ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶುವನ್ನು ಕಿತ್ತುತಿಂದ ಬೀದಿ ನಾಯಿಗಳು

ಬೆಂಗಳೂರು, ಮಾರ್ಚ್ 22: ಹೊಸೂರಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಬೀದಿನಾಯಿಗಳು ತಿಂದಿರುವ ಘಟನೆ ನಡೆದಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮಗು ಮೃತಪಟ್ಟಿದೆ, ಆಸ್ಪತ್ರೆ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಕಸದ ತೊಟ್ಟಿಯಲ್ಲಿ ಎಸೆದಿದ್ದರು, ಕಸದ ತೊಟ್ಟಿಯಲ್ಲಿದ್ದ ಮಗುವನ್ನು ಬೀದಿ ನಾಯಿಗಳು ಕಿತ್ತು ತಿಂದಿವೆ.

ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇ ಬೇರೆ ಇದೆ. ಸರ್ಕಾರಿ ಆಸ್ಪತ್ರೆಯ ಆವರಣದೊಳಗೆ ಸುಲಭವಾಗಿ ಬೀದಿ ನಾಯಿಗಳು ಓಡಾಡಿಕೊಂಡಿರುತ್ತದೆ. ಇಂದು ಮೃತದೇಹವನ್ನು ತಿಂದಿರುವ ನಾಯಿಗಳು ಬದುಕಿರುವ ನವಜಾತ ಶಿಶುಗಳಿಗೆ ತೊಂದರೆ ಮಾಡಿದರೆ ಎನ್ನುವ ಆತಂಕ ಪೋಷಕರನ್ನು ಕಾಡಿದೆ.

Stray dog mauls away corpse of stillborn infant

ಕೃಷ್ಣಗಿರಿಯ ಎಂ ನಾಗಮ್ಮ ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ತೂಕ ಕಡಿಮೆ ಇದ್ದ ಕಾರಣ ಮಗು ಮೃತಪಟ್ಟಿತ್ತು. ಬಳಿಕ ತಾಯಿಗೆಮಗುವಿನ ಮೃತದೇಹವನ್ನು ನೀಡಲಾಗಿತ್ತು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಆ ದಿನ ಅಲ್ಲಿಯೇ ಇಟ್ಟುಕೊಂಡು ಮರುದಿನ ಬೆಳಗ್ಗೆ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿತ್ತು. ಬೇರೆ ರೋಗಿಗಳು ಇದಕ್ಕೆ ಸಮ್ಮತಿ ಸೂಚಿಸದ ಕಾರಣ ಮಗುವನ್ನು ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ಸುತ್ತಿ ಆಸ್ಪತ್ರೆಯ ಶೌಚಾಲಯದಲ್ಲಿ ಇಡಲಾಗಿತ್ತು. ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಶೌಚಾಲಯ ಶುಚಿ ಮಾಡುವ ವೇಳೆ ಅದನ್ನು ಕಸದ ತೊಟ್ಟಿಗೆ ಎಸೆದಿದ್ದರು. ಮರುದಿನ ಮಗುವಿನ ಮೃತದೇಹವನ್ನು ನಾಯಿ ತಿನ್ನುತ್ತಿರುವುದನ್ನು ನೋಡಿದ ಕೆಲವರು ವಿಷಯ ತಿಳಿಸಿದಾಗ ಘಟನೆ ಬಹಿರಂಗಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+