ ಕಾರಣ ಸುನಾಮಿ ಕಿಟ್ಟಿ ಮೇಲೆ ವಿರುದ್ಧ ಗಿರೀಶ್ ದೂರು ದಾಖಲಿಸಿದ್ದರು. ಇದೀಗ ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗಂದ್ರ ಮತ್ತು ಅರ್ಜುನ್ ನ್ನು ಬಂಧಿಸಿದ್ದು ಕಿಟ್ಟಿ ಸ್ನೇಹಿತ ಸುನೀಲ್ ನ ಶೋಧವನ್ನು ಮುಂದುವರೆಸಿದ್ದಾರೆ.

   50 ರುಪಾಯಿಗಾಗಿ ಮಗು ಅಪಹರಿಸಿದ್ದ ಮಹಿಳೆ ಈಗ ಪೊಲೀಸರ ಅತಿಥಿ50 ರುಪಾಯಿಗಾಗಿ ಮಗು ಅಪಹರಿಸಿದ್ದ ಮಹಿಳೆ ಈಗ ಪೊಲೀಸರ ಅತಿಥಿ

   ಕಿಟ್ಟಿ ಸ್ನೇಹಿತ ಸುನೀಲ್ ಪತ್ನಿಯನ್ನು ತೌಶಿಕ್ ಎಂಬುವವರು ಪ್ರೀತಿಸುತ್ತಿದ್ದಿದ್ದು ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

   ನಡೆದಿದ್ದಿಷ್ಟು: ಜ್ಞಾನಭಾರತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಹೋಗಿ ಸಪ್ಲೈಯರ್ ಬಳಿ ತೌಶಿಕ್ ಫೋಟೋ ತೋರಿಸಿ ಅವರ ಬಗ್ಗೆ ಮಾಹಿತಿ ಪಡೆಯಲು ಕಿಟ್ಟು ಮತ್ತವರ ಸ್ನೇಹಿತರು ಪ್ರಯತ್ನಿಸಿದ್ದಾರೆ. ಬಾರ್ ಸಪ್ಲೈಯರ್ ಗಿರೀಶ್ ಈ ವ್ಯಕ್ತಿಯನ್ನು ನಾನು ನೀಡಿದ್ದೇನೆ ದಿನ ರಾತ್ರಿ ಬಾರ್ ಗೆ ಬರುತ್ತಾನೆ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅವನ ವಿಳಾಸ ತಿಳಿಸುವಂತೆ ಒತ್ತಾಯಿಸಿ ಗಿರೀಶ್ ನ್ನನು ಕಿಡ್ನಾಪ್ ಮಾಡಿಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಾರೆ.

   ವಾಟ್ಸಾಪ್ ಮೂಲಕ ಅಪಹರಣ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರುವಾಟ್ಸಾಪ್ ಮೂಲಕ ಅಪಹರಣ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು

   ಒಂದೊಮ್ಮೆ ನಿನ್ನ ಅಪಹರಣ ಮಾಡಿರುವ ವಿಷಯ ಎಲ್ಲಿಯಾದರೂ ಬಾಯಿಬಿಟ್ಟರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.

   ದೂರಿನಲ್ಲಿರುವುದು ಏನು?

   ದೂರಿನಲ್ಲಿರುವುದು ಏನು?

   ನಾನು ಕುಠೀರ ಎನ್ನುವ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ಅಲ್ಲಿ ದೀಪಾ ಹಾಗೂ ತೌಶಿಕ್ ಎನ್ನುವವರು ಊಟಕ್ಕೆ ಬರುತ್ತಿದ್ದರು ನಾನು ಸಪ್ಲೈ ಮಾಡುತ್ತಿದ್ದೆ. ಬರುವ ಮೊದಲು ಕರೆ ಮಾಡಿ ಟೇಬಲ್ ಬುಕ್ ಮಾಡಿಸುತ್ತಿದ್ದರು. ಅದೇ ರೀತಿ ಫೆ.25 ರಂದು ಕೂಡ ಬಂದಿದ್ದರು. ಅಂದು ಅರ್ಧ ಮಾತ್ರ ಊಟ ಮಾಡಿ ಬಿಲ್ ಕೊಡದೆಯೇ ತರಳಿದರು, ನಂತರ ಕರೆ ಮಾಡಿ ವಿಚಾರಿಸಿದಾಗ ದೀಪಾ ಗಂಡನಿಗೆ ನಮ್ಮ ಮೇಲೆ ಅನುಮಾನ ಬಂದಿದೆ. ನಾನು ಹಣವನ್ನು ಇನ್ನೊಂದು ದಿನ ನೀಡುತ್ತೇನೆ ಎಂದು ಹೇಳಿ ನನ್ನ ನಂಬರ್ ಯಾರಿಗೂ ಕೊಡಬೇಡ ಎಂದು ಹೇಳಿಕೆ ಕಾಲ್ ಕಟ್ ಮಾಡಿರುವುದಾಗಿ ಹೇಳಿದ್ದಾನೆ.

   ಗಿರೀಶ್ ಕಿಡ್ನಾಪ್ ಆಗಿದ್ದು ಹೇಗೆ

   ಗಿರೀಶ್ ಕಿಡ್ನಾಪ್ ಆಗಿದ್ದು ಹೇಗೆ

   ಫೆ.28ರಂದು ಬಾರ್ ಗೆ ಬರುವ ಸಮಯದಲ್ಲಿ 7ರಿಂದ 8 ಮಂದಿ ಬಂದು ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿದ್ದರು. ಅವರೊಂದಿಗೆ ಸುನಾಮಿ ಕೊಟ್ಟಿ ಇದ್ದು ಉಳಿದವರ ಹೆಸರು ಪರಿಚಯವಿಲ್ಲ.ನಂತರ ತೋಟದಮನೆಗೆ ಕರೆದುಕೊಂಡು ಹೋಗಿ, ದೀಪಾಳ ಫೋಟೋವನ್ನು ತೋರಿಸಿ ಇದು ಸುನೀಲ್ ಅವರ ಪತ್ನಿ ಅವಳೊಂದಿಗೆ ನಿನಗೆ ಅಕ್ರಮ ಸಂಬಂಧವಿದೆಯಾ ಎಂದು ಪ್ರಶ್ನಿಸಿದ್ದಾರೆ.ಆಗ ನಾನು ಬಾರ್ನಲ್ಲಿ ಕೆಲಸ ಮಾಡುವವನಷ್ಟೇ ಆದರೆ ಈಕೆಯನ್ನು ಬಾರ್ ನಲ್ಲಿ ನೋಡಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ನಂತರ ದೀಪಾ ಜತೆಗೆ ಬರುವವನು ತೌಶಿಕ್ ಎಂದು ಹೇಳಿದ್ದು, ಅವನಿಗೆ ಕಾಲ್ ಮಾಡಿ ಬರುವಂತೆ ಹೇಳು ಎಂದು ಒತ್ತಾಯಿಸಿದರು.

   ಗಿರೀಶ್ ಮೇಲೆ ಗನ್ ಇಟ್ಟು ಬೆದರಿಕೆ

   ಗಿರೀಶ್ ಮೇಲೆ ಗನ್ ಇಟ್ಟು ಬೆದರಿಕೆ

   ತೌಶಿಕ್ ಗೆ ಬಿಲ್ ಕೊಡಲು ಬರುವಂತೆ ಕಾಲ್ ಮಾಡಿ ಹೇಳು ಇಲ್ಲವಾದಲ್ಲಿ ನಿನ್ನನ್ನು ಇಲ್ಲಿಯೇ ಮುಗಿಸುತ್ತೇವೆ ಎಂದು ಬೆದರಿಸಿದ ಕಾರಣ ತೌಶಿಕ್ ಗೆ ಕರೆ ಮಾಡಿ ರಾತ್ರಿ 11 ಗಂಟೆಗೆ ಗುರುಗುಂಟೆ ಪಾಳ್ಯದ ಸಿಗ್ನಲ್ ಬಳಿ ಬರುವಂತೆ ಗಿರೀಶ್ ಸೂಚಿಸಿದ್ದಾರೆ. ರಾತ್ರಿ ಹೊರಮಾವು ಬಳಿ ಇರುವ ತೋಟದಮನೆಗೆ ತೌಶಿಕ್ ಹಾಗೂ ಗರೀಶ್ ನನ್ನು ಎಳೆದುಕೊಂಡು ಹೋಗಿ ತೌಶಿಕ್ ಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ.ಅಲ್ಲಲ್ಲಿ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂದು ಗಿರೀಶ್ ಮಾಹಿತಿ ನೀಡಿದ್ದಾರೆ.

   ಗಿರೀಶ್ ಬಳಿ ಇದ್ದ ವಸ್ತುಗಳನ್ನು ಕಿತ್ತುಕೊಂಡ ದುಷ್ಕರ್ಮಿಗಳು

   ಗಿರೀಶ್ ಬಳಿ ಇದ್ದ ವಸ್ತುಗಳನ್ನು ಕಿತ್ತುಕೊಂಡ ದುಷ್ಕರ್ಮಿಗಳು

   ಗಿರೀಶ್ ಬಳಿ ಇದ್ದ 10ಸಾವಿರ ರೂ, ಮೊಬೈಲ್ , ಎಟಿಎಂ, ಡಿಎಲ್ ಗಳನ್ನು ಕಿಟ್ಟಿ ಸ್ನೇಹಿತರು ವಶಕ್ಕೆ ಪಡೆದರು. ದೀಪಾಳಿಗೆ ಮದುವೆಯಾಗಿದೆ ಎನ್ನುವ ವಿಚಾರ ನನಗೆ ತಿಳಿದಿರಲಿಲ್ಲ, ಆಕೆಯನ್ನು ನಾನು ಪ್ರೀತಿಸಿದ್ದು ನಿಜ ಎಂದು ತೌಶಿಕ್ ಹೇಳಿದ್ದಾನೆ. ತಾವಿಬ್ಬರೂ ಫ್ರಂಡ್ಸ್ ನಂತೆ ಇದ್ದೇವೆ ಎಂದು ಹೇಳಿಕೆ ನೀಡಿದ್ದಾನೆ. ತೌಶಿಕ್ ನನ್ನು ಅಲ್ಲಿಯೇ ಇರಿಸಿಕೊಂಡು ನಂತರ ಬಾರ್ ಸಪ್ಲೈಯರ್ ನ್ನು ಅಲ್ಲಿಂದ ಕಳುಹಿಸಿದ್ದಾರೆ.

   ಮೈಸೂರಿನಲ್ಲಿ ಬೆಳ್ ಬೆಳಗ್ಗೆ ಟೀ ಕುಡಿಯುತ್ತಿದ್ದ ಯುವಕನ ಅಪಹರಣಮೈಸೂರಿನಲ್ಲಿ ಬೆಳ್ ಬೆಳಗ್ಗೆ ಟೀ ಕುಡಿಯುತ್ತಿದ್ದ ಯುವಕನ ಅಪಹರಣ

   English summary
   Bigg boss reality show famous artist Tsunami kitty has been arrested in Kidnap case by Jnana bharati police. He was allegedly kidnapped and tortured named girish, a bar supplier.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X