Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು
Bengaluru vs Hyderabad: ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿ ಇರುವಾಗಲೇ ಬೆಂಗಳೂರಿಗೆ ನೆರೆಯ ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣ ರಾಜ್ಯದ ಹೈದರಾಬಾದ್‌ನಿಂದ ತೀವ್ರ ಪೈಪೋಟಿ ಇದೆ. ಇದೀಗ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕುತ್ತಿದೆ. ಭಾರತದಲ್ಲಿ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿದೆ. ಹೈದರಾಬಾದ್ ಇದೀಗ ಭಾರತದ ವಾಸಯೋಗ್ಯ ಮೆಟ್ರೋಪಾಲಿಟನ್ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಅಗ್ರಸ್ಥಾನಕ್ಕೇರುವುದರೊಂದಿಗೆ ಬೆಂಗಳೂರು ದ್ವೀತೀಯ ಸ್ಥಾನಪಡೆದುಕೊಳ್ಳುವಂತಾಗಿದೆ. ಬೆಂಗಳೂರು ಎರಡನೇ ಸ್ಥಾನಕ್ಕೆ ಕುಸಿಯುವುದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ದೇಶದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬೆಂಗಳೂರು ಬೆಸ್ಟ್ ಎನ್ನುವ ಆಯ್ಕೆ ಹಾಗೂ ಉತ್ತರ ದೇಶದಲ್ಲಿ ಇರುವವರು ಮಾತ್ರವಲ್ಲ. ವಿದೇಶಿಗರಿಂದಲೂ ಕೇಳಿ ಬರುತ್ತಿತ್ತು. ಇನ್ನು ಬೆಂಗಳೂರಿನ ಹವಾಮಾನ ಹಾಗೂ ಜೀವನ ಶೈಲಿ, ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರು ಮುಂಚೂಣಿಯಲ್ಲಿರುತ್ತಿತ್ತು. ಆದರೆ ಇದೀಗ ಬೆಂಗಳೂರಿಗೆ ಭಾರೀ ಹಿನ್ನಡೆಯಾಗಿದ್ದು, ಬೆಂಗಳೂರಿನ ಸ್ಥಾನವನ್ನು ಹೈದರಾಬಾದ್ ಕಸಿಯುತ್ತಿದೆ ಅಥವಾ ತೀವ್ರ ಪೈಪೋಟಿ ಕೊಡುವ ಮೂಲಕ ಅಗ್ರ ಸ್ಥಾನಕ್ಕೇರಿದೆ.

ದೇಶದ ಅತ್ಯಂತ ವಾಸಯೋಗ್ಯ ನಗರ ಎನ್ನುವ ಹೆಗ್ಗಳಿಕೆ ಹೈದರಾಬಾದ್ ಪಾತ್ರವಾಗಿದೆ. ಬೆಂಗಳೂರು ಮೂಲದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ನಡೆಸಿದ 'ವೀಆರ್‌ಸಿಟಿ 2026' ಎನ್ನುವ ಸಂಶೋಧನಾ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅಲ್ಲದೆ ಈಚೆಗೆ ನಡೆದ ಇಂಡಿಯಾಸ್ಪೋರಾ ಗ್ಲೋಬಲ್ ಎಐ ಶೃಂಗಸಭೆಯ ಸಂದರ್ಭದಲ್ಲಿ ವಾಸಯೋಗ್ಯ ನಗರಕ್ಕೆ ಸಂಬಂಧಿಸಿದ ದತ್ತಾಂಶ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹಲವು ವಿಷಯಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರನ್ನು ಹಿಂದಿಕ್ಕಿರುವ ಹೈದರಾಬಾದ್ ವಾಸಯೋಗ್ಯ ನಗರದ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಹೈದರಾಬಾದ್ ನಗರವು ಬೆಂಗಳೂರನ್ನು ಹಿಂದಿಕ್ಕಿ ಭಾರತದ ಅತ್ಯಂತ ವಾಸಯೋಗ್ಯ ಮೆಟ್ರೋಪಾಲಿಟನ್ ನಗರವಾಗಿ ಹೊರಹೊಮ್ಮಿದೆ. ವಸತಿ ಮತ್ತು ವೈವಿಧ್ಯತೆಯಂತಹ ಅಂಶಗಳು ಹೈದರಾಬಾದ್‌ಗೆ ಶ್ರೇಯಾಂಕಗಳಲ್ಲಿ ಹಿನ್ನಡೆ ಆದರೂ ಪ್ರಯಾಣದ ಸಮಯ ಮತ್ತು ಮೂಲಸೌಕರ್ಯ ವಿಚಾರದಲ್ಲಿ ಬೆಂಗಳೂರಿಗೆ ಹಿನ್ನಡೆ ಆಗಿದೆ. ಹೀಗಾಗಿ ಬೆಂಗಳೂರು ಎರಡನೇ ಸ್ಥಾನಕ್ಕೆ ತೃಪ್ತಿಪಡುವಂತೆ ಆಗಿದೆ.
ದೇಶದ ಯಾವ ನಗರಕ್ಕೆ ಯಾವ ಸ್ಥಾನ
ನಗರ ಸೂಚ್ಯಂಕಗಳು ಎನ್ನುವ ಹೆಸರಿನ ವರದಿಯು ಎರಡೂ ನಗರಗಳಲ್ಲಿನ ಪ್ರಯಾಣ, ವೈವಿಧ್ಯತೆ, ಹೊರಹೋಗುವಿಕೆ, ವಸತಿ ಮತ್ತು ಮೂಲಸೌಕರ್ಯ ಮತ್ತು ಕೊನೆಯದಾಗಿ ಹವಾಮಾನದಂತಹ ವಿಷಯಗಳ ಮೇಲೆ ಜೀವನ ಸುಲಭತೆಯ ವಿಷಯದಲ್ಲಿ ಎಂಟು ನಗರಗಳನ್ನು ಶ್ರೇಣೀಕರಣ ಅಥವಾ ರ್‍ಯಾಂಕಿಂಗ್ ನೀಡಲಾಗಿದೆ. ಹೈದರಾಬಾದ್ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೆಂಗಳೂರು ಮತ್ತು ಕೋಲ್ಕತ್ತಾ ನಗರಗಳಿವೆ. ಅಹಮದಾಬಾದ್ ನಗರ ಕೊನೆಯ ಹಂತದಲ್ಲಿದ್ದರೆ, ಚೆನ್ನೈ, ದೆಹಲಿ ಎನ್‌ಸಿಆರ್, ಪುಣೆ ಮತ್ತು ಗ್ರೇಟರ್ ಮುಂಬೈ ಕ್ರಮವಾಗಿ ನಾಲ್ಕು, ಐದನೇ, ಆರನೇ ಮತ್ತು ಏಳನೇ ಸ್ಥಾನದಲ್ಲಿವೆ.
ಟ್ರಾಫಿಕ್ ಜಾಮ್‌ನಿಂದ ಬೆಂಗಳೂರಿಗೆ ಹಿನ್ನಡೆ
ಇನ್ನು ಬೆಂಗಳೂರಿಗೆ ಟ್ರಾಫಿಕ್ ಜಾಮ್ ಹಾಗೂ ಮೂಲಸೌಕರ್ಯದ ವಿಚಾರದಲ್ಲಿ ಹಿನ್ನಡೆ ಆಗಿದೆ. ಪ್ರಯಾಣ / ಟ್ರಾಫಿಕ್ ಜಾಮ್ ವಿಚಾರವು ಎರಡೂ ನಗರಗಳಿಗೂ ಸಮಸ್ಯೆಯಾಗಿದ್ದರೂ ಸಹ ಹೈದರಾಬಾದ್ ಹೆಚ್ಚಿನ ವಿಭಾಗಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇಲ್ಲ. ಆದಾಗ್ಯೂ, ಎರಡೂ ನಗರಗಳು ಒಂದು ನಿರ್ದಿಷ್ಟ ಮಾರ್ಗದ ದೂರವನ್ನು ಕ್ರಮಿಸಲು ಸರಾಸರಿ 58-59 ನಿಮಿಷಗಳು ತೆಗೆದುಕೊಳ್ಳುತ್ತವೆ. ಆದರೆ ಹೈದರಾಬಾದ್ ಪ್ರಯಾಣಿಕರು ಸಾಮಾನ್ಯವಾಗಿ 22 ಕಿ.ಮೀ ಕ್ರಮಿಸುತ್ತಾರೆ, ಇದು ಬೆಂಗಳೂರಿಗರು ಪ್ರಯಾಣಿಸುವುದಕ್ಕಿಂತ ಸುಮಾರು 4 ಕಿ.ಮೀ ಹೆಚ್ಚಾಗಿದೆ.
ಉತ್ತಮ ಉದ್ಯೋಗ ಅವಕಾಶಗಳು, ಟೆಕ್ ಪ್ರತಿಭೆ ಮತ್ತು ಹೊಸ ನೇಮಕಾತಿಗಳಿಂದ ಬೆಂಗಳೂರು ಕೆಲಸಗಾರರ ಲಭ್ಯತೆ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಸ್ಟಾರ್ಟ್‌ಅಪ್‌ಗಳು ಮತ್ತು ದೊಡ್ಡ ಕಂಪನಿಗಳ ಕೇಂದ್ರವಾಗಿರುವುದರಿಂದ ಇದು ಉದ್ಯಮಿಗಳಿಗೆ ಹೆಚ್ಚು ಆಕರ್ಷಕವಾಗಿದೆ. ಆದರೆ, ಹೈದರಾಬಾದ್ ಕೂಡ ಹೊಸ ಕಂಪನಿಗಳು ಮತ್ತು ಉತ್ತಮ ಕಚೇರಿ ವ್ಯವಸ್ಥೆಗಳ ಮೂಲಕ ಬೆಂಗಳೂರಿಗೆ ಸ್ಪರ್ಧೆ ಕೊಡುತ್ತಿದೆ. ಆರ್ಥಿಕ ಶಕ್ತಿಯಲ್ಲಿ ದೆಹಲಿ ಎನ್‌ಸಿಆರ್ ಮತ್ತು ಮುಂಬೈ ಮುಂದಿದ್ದರೂ, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೆಚ್ಚು ಡೇಟಾ ಸಿಗುತ್ತಿರುವುದರಿಂದ ಈಗ ನಗರಗಳ ಬಗ್ಗೆ ವಿಶೇಷ ಸೂಚ್ಯಂಕಗಳನ್ನು ಮಾಡಲಾಗುತ್ತಿದೆ.
ಇದರಿಂದ ನಗರಗಳ ಬಗ್ಗೆ ತಿಳಿಯಲು ಮತ್ತು ಖರ್ಚುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications