ಮಹಿಳೆ ಕೊಲೆ ಮಾಡಿ ಶವದ ಮೇಲೆ ಅತ್ಯಾಚಾರ ನಡೆಸಿದ

ಬೆಂಗಳೂರು, ಫೆಬ್ರವರಿ 15: ಐಟಿಪಿಎಲ್ ಮುಖ್ಯರಸ್ತೆಯ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಖಾಸಗಿ ಕಂಪನಿಯಲ್ಲಿ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಯನ್ನು ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ ಮಾಡಿರುವ ವಿಚಿತ್ರ ಘಟನೆ ಬೆಂಗಳೂರಲ್ಲಿ ನಡದಿದೆ.

ಮಣಿಪುರ ಮೂಲದ ಲೈಸ್‌ರಾಮ್ ಹೆಂಬಾಸಿಂಗ್(21) ಆರೋಪಿ. ಮಹಿಳೆ 15 ದಿನ ಮುಂಬೈನಲ್ಲಿ ಹಾಗೂ ಉಳಿದ ದಿನ ಬೆಂಗಳೂರಿನ ಐಟಿಪಿಎಲ್‌ನ ಕಂಪನಿಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ನಗರದಲ್ಲಿದ್ದಾಗ ಐಟಿಪಿಎಲ್ ಮುಖ್ಯರಸ್ತೆಯಲ್ಲಿನ ಕ್ರೆಸ್ಟ್ ಸರ್ವೀಸ್ ಅಪಾರ್ಟ್‌ಮೆಂಟ್‌ನ 7 ನೇ ಮಹಡಿಯ ಫ್ಲ್ಯಾಟ್‌ ನಂ 701ರಲ್ಲಿ ವಾಸಿಸುತ್ತಿದ್ದರು. ಫೆ.8 ಮತ್ತು 9ರ ನಡುವೆ ಹತ್ಯೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮಾರಕಾಸ್ತ್ರಗಳಿಂದ ಹೊಡೆದು ನಂತರ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಹಾಗೂ ಶವದ ಮೇಲೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

Room boy arrested for death of woman in star hotel in ITPL

ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ಅವರು, ಎಂದಿನಂತೆ ಉಳಿದುಕೊಂಡಿದ್ದರು. ರಾತ್ರಿ 8.30ರ ಸುಮಾರಿಗೆ ಮಹಿಳೆ ಒಒಬ್ಬರೇ ಇದ್ದ ವೇಳೆ ಊಟ ಕೊಡುವ ನೆಪದಲ್ಲಿ ಆರೋಪಿ ಕೊಠಡಿಗೆ ಬಂದಿದ್ದಾನೆ. ಈ ವೇಳೆ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅದಕ್ಕೆ ಪ್ರತಿರೋಧ ತೋರಿದ ಮಹಿಳೆಯ ಮೇಲೆ ಬಲ ಪ್ರಯೋಗಿಸಿ ಹಲ್ಲೆ ನಡೆಸಿದ್ದಾನೆ. ಬಳಿಕ ಮಹಿಳೆಯ ಎರಡು ಫೋನ್‌ಗಳನ್ನು ಎತ್ತಿಕೊಂಡು ಹೋಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+