Get Updates
Get notified of breaking news, exclusive insights, and must-see stories!

Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್‌ವೇ ಸಂಪರ್ಕ

ನಮ್ಮ ಮೆಟ್ರೋ ಸಿಲ್ಕ್‌ಬೋರ್ಡ್ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಕಾರಣ ನೀಲಿ ಮಾರ್ಗ (ಸಿಲ್ಕ್‌ಬೋರ್ಡ್‌-ಕೆ.ಆರ್‍‌.ಪುರಂ) ಇದೇ ವರ್ಷಾಂತ್ಯಕ್ಕೆ ತೆರೆಯುಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದೇ ಜಂಕ್ಷನ್‌ ಮಾರ್ಗವಾಗಿ ಹಳದಿ ಮಾರ್ಗದ ರೈಲುಗಳ ಸಂಚರಿಸುತ್ತಿವೆ. ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಎರಡು ಮಾರ್ಗಗಳ ಸಿಲ್ಕ್‌ಬೋರ್ಡ್ ನಿಲ್ದಾಣಗಳ ನಡುವೆ ಮಹತ್ವದ ಯೋಜನೆಗೆ ಬಿಎಂಆರ್‍‌ಸಿಎಲ್ ಟೆಂಡರ್ ಆಹ್ವಾನಿಸಿದೆ.

ಹೌದು, ಹಳದಿ ಮಾರ್ಗ ಮತ್ತು ನೀಲಿ ರೇಖೆಯ 2 ಸಿಲ್ಕ್‌ಬೋರ್ಡ್ ನಿಲ್ದಾಣಗಳ ನಡುವಿನ 'ಟ್ರಾವೆಲೇಟರ್ ಮತ್ತು ಕನೆಕ್ಟಿಂಗ್ ವಾಕ್‌ವೇ' ಸಂಬಂಧಿತ ಕಾಮಗಾರಿಗಳಿಗಾಗಿ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಇದರಲ್ಲಿ ಸಿವಿಲ್, ಸ್ಟ್ರಕ್ಚರಲ್ ಕೆಲಸಗಳು ಮತ್ತು ಇತರ ವಿನ್ಯಾಸಗಳುಗಳು ಸೇರಿವೆ.

Silk Board Metro

ಅಂದಾಜು 58.99 ಕೋಟಿ ರೂ. ವೆಚ್ಚದ ಈ ಪ್ರಯಾಣಿಕಸ್ನೇಹಿ ಮೆಟ್ರೋ ಮೂಲಸೌಕರ್ಯ ಯೋಜನೆಯ ಸದರಿ ಟೆಂಡರ್ ಮುಂದಿನ ತಿಂಗಳ ಮೇ 5ರಂದು ಉದ್ಘಾಟನೆಯಾಗಲಿದೆ. ಈ ಉದ್ದೇಶಿತ ಕಾಮಗಾರಿಗಳನ್ನು ಟೆಂಡರ್ ಪಡೆದ ಕಂಪನಿಗಳು 9 ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂಬ ಷರತ್ತನ್ನು ಮೆಟ್ರೋ ಅಧಿಕಾರಿಗಳು ಹೇರಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಏ.5ರಂದು ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತ, ಕಾರಣವೇನು?
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಏ.5ರಂದು ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತ, ಕಾರಣವೇನು?

ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮದ (BMRCL) ವತಿಯಿಂದ ಸಿಲ್ಕ್‌ಬೋರ್ಡ್‌-ಕೆ.ಆರ್‍‌.ಪುರಂ-ಏರ್‍‌ಪೊರ್ಟ್‌ವರೆಗೆ ನೀಲಿ ಮಾರ್ಗ (Metro Blue Line) ನಿರ್ಮಾಣವಾಗುತ್ತದೆ. ಇದರ 2ಎ ಹಂತ ಮುಂದಿನ ವರ್ಷ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸಿಲ್ಕ್‌ಬೋರ್ಡ್ ಮಾರ್ಗವಾಗಿ ರಾಷ್ಟ್ರೀಯ ವಿದ್ಯಾಲಯ-ಬೊಮ್ಮಸಂದ್ರವರೆಗೆ ಹಳದಿ ಮಾರ್ಗ (Metro Yellow Line) ಹಾದು ಹೋಗುತ್ತದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ ನಿರೀಕ್ಷೆ

2025ರ ಆಗಸ್ಟ್ 10ರಂದು ಹಳದಿ ಮಾರ್ಗ ತೆರೆಯುತ್ತಿದ್ದಂತೆ ನಿತ್ಯ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇನ್ನೂ ನೀಲಿ ಮಾರ್ಗ ತೆರೆದರಂತೂ ಪ್ರಯಾಣಿಕ ಸಂಖ್ಯೆ ದುಪ್ಪಟ್ಟಾಗಲಿದೆ. ಇವರಿಗೆ ಸುಗಮ ಸಂಚಾರಕ್ಕೆ ಹಾಗೂ ನೀಲಿಯಿಂದ ಹಳದಿ ಮಾರ್ಗಕ್ಕೆ ರೈಲು ಬದಲಾಯಿಸುವ ಪ್ರಯಾಣಿಕರಿಗಾಗಿ ಈ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಮೆಟ್ರೋ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ.

'ಟ್ರಾವೆಲೇಟರ್, ಕನೆಕ್ಟಿಂಗ್ ವಾಕ್‌ವೇ' ಪ್ರಯೋಜನ

ಸಿಲ್ಕ್‌ ಬೋರ್ಡ್ ಜಂಕ್ಷನ್ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಹಳದಿ ಮಾರ್ಗದ ಮೆಟ್ರೋ ಇಳಿದು ನೀಲಿ ಮಾರ್ಗ ಏರಲು ರಸ್ತೆ ಅನುಸರಿಸಿದರೆ ಸಮಯ ಹೆಚ್ಚು ಹಿಡಿಯಬಹುದು. ಈ ಸಮಸ್ಯೆ ಪರಿಹಾರಕ್ಕಾಗಿ ನೀಲಿ-ಹಳದಿ 2 ಸಿಲ್ಕ್‌ಬೋರ್ಡ್ ನಿಲ್ದಾಣಗಳ ನಡುವೆ 'ಟ್ರಾವೆಲೇಟರ್ ಮತ್ತು ಕನೆಕ್ಟಿಂಗ್ ವಾಕ್‌ವೇ' ನಿರ್ಮಿಸಿದರೆ ಜನರಿಗೆ ತ್ವರಿತ ಸೇವೆ, ರೈಲು ಪ್ರಯಾಣ ಸಾಧ್ಯವಾಗುತ್ತದೆ. ನಿಲ್ದಾಣದಿಂದ ರಸ್ತೆಗೆ ಬಂದು, ಜಂಕ್ಷನ್‌ ದಾಟಿ ಪಕ್ಕದ ಮತ್ತೊಂದು ನಿಲ್ದಾಣಕ್ಕೆ ಹೋಗುವ ಪ್ರಮೇಯ ತಪ್ಪುತ್ತದೆ. ಇದರಿಂದ ಸಮಯ ಉಳಿತಾಯ, ಆಯಾಸ ಎಲ್ಲವು ತಪ್ಪುತ್ತದೆ.

ಸಿಲ್ಕ್‌ಬೋರ್ಡ್‌ನಿಂದ ಕೆಆರ್‍‌ ಪುರಂವರೆಗೆ (2ಎ) ಮತ್ತು ಕೆ.ಆರ್.ಪುರಂನಿಂದ ದೇವನಹಳ್ಳಿ ಏರ್‍‌ಪೋರ್ಟ್‌ವರೆಗೆ (2ಬಿ) ಎರಡು ಹಂತಗಳಲ್ಲಿ ನೀಲಿ ಮಾರ್ಗದ ನಿರ್ಮಾಣ ಕೆಲಸಗಳು ಬರದಿಂದ ಸಾಗಿವೆ. ಇದರಲ್ಲಿ 2ಎ ಮಾರ್ಗವು 2026ರ ಮಾರ್ಚ್‌ನಲ್ಲಿ ತೆರೆಯಲು ಮೊದಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ. ಇದೀಗ ಡಿಸೆಂಬರ್ 2026ರಂದು ತೆರೆಯಲು ನಿರ್ಧರಿಸಲಾಗಿದೆ. ನಂತರ ಉಳಿದ ಮಾರ್ಗವು 2027ರಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+