Match Weather Report: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ-ಸಿಎಸ್‌ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?

IPL 2026 RCB VS CSK: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಭಾನುವಾರ (ಏಪ್ರಿಲ್ 5) ನಡೆಯಲಿರುವ ಐಪಿಎಲ್‌ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಹಾಗಾದ್ರೆ, ಬೆಂಗಳೂರಿನಲ್ಲಿ ವಾತಾವರಣದ ಬಗ್ಗೆ ಹವಾಮನ ವರದಿ ಹೇಳೋದೇನು ಹಾಗೂ ಪಿಚ್ ರಿಪೋರ್ಟ್‌ ಬಗ್ಗೆ ಮಾಹಿತಿ ಇಲ್ಲಿದೆ ತಿಳಿಯಿರಿ.

ಆರ್‌ಸಿಬಿ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯಗಳಿಸಿ ಆತ್ಮವಿಶ್ವಾಸದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿರುವ ಸಿಎಸ್‌ಕೆ ಇಂದಿನ ಪಂದ್ಯದಲ್ಲಿ ಗೆಲ್ಲಲ್ಲೇಬಕೇಂಬ ಪಣತೊಟ್ಟಿದೆ.

RCB vs CSK IPL 2026 Bengaluru s M Chinnaswamy Pitch Report Weather and Full Team Updates Details

ಆಟಗಾರರಿಗೆ ಗಾಯದ ಸಮಸ್ಯೆ

ಈ ಮಹತ್ವದ ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಸಿಎಸ್‌ಕೆ ತಂಡದ ಎಂ.ಎಸ್. ಧೋನಿ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಬ್ರೆವಿಸ್ ಅವರು ಗಾಯದಿಂದ ಬಳಲುತ್ತಿರುವ ಹಿನ್ನೆಲೆ ಸಿಎಸ್‌ಕೆ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಡೆವಾಲ್ಡ್ ಬ್ರೆವಿಸ್ ಅವರು ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎಂದು ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ. ಆದ್ದರಿಂದ ತಂಡವು ತಂಡವು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗಾಗಿ ಮ್ಯಾಟ್ ಶಾರ್ಟ್ ಮತ್ತು ಕೆಲವು ಹೊಸಬರ ಮೇಲೆ ಅವಲಂಬಿತವಾಗಬೇಕಿದೆ. ಕೇವಲ ಬ್ರೆವಿಸ್ ಮಾತ್ರವಲ್ಲದೆ, ಎಂ.ಎಸ್. ಧೋನಿ ಸಹ ಗಾಯದ ಸಮಸ್ಯೆಯಿಂದಾಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್ ವಿಭಾಗದ ವಿವರ

ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಕ್ರಮಾಂಕದಲ್ಲಿ ಫಿಲ್‌ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟಿದಾರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನೂ ಫಿನಿಶರ್‌ಗಳಾಗಿ ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ಹಾಗೂ ಮತ್ತೊಬ್ಬ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇದ್ದಾರೆ.

ಹ್ಯಾಜಲ್‌ವುಡ್ ಕಣಕ್ಕಿಳಿಯುವುದು ಅನುಮಾನ

ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಅವರ ಬದಲಿಯಾಗಿ ಕಣಕ್ಕಿಳಿದಿದ್ದ ಜೇಕಬ್ ಡಫಿ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಇಂದು ಕೂಡ ಸಿಎಸ್‌ಕೆ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಬೌಲಿಂಗ್ ವಿಭಾಗದಲ್ಲೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಬಹುದು.

ಚಿನ್ನಸ್ವಾಮಿ ಪಿಚ್ ವರದಿ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇಲ್ಲಿನ ಸಣ್ಣ ಬೌಂಡರಿಗಳಲ್ಲಿ ರನ್‌ಗಳ ಸುರಿಮಳೆಯನ್ನೇ ಸುರಿಸಬಹುದು. ಇಲ್ಲಿ ವೇಗಿಗಳು ರನ್ ನಿಯಂತ್ರಿಸಲು ಹರಸಾಹಸ ಪಡಬೇಕಾಗುತ್ತದೆ. ಅದರಲ್ಲೂ ಯಾರ್ಕರ್‌ಗಳು ಮಾತ್ರ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯ.

ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ಮಟ್ಟಿಗೆ ಸಹಾಯ ಆಗಬಹುದು. ಆದರೆ, ಅಪ್ಪಿತಪ್ಪಿಯೂ ಎಡವಿದರೂ ಬ್ಯಾಟರ್‌ಗಳು ಸುಲಭವಾಗಿ ಬಾಲ್‌ಗಳನ್ನು ಬೌಂಡರಿಗಟ್ಟುತ್ತಾರೆ. ಇಲ್ಲಿ ಚೇಸಿಂಗ್ ಮಾಡುವುದು ಸುಲಭ ಆಗಿರುವುದರಿಂದ, ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಗುರಿ ಬೆನ್ನಟ್ಟಲು ಬಯಸುತ್ತಾರೆ. ಆದ್ದರಿಂದ ಇಲ್ಲಿ ಟಾಸ್‌ ಗೆದ್ದವರೂ ಮೊದಲು ಬೌಲಿಂಗ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಬೆಂಗಳೂರು ಹವಾಮಾನ ವರದಿ

ಏಪ್ರಿಲ್ 5ರಂದು ಬೆಂಗಳೂರಿಗೆ ಯಾವುದೇ ಮಳೆ ಮುನ್ಸೂಚನೆ ಇರುವುದಿಲ್ಲ. ಆದ್ದರಿಂದ ಪಂದ್ಯಕ್ಕೆ ಯಾವುದೆ ಮಳೆ ಅಡ್ಡಿ ಇರುವುದಿಲ್ಲ. ಭಾನುವಾರ ಸಂಜೆ ವೇಳೆಗೆ ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಲಿದೆ.
ಪಂದ್ಯವು ಸಂಜೆ 7:30ಕ್ಕೆ ಸರಿಯಾಗಿ ಆರಂಭವಾಗಲಿದ್ದು, ಯಾವುದೇ ಮಳೆಯ ಅಡ್ಡಿಯಿರುವುದಿಲ್ಲ ಎನ್ನುವ ಮುನ್ಸೂಚನೆ ಇದೆ. ಇದರಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಂತಾಗಿದೆ.

ಪಂದ್ಯದ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುತ್ತದೆ. ಈ ವೇಳೆ ಚೆಂಡು ಒದ್ದೆಯಾಗಲಿದ್ದು, ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಚೆಂಡನ್ನು ಸರಿಯಾಗಿ ಹಿಡಿಯಲು ಕಷ್ಟವಾಗುತ್ತದೆ. ಈ ವಾತಾವರಣ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಆರ್‌ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜೇಕಬ್ ಬೆಥೆಲ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ವೆಂಕಟೇಶ್ ಅಯ್ಯರ್,
ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ನುವಾನ್ ತುಷಾರ, ರಸಿಖ್ ಸಲಾಮ್ ದಾರ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್, ಜೋರ್ಡಾನ್ ಕಾಕ್ಸ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಮಂಗೇಶ್ ಯಾದವ್, ಸಾತ್ವಿಕ್ ದೇಶ್ವಾಲ್.

ಸಿಎಸ್‌ಕೆ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಎಂ.ಎಸ್. ಧೋನಿ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಮ್ಯಾಥ್ಯೂ ಶಾರ್ಟ್, ಸರ್ಫರಾಜ್ ಖಾನ್, ಉರ್ವಿಲ್ ಪಟೇಲ್, ಆಯುಷ್ ಮ್ಹಾತ್ರೆ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ಜೇಮಿ ಓವರ್ಟನ್, ಖಲೀಲ್ ಅಹ್ಮದ್, ಮುಕೇಶ್ ಚೌಧರಿ, ರಾಹುಲ್ ಚಹರ್, ನೂರ್ ಅಹ್ಮದ್, ಅಕೀಲ್ ಹೊಸೈನ್, ಮ್ಯಾಟ್ ಹೆನ್ರಿ, ಸ್ಪೆನ್ಸರ್ ಜಾನ್ಸನ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಪ್ರಶಾಂತ್ ವೀರ್, ಜಕಾರಿ ಫೌಲ್ಕ್ಸ್, ಅಮಾನ್ ಖಾನ್, ಕಾರ್ತಿಕ್ ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+