101 ಬಾರಿ ನಿಯಮ ಉಲ್ಲಂಘನೆ: ಬುಲೆಟ್ ಮಾಲೀಕ ಕಟ್ಟಿದ ದಂಡವೆಷ್ಟು?

ಬೆಂಗಳೂರು, ಆಗಸ್ಟ್ 28: 101 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬುಲೆಟ್ ಬೈಕ್ ಮಾಲೀಕನಿಗೆ 57 ಸಾವಿರ ರೂ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Recommended Video

      Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

      11 ತಿಂಗಳಲ್ಲಿ 101 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ 57 ಸಾವಿರ ರೂ ದಂಡ ವಸೂಲಿ ಮಾಡಲಾಗಿದೆ.

      ಎಲ್ ರಾಜೇಶ(25) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಡದ ಮೊತ್ತವನ್ನು ಹೊಂದಿಸಲು ಮೂರು ದಿನಗಳ ಸಮಯಾವಕಾಶವನ್ನು ಪಡೆದಿದ್ದರು.

      Traffic Rules Violation: Bengaluru Bullet Owner Told To Pay Rs 57,200 As Fine

      ಇಷ್ಟು ದಂಡವನ್ನು ಕಟ್ಟುವುದರೊಂದಿಗೆ ಅತಿ ಹೆಚ್ಚು ದಂಡವನ್ನು ಕಟ್ಟಿದ ವಾಹನ ಸವಾರ ಎನಿಸಿಕೊಂಡಿದ್ದಾರೆ. ಡಿಸೆಂಬರ್ 2019ರಲ್ಲಿ ತರಕಾರಿ ಅಂಗಡಿ ಮಾಲೀಕರೊಬ್ಬರು 15,200 ರೂ. ದಂಡ ಕಟ್ಟಿದ್ದರು. ಚಲನ್ 5.1 ಅಡಿಯಷ್ಟು ಉದ್ದವಿತ್ತು.

      ರಾಜೇಶ್ ವೈಟ್‌ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿಗೆ ನಿತ್ಯ ಬರುತ್ತಾರೆ. ಬುಧವಾರವೂ ಹಾಗೆಯೇ ಬಂದಿದ್ದರು, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರನ್ನು ತಡೆದರು.

      ಅದೇ ದಿನ ಆರು ಬಾರಿ ಆತ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಎಂದು ತಿಳಿಯಿತು. ಕೋರ್ಟ್‌ಗೆ ಅಷ್ಟು ಮೊತ್ತವನ್ನು ಕಟ್ಟಿದ ಬಳಿಕ ಆ ಗಾಡಿಯನ್ನು ನೀಡಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+