Get Updates
Get notified of breaking news, exclusive insights, and must-see stories!

RCB vs CSK: ಆರ್‌ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಪಂದ್ಯದ ಅಧಿಕೃತ 'ಮ್ಯಾಚ್-ಡೇ ಪ್ಲೇಬುಕ್' ವಿವರ ಇಲ್ಲಿದೆ.

ಟಿಕೆಟ್ ಮತ್ತು ಪ್ರವೇಶದ ವಿವರಗಳು

ಆರ್‌ಸಿಬಿ ಹೋಮ್ ಮ್ಯಾಚ್ ಟಿಕೆಟ್‌ಗಳನ್ನು ಕೇವಲ ಅಧಿಕೃತ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಮಾತ್ರ ಮಾರಾಟ ಮಾಡಲಾಗಿದ್ದು, ಈಗಾಗಲೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ವಂಚಕರಿಂದ ಟಿಕೆಟ್ ಖರೀದಿಸದಂತೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಪಂದ್ಯದ ಎಂ-ಟಿಕೆಟ್‌ನಲ್ಲಿ (M-ticket) ಸೀಟು ಮತ್ತು ಪ್ರವೇಶ ದ್ವಾರದ (Entry Gate) ವಿವರಗಳಿದ್ದು, ಗೇಟ್ ತಲುಪಲು ಮ್ಯಾಪ್ ವ್ಯವಸ್ಥೆಯನ್ನೂ ನೀಡಲಾಗಿದೆ. ಪಂದ್ಯ ಆರಂಭವಾಗುವ 5 ಗಂಟೆಗಳ ಮೊದಲು ಕ್ಯೂಆರ್ ಕೋಡ್ ಜನರೇಟ್ ಆಗಲಿದ್ದು, ಪಂದ್ಯಕ್ಕೆ 4 ಗಂಟೆ ಮೊದಲು ಸ್ಟೇಡಿಯಂನ ಗೇಟ್‌ಗಳು ತೆರೆಯಲಿವೆ.

Royal Challengers Bengaluru

ಉಚಿತ ಮೆಟ್ರೋ ಮತ್ತು ಸಾರಿಗೆ ವ್ಯವಸ್ಥೆ

ಪಂದ್ಯದ ಟಿಕೆಟ್ ಹೊಂದಿರುವ ಎಲ್ಲ ಅಭಿಮಾನಿಗಳಿಗೆ ಪಂದ್ಯದ ದಿನದಂದು ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯವಿರುತ್ತದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳು ಕ್ರೀಡಾಂಗಣಕ್ಕೆ ಹತ್ತಿರವಿದ್ದು, ನಿಮ್ಮ ಪ್ರವೇಶ ದ್ವಾರಕ್ಕೆ ಹತ್ತಿರವಿರುವ ನಿಲ್ದಾಣವನ್ನು ಬಳಸಲು ಸೂಚಿಸಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಸೀಮಿತವಾಗಿದ್ದು, ಮುಂಚಿತವಾಗಿ ಪಾರ್ಕಿಂಗ್ ಬುಕ್ ಮಾಡಿದವರು ಸಮಯಕ್ಕೆ ಸರಿಯಾಗಿ ತಲುಪಬೇಕು. ಉಳಿದವರು ಮೆಟ್ರೋ ಬಳಸಲು ಉತ್ತೇಜಿಸಲಾಗಿದೆ. ಅಲ್ಲದೆ, ಪಾರ್ಕಿಂಗ್ ವಲಯಗಳಿಂದ ಸ್ಟೇಡಿಯಂಗೆ ಮತ್ತು ಸ್ಟೇಡಿಯಂನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಶಟಲ್ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ನಿಷೇಧಿತ ವಸ್ತುಗಳು ಮತ್ತು ಭದ್ರತೆ

ಸುಗಮ ಪ್ರವೇಶಕ್ಕಾಗಿ ಕ್ರೀಡಾಂಗಣದೊಳಗೆ ಕೆಲವು ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಪ್ರವೇಶ ದ್ವಾರದಲ್ಲಿ ತಪಾಸಣೆ ಇರುವುದರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ ಸಹಕರಿಸಲು ಕೋರಲಾಗಿದೆ. ಭದ್ರತೆ ಮತ್ತು ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ತುರ್ತು ವೈದ್ಯಕೀಯ ಸೇವೆಗಳು

ಅಭಿಮಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡಾಂಗಣದಾದ್ಯಂತ 9 ಆಂಬ್ಯುಲೆನ್ಸ್ ಮತ್ತು 4 ವೈದ್ಯಕೀಯ ಕಮಾಂಡ್ ಸೆಂಟರ್‌ಗಳನ್ನು ನಿಯೋಜಿಸಲಾಗಿದೆ. ಸ್ಟೇಡಿಯಂನಲ್ಲಿರುವ ಸೈನ್ ಬೋರ್ಡ್‌ಗಳ ಮೂಲಕ ಹತ್ತಿರದ ವೈದ್ಯಕೀಯ ಕೇಂದ್ರವನ್ನು ಪತ್ತೆಹಚ್ಚಬಹುದು. ಯಾವುದೇ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಲು ತಿಳಿಸಲಾಗಿದೆ. ನಿಮ್ಮ ತಂಡಕ್ಕೆ ಪೂರ್ಣ ಬೆಂಬಲ ನೀಡಿ, ಅಧಿಕಾರಿಗಳ ಶಿಸ್ತುಕ್ರಮಗಳನ್ನು ಪಾಲಿಸುವ ಮೂಲಕ ಪಂದ್ಯದ ಸಂಭ್ರಮವನ್ನು ಆನಂದಿಸಿ ಎಂದು ಆರ್‌ಸಿಬಿ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಆರ್‌ಸಿಬಿ ಪಂದ್ಯದ ಟಿಕೆಟ್‌ಗಳನ್ನು ಕೇವಲ ಅಧಿಕೃತ ವೆಬ್‌ಸೈಟ್ (www.royalchallengers.com) ಮತ್ತು ಆಪ್‌ನಲ್ಲಿ ಮಾತ್ರ ಮಾರಾಟ ಮಾಡಲಾಗಿದೆ. ಬೇರೆ ಯಾವುದೇ ಮೂಲಗಳಿಂದ ಟಿಕೆಟ್ ಖರೀದಿಸಿ ವಂಚನೆಗೆ ಒಳಗಾಗಬೇಡಿ. ಸದ್ಯಕ್ಕೆ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಸುಗಮ ತಪಾಸಣೆ ಮತ್ತು ಭದ್ರತೆಯ ದೃಷ್ಟಿಯಿಂದ ಕ್ರೀಡಾಂಗಣದೊಳಗೆ ಕೆಲವು ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಬ್ಯಾಗ್‌ಗಳು, ಹೆಲ್ಮೆಟ್, ನೀರಿನ ಬಾಟಲಿಗಳು, ಹೊರಗಿನ ಆಹಾರ ಪದಾರ್ಥಗಳು, ಪವರ್ ಬ್ಯಾಂಕ್‌ಗಳು, ಲೈಟರ್‌ಗಳು, ಬೆಂಕಿಪೊಟ್ಟಣಗಳು ಮತ್ತು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು, ಕಲ್ಲುಗಳು, ಲೋಹದ ವಸ್ತುಗಳು ಅಥವಾ ಅಪಾಯಕಾರಿ ಆಯುಧಗಳು. ಈ ವಸ್ತುಗಳನ್ನು ತರದೇ ಇರುವ ಮೂಲಕ ಭದ್ರತಾ ತಪಾಸಣೆಯನ್ನು ಬೇಗನೆ ಮುಗಿಸಿ ಸೀಟುಗಳನ್ನು ಅಲಂಕರಿಸಲು ಸಹಕರಿಸಿ. ಬೆಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಈ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಭಿಮಾನಿಗಳು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಶಿಸ್ತಿನಿಂದ ಪಂದ್ಯವನ್ನು ಆನಂದಿಸಬೇಕೆಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮನವಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+