• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ಧಾರ್ಥ ನಾಪತ್ತೆ: ಕೃಷ್ಣರನ್ನು ಭೇಟಿ ಮಾಡಿ ಧೈರ್ಯ ಹೇಳಿದ ದೇವೇಗೌಡ್ರು

|

ಬೆಂಗಳೂರು, ಜುಲೈ 30: ಕೆಫೆ ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ ಅವರ ನಾಪತ್ತೆ ಪ್ರಕರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್ ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದರು.

ರಾಜಕೀಯ ಭಿನ್ನಾಭಿಪ್ರಾಯ, ಪಕ್ಷಭೇದಗಳನ್ನು ಬದಿಗಿಟ್ಟು ಹಲವು ನಾಯಕರು ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಧೈರ್ಯ ತುಂಬುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಸೇರಿದಂತೆ ಗಣ್ಯರು ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗುತ್ತಿದ್ದಾರೆ.

CCD Owner VG Siddhartha Missing LIVE: ಸಿದ್ಧಾರ್ಥ ನಾಪತ್ತೆ: 16 ಗಂಟೆ ಶೋಧ ಕಾರ್ಯ ನೀಡಿಲ್ಲ ಫಲ
ಸೋಮವಾರ ಸಂಜೆಯಿಂದ ಮಂಗಳೂರು ಉಳ್ಳಾಲ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಸಿದ್ಧಾರ್ಥ ಆ ನಂತರ ಕಾಣೆಯಾಗಿದ್ದರು. ಅವರು ಬೆಂಗಳೂರಿನಿಂದ ರಸ್ತೆಯುದ್ದಕ್ಕೂ ತನ್ನ ಹಲವು ಸ್ನೇಹಿತರಿಗೆ ಫೋನಾಯಿಸಿ ಕ್ಷಮೆ ಕೇಳುತ್ತಿದ್ದರು ಎಂದು ಅವರ ಕಾರ್ ಡ್ರೈವರ್ ಹೇಳಿದ್ದಾರೆ.

ಕಾರಿನಿಂದ ರಸ್ತೆ ಮಧ್ಯದಲ್ಲಿ ಇಳಿದ ಸಿದ್ಧಾರ್ಥ್ ಯೂಟರ್ನ್ ತೆಗೆದುಕೊಂಡು ಬರಲು ಡ್ರೈವರ್ ಬಳಿ ಹೇಳಿ, ನಂತರ ನಾಪತ್ತೆಯಾಗಿದ್ದರು. ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ಸುಮಾರು 8000 ಕೋಟಿಗೂ ಅಧಿಕ ಮೊತ್ತದ ಸಾಲ ಹೊಂದಿದ್ದ ಸಿದ್ಧಾರ್ಥ ಅವರು ಹಣಕಾಸಿನ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದಲೂ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದ್ದು, ಅವರ ನಾಪತ್ತೆ ಪ್ರಕರಣ ಮತ್ತಷ್ತು ನಿಗೂಢತೆ ಸೃಷ್ಟಿಸಿದೆ.

English summary
CCD owner VG Siddhartha missing case: HD Deve Gowda meets SM Krishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X