Bengaluru Apartment: ಮೇಂಟೆನೆನ್ಸ್ ಹಣ ಉಳಿಸಲು ಫ್ಲಾಟ್ ಮಾಲೀಕನ ವಿಚಿತ್ರ ಐಡಿಯಾ, ನೆಟ್ಟಿಗರಿಂದ ಟ್ರೋಲ್
ಬೆಂಗಳೂರು: ನಗರದಲ್ಲಿ ನೋಂದಾಯಿತ ಅಪಾರ್ಟ್ಮೆಂಟ್ ಅಥವಾ ಸೊಸೈಟಿ ನಿರ್ವಹಣಾ ಶುಲ್ಕದಲ್ಲಿ ಹಣ ಉಳಿಸಲು ಅಪಾರ್ಟ್ಮೆಂಟ್ ಮಾಲೀಕರೊಬ್ಬರು ನೀಡಿದ ಸಲಹೆಗಳು ಚರ್ಚೆಗೆ ಕಾರಣವಾಗಿದೆ. ಜನರ ಜೀವನ ಗುಣಮಟ್ಟ ನಿಯಂತ್ರಿಸುವ ಬಗ್ಗೆ ನೀಡಿದ ವಿಲಕ್ಷಣ ಸಲಹೆಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ. ಮಾಲೀಕರೊಬ್ಬರು ಕಳುಹಿಸಿದ್ದ ಸಲಹೆಗಳಿರುವ ಮೇಲ್ ಸ್ಕ್ರೀನ್ ಶಾಟ್ ಅನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇಂತಹ ಸಲಹೆ ನೀಡಿದ ಮಾಲೀಕನನ್ನು ಟ್ರೋಲ್ ಸಹ ಮಾಡಲಾಗಿದೆ.
ಮನೆ ಮಾಲೀಕರು ತಾವು ವಾಸಿಸುವ ಸೊಸೈಟಿಗೆ (ಅಪಾರ್ಟ್ಮೆಂಟ್) ಕಳುಹಿಸಿದ ಇಮೇಲ್ ಸ್ಕ್ರೀನ್ ಶಾಟ್ ಇದಾಗಿದೆ. ಕಸ ಸಂಗ್ರಹಣೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು ವಿದ್ಯುತ್ ಬ್ಯಾಕಪ್ಗಾಗಿ ಜನರೇಟರ್ಗಳಂತಹ ಅಗತ್ಯ ಸೇವೆಗಳಲ್ಲಿ ಕಡಿತವನ್ನು ಮಾಡುವಂತೆ ಮಾಲೀಕ ಸೂಚಿಸಿದ್ದಾರೆ. ಹಣ ಉಳಿಸಲು ಅವರು ನೀಡಿದ ಸಲಹೆಗಳ ಪೋಸ್ಟ್ಗೆ ಆನ್ಲೈನ್ನಲ್ಲಿ ಬಗೆ ಬಗೆಯ ಕಾಮೆಂಟ್ಗಳನ್ನು ಮಾಡಿ ನೆಟ್ಟಿಗರು ಮನರಂಜನೆ ಪಡೆಯುತ್ತಿದ್ದಾರೆ.

ಸೊಸೈಟಿ ನಿರ್ವಹಣಾ ಶುಲ್ಕಗಳು ಯಾವುವು?
ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸಿಸುವವರು ಹಂಚಿಕೆಯ ಸೌಲಭ್ಯಗಳು ಮತ್ತು ಸಾಮಾನ್ಯ ಪ್ರದೇಶಗಳನ್ನು ನಿರ್ವಹಿಸಲು ನಿರ್ವಹಣಾ ವೆಚ್ಚ ಪಾವತಿಸಬೇಕಾಗುತ್ತದೆ. ಇದು ಪುನರಾವರ್ತಿತ ಶುಲ್ಕಗಳಾಗಿವೆ. ಅದು ಒಂದೆರಡು ಸಾವಿರದಿಂದ ಲಕ್ಷ ರೂ.ವರೆಗೆ ಶುಲ್ಕ ಇರುತ್ತದೆ. ವಸತಿ ಪ್ರದೇಶದಲ್ಲಿನ ಸೌಕರ್ಯ, ಸ್ಥಳ ಅವಲಂಬಿಸಿ ನಿರ್ವಹಣಾ ಶುಲ್ಕ ನಿರ್ಧಾರವಾಗುತ್ತದೆ.
ಬೆಂಗಳೂರು ಫ್ಲಾಟ್ ಮಾಲೀಕ ಕೊಟ್ಟ ಸಲಹೆಗಳು ಯಾವುವು
ಸೊಸೈಟಿ ಸದಸ್ಯರಿಗೆ ಕಳುಹಿಸಿದ್ದ ಈ ಮೇಲ್ ನಲ್ಲಿ, ಬೆಂಗಳೂರಿನ ಫ್ಲಾಟ್ ಮಾಲೀಕರು ತೋಟಗಾರಿಕೆ, ವಿದ್ಯುತ್, ಭದ್ರತೆ ಮತ್ತು ಮನೆಗೆಲಸದ ವೆಚ್ಚವನ್ನು ಕಡಿತಗೊಳಿಸಿದರೆ ಹಣ ಉಳಿಯುತ್ತದೆ. ಈ ಸಲಹೆಗಳು "ನಮ್ಮ ಅಪಾರ್ಟ್ಮೆಂಟ್ನ ಮಾಲೀಕರಲ್ಲಿ ಒಬ್ಬರಿಂದ ನನಗೆ ಈ ಇಮೇಲ್ ಬಂದಿದ್ದು, ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಅವರು ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಸುಮಾರು ಐದು ಸಲಹೆಗಳನ್ನು ಅವರ ವಿವರಿಸಿದ್ದಾರೆ.
'ತೋಟಗಾರಿಕೆ ನಿರ್ವಹಣೆಗೆ ತೋಟಗಾರರಿಗೆ ನೀಡುವ ವೇತನ ಕಡಿಮೆ ಮಾಡಲು ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ಮಾಡಬೇಕು. ಸೊಸೈಟಿ ಪ್ರದೇಶಗಳಲ್ಲಿನ ದೀಪಗಳನ್ನು ಬಿಳಿ ಬಣ್ಣದಿಂದ ಮಂದ ಹಳದಿ ಬಣ್ಣಕ್ಕೆ ಬದಲಾಯಿಸಬೇಕು. ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗುತ್ತದೆ. ಮಂದ ದೀಪದಲ್ಲಿ ಸಂಜೆ ನಂತರ ಮಕ್ಕಳು ಆಟವಾಡದೇ ಬೇಗ ಮಲಗಲು ಸಹಾಯವಾಗುತ್ತದೆ. ಶಿಸ್ತು ಮೂಡುತ್ತದೆ. ಇದೆಲ್ಲ ರೀತಿಯ ಶಿಸ್ತು ಅನುಸರಿಸುವ ಮೂಲಕ ವಿದ್ಯುತ್ಗೆ ಖರ್ಚಿನ ಹಣ ಉಳಿತಾಯ ಮಾಡಬಹುದು.'
ಬೆಂಗಳೂರಿನ ಫ್ಲಾಟ್ ಮಾಲೀಕರು 'ಕಡಿಮೆ ವೆಚ್ಚದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು, ಅದರಲ್ಲಿ ಒಳ್ಳೆಯವರನ್ನು ನೇಮಿಸಿಕೊಳ್ಳಬೇಕು. ಕಸ ಸಂಗ್ರಹಣೆಯಲ್ಲೂ ಹಣ ಉಳಿಸಬಹುದು ಎಂದಿದ್ದಾರೆ.
ವಿದ್ಯುತ್ ಬ್ಯಾಕಪ್ ಇಲ್ಲ, ಭದ್ರತೆ ಇಲ್ಲ
ಸೊಸೈಟಿಯಲ್ಲಿನ ಭದ್ರತಾ ಸಿಬ್ಬಂದಿಯನ್ನು ಹಗಲಿನಲ್ಲಿ ಮಾತ್ರ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಅದರಿಂದ ಭದ್ರತೆಗಾಗಿ ಖರ್ಚು ಮಾಡುವ ಹಣ ಉಳಿಯಲಿದೆ. ರಾತ್ರಿ ನಿವಾಸಿಗಳು ತಮ್ಮ ಫ್ಲಾಟ್ಗಳನ್ನು ರಾತ್ರಿ 9 ಅಥವಾ 10 ಗಂಟೆಗೆ ಲಾಕ್ ಮಾಡಬೇಕು. ರಾತ್ರಿ 9 ಅಥವಾ 10 ಗಂಟೆಗೆ ಅಪಾರ್ಟ್ಮೆಂಟ್ ಲಾಕ್ ಆಗಿದೆ ಎಂದುಕೊಳ್ಳೋಣ. ನಾವು ಮಲಗಿದ ಮೇಲೆ ಭದ್ರತಾ ಕಾವಲುಗಾರರು ತಡರಾತ್ರಿವರೆಗೆ ಎಚ್ಚರವಿರುತ್ತಾರೆ ಎಂದು ನಿರೀಕ್ಷೆ ಮಾಡಲು ಆಗಲ್ಲ. ಈ ಮೂಲಕ ನಿವಾಸಿಗಳು ಕಟ್ಟುನಿಟ್ಟಿನ ಸಮಯ ಪಾಲಿಸಿದರೆ ಹಣ ಉಳಿಸಬಹುದೆಂದು ತಿಳಿಸಿದ್ದಾರೆ.' ಸೊಸೈಟಿಯಲ್ಲಿ ರಾತ್ರಿ ಭದ್ರತೆ ಇಲ್ಲದಿದ್ದರೆ ಸುರಕ್ಷತೆ ಹೇಗೆ ಎಂಬ ಕಳವಳ ಸಹ ಹುಟ್ಟು ಹಾಕಿದೆ.
ಕೊನೆಯದಾಗಿ 'ಮಾಲೀಕರು ವಸತಿ ಪ್ರದೇಶದಲ್ಲಿನ ಡೀಸೆಲ್ ಜನರೇಟರ್ಗಳನ್ನು ಸಂಪೂರ್ಣವಾಗಿ ತೆಗೆಯಬೇಕು. ವಿದ್ಯುತ್ ಕಡಿತಗೊಂಡಾಗ ಜನರೇಟರ್ ಅಗತ್ಯವಿರುವುದಿಲ್ಲ. ಜನರೇಟರ್ ತೆಗೆಯುವುದು ಪರಿಸರ ಸ್ನೇಹಿ ಆಗಿದೆ. ಇನ್ನೂ 'ಸಿಸಿಟಿವಿ ಕ್ಯಾಮೆರಾಗಳ ಬಳಕೆಯನ್ನು ಕಡಿಮೆ ಮಾಡಿ ಅಥವಾ ಅವುಗಳನ್ನು ಅಪಾರ್ಟ್ಮೆಂಟ್ ಒಳಗೆ ಸಂಪೂರ್ಣವಾಗಿ ತೆಗೆದುಹಾಕಬೇಕು. ನಿವಾಸಿಗಳ ಗೌಪ್ಯತೆಗೂ ತೊಂದರೆ ಉಂಟು ಮಾಡಬಹುದು. ಹಗಲು ನಾವು ಭದ್ರತಾ ಸಿಬ್ಬಂದಿ ನಿಯೋಜಿಸಿರುತ್ತೇವೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಸಿಸಿ ಕ್ಯಾಮೆರಾ ಇದ್ದರೆ ವಿದ್ಯುತ್ ಸರಬರಾಜಿಗೆ ಹಣ ನೀಡಬೇಕಾಗುತ್ತದೆ' ಎಂದು ಸಲಹೆ ನೀಡಿದ್ದಾಗಿ ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ.
ಸಲಹೆಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು
ಈ ಎಲ್ಲ ಕೆಲಸಗಳನ್ನು ಮಾಡಬಲ್ಲ ಉತ್ತಮ ರೋಬೋಟ್ ನಿಯೋಜಿಸಿಕೊಳ್ಳಿ ಎಂದು ಸಲಹೆ ನೀಡಿಲ್ಲ ಎಂಬುದು ಆಶ್ಚರ್ಯ ಮೂಡಿಸಿದೆ. ಒಂದು ತಿಂಗಳ ನಿರ್ವಹಣಾ ಶುಲ್ಕ ಮನ್ನಾ ಮಾಡಬಹುದು ಎಂದು ನೆಟ್ಟಿಗರೊಬ್ಬರು ತಿಳಿಸಿದರು. ಜನರ ಜೀವನವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಇಂತಹ ಸಲಹೆಗಳನ್ನು ಯಾರು ಪರಿಗಣಿಸುವುದಿಲ್ಲ ಎಂದು ಮತ್ತೊಬ್ಬರು ಹೇಳಿದರು. ಸಲಹೆ ನೀಡಿದ ಮಾಲೀಕರು ಯಾವುದೋ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರಬೇಕು. ಎಲ್ಲ ವೆಚ್ಚ ಕಡಿತಗೊಳಿಸಲು ಬ್ರೈನ್ ವಾಶ್ ಮಾಡಿರಬೇಕು" ಎಂದು ರೆಡ್ಡಿಟ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
-
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications