Bengaluru Viral: ಬೆಂಗಳೂರಿನ ಲಾಲ್‌ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್
Bengaluru Viral: ಬೆಂಗಳೂರಿನ ಬಗ್ಗೆ ವಿದೇಶಿಗರೊಬ್ಬರು ಮಾತನಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತ ಪ್ರವಾಸದ ಸಮಯದಲ್ಲಿ ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಭೇಟಿ ನೀಡಿದ ವಿದೇಶಿಗರೊಬ್ಬರು ಭಾರತದ ಬಗ್ಗೆ ತಮ್ಮ ತಪ್ಪೊಪ್ಪಿಗೆ / ತಪ್ಪು ತಿಳಿದುಕೊಂಡಿದೆ ಎಂದು ಹೇಳಲು ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಅಭಿಪ್ರಾಯ ವೈರಲ್ ಆಗಿದೆ.
ಪ್ರವಾಸ ಉತ್ಸಾಹ ಹೊಂದಿರುವ ಜ್ಯಾಕ್ ಹೀಟನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ. ಭಾರತದಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಈ ವೀಡಿಯೊವನ್ನು ಅವರು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ. ಕ್ಲಿಪ್ ಅವರು ನಾನು ಭಾರತದ ಬಗ್ಗೆ ತಪ್ಪೊಪ್ಪಿಗೆಯನ್ನು ನೀಡಬೇಕು ಅಂತ ಹೇಳಿದ್ದಾರೆ. ಅವರ ಇನ್‌ಸ್ಟಾಪೋಸ್ಟ್ ಭಾರೀ ವೈರಲ್ ಆಗಿದೆ. ಅಲ್ಲದೆ ಇದರೊಂದಿಗೆ ಅವರು ಬೆಂಗಳೂರಿನ ಬಗ್ಗೆಯೂ ತಮ್ಮ ವಿಶೇಷ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ಅವರು ಭಾರತದ ಬಗ್ಗೆ ಕೆಲವರು ಸಾಕಷ್ಟು ಆಘಾತಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಟ್ರಾಫಿಕ್, ಕೊಳಕು ಅಥವಾ ಸ್ವಚ್ಛತೆ ಕೊರತೆ ಸೇರಿದಂತೆ ಮುಂತಾದ ವಿಷಯಗಳು ಆನ್‌ಲೈನ್‌ನಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುತ್ತವೆ. ಆದರೆ ಈ ವಿಷಯಗಳು ಭಾರತದ ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ನಿಜವಾಗಿದ್ದರೂ, ಅವು ಒಟ್ಟಾರೆ ಚಿತ್ರದ ಒಂದು ಸಣ್ಣ ಭಾಗವನ್ನು ಮಾತ್ರ ತೋರಿಸುತ್ತದೆ. ಇಡೀ ಭಾರತವೇ ಈ ರೀತಿ ಇದೆ ಎನ್ನುವ ಅಭಿಪ್ರಾಯ ತಪ್ಪು ಎಂದು ಅವರು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಅನುಭವದಿಂದ, ಅನೇಕ ಬೀದಿಗಳು ಆನ್‌ಲೈನ್‌ನಲ್ಲಿ ಚಿತ್ರಿಸಿದಷ್ಟು ಕೊಳಕಾಗಿ ಏನು ಇಲ್ಲ ಎಂದು ಹೀಟನ್ ಹೇಳಿದ್ದಾರೆ. ಸ್ವಚ್ಛಗೊಳಿಸಲು ಜನರು ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿರುವ ಅವರು, ಕಸ ಎಲ್ಲೆಂದರಲ್ಲಿ ಬಿದ್ದಿತ್ತು ನಿಜ. ಆದರೆ ಅದನ್ನು ಹೆಚ್ಚಾಗಿ ಗುಡಿಸಲಾಗುತ್ತಿತ್ತು. ಜನರು ಸಹ ಸ್ವಚ್ಛತೆಯ ಬಗ್ಗೆ ಜ್ಞಾನ ಬೆಳೆಸಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜ್ಯಾಕ್ ಹೀಟನ್ ಇನ್‌ಸ್ಟಾಪೋಸ್ಟ್‌ನಲ್ಲಿ ಏನಿದೆ
ಜ್ಯಾಕ್ ಹೀಟನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಲವರು ಭಾರತದ ಒಂದು ಮುಖವನ್ನು ಮಾತ್ರ ತೋರಿಸುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಇಲ್ಲದಿರುವುದನ್ನು ನಾನು ನಿಮಗೆ ತೋರಿಸಲು ಆಶಿಸುತ್ತೇನೆ. ಭಾರತದಲ್ಲಿ ಸಮಸ್ಯೆಗಳಿವೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ, ನಿಸ್ಸಂಶಯವಾಗಿಯೂ ಕಸದ ಸಮಸ್ಯೆ ಇದೆ ಮತ್ತು ನೇರವಾಗಿ ನೆಲದ ಮೇಲೆ ಕಸ ಎಸೆಯುವ ಜನರಿದ್ದಾರೆ - ನೋಡಲು ಕಿರಿಕಿರಿಯಾಗುತ್ತದೆ... ಆದರೆ ತಮ್ಮ ದೇಶದ ಬಗ್ಗೆ ಕಾಳಜಿ ವಹಿಸುವ, ನಂಬಲಾಗದಷ್ಟು ಆತಿಥ್ಯ ವಹಿಸುವ ಮತ್ತು ಜೀವನ ಉತ್ಸಾಹದಿಂದ ತುಂಬಿರುವ ಜನರು ಸಹ ಇದ್ದಾರೆ.
ನಾನು ಇಲ್ಲಿ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿಲ್ಲ. ಆದರೆ ನಾನು ನಿಜವಾದ ಚಿತ್ರಣವನ್ನು ತೋರಿಸುತ್ತೇನೆ ಎಂದು ಖಚಿತಪಡಿಸಿಕೊಳ್ಳಲು, ಈ ದೇಶದ ಎಲ್ಲಾ ಸೌಂದರ್ಯವಾಗಿರುವ ವಿಷಯಗಳನ್ನು ಮರೆಮಾಡಬೇಕಾಗಿಲ್ಲ. ಏಕೆಂದರೆ ಅಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳೂ ಇವೆ ಮತ್ತು ಅದನ್ನು ಇನ್ನಷ್ಟು ಅನುಭವಿಸಲು ನಾನು ಕಾಯಲು ಸಾಧ್ಯವಿಲ್ಲ. ನೈಜ ಸಮಯದ ನವೀಕರಣವೂ ಸಹ - ಇನ್ನೂ ಒಬ್ಬರೂ ನನ್ನನ್ನು ಮೋಸಗೊಳಿಸಲು ಪ್ರಯತ್ನಿಸಿಲ್ಲ 👍 - ಬಹುಶಃ ಗೋಲ್ಡನ್ ತ್ರಿಕೋನವನ್ನು ಬಿಟ್ಟರೆ 🤔 ಎಂದೂ ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications