Get Updates
Get notified of breaking news, exclusive insights, and must-see stories!

By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ?

Davanagere South By Poll: ರಾಜ್ಯದಲ್ಲಿ ಉಪಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದೊಳಗೇ ತೀವ್ರ ಪೈಪೋಟಿ ಉಂಟಾಗಿತ್ತು. ಅದನ್ನು ಶಮನಗೊಳಿಸುವಲ್ಲಿ ಪಕ್ಷದ ಮುಖಂಡರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ಸಾಕಷ್ಟು ಕೊಟ್ಟಿದೆ, ಆ ಸಮುದಾಯದ ಬೆಂಬಲ ಸದಾ ಕಾಂಗ್ರೆಸ್‌ಗೆ ಎಂದು ಪಕ್ಷ ನಂಬಿದೆ. ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ ಏರ್ಪಡಲಿದೆ. ಈ ಕುರಿತು 'ಒನ್‌ ಇಂಡಿಯಾ ಕನ್ನಡ' ಜೊತೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಮಾತನಾಡಿದ್ದಾರೆ.

ದಾವಣಗೆರೆಗೆ ಯಾರೇ ಪ್ರಚಾರಕ್ಕೆ ಬಂದರೂ ಬಾರದಿದ್ದರು. ಜನರು ಕಾಂಗ್ರೆಸ್ ಪಕ್ಷ, ಸಿದ್ಧಾಂತ, ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಯಾರೋ ಒಬ್ಬರಿಂದ ಗೆಲುವು ಅಲ್ಲ. ದೊಡ್ಡ ಇತಿಹಾಸ ಇರುವ ಕಾಂಗ್ರೆಸ್ ಯಾರೋ ಒಬ್ಬರಿಂದ ಅಲ್ಲ. ದಾವಣಗೆರೆಯಲ್ಲಿ ನಮ್ಮಿಂದ ಪಕ್ಷ ಗೆಲ್ಲಲಿದೆ ಎಂದುಕೊಂಡರೆ ಅದು ಅವರ ಭ್ರಮೆ ಎಂದು ಸಲೀಂ ಅಹ್ಮದ್ ಅವರು ಸ್ಪಷ್ಟಪಡಿಸಿದರು.

Davanagere Bypoll 2026

ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ್ದಕ್ಕೆ ಸಾಧಿಕ್ ಪೈಲ್ವಾನ್ ಸೇರಿ ಕೆಲವರು ಬಂಡಾಯ ಎದಿದ್ದರು. ಇದೀಗ ಸಾಧಿಕ್ ಅವರು ನಾಮಪತ್ರ ಹಿಂಪಡೆದಿದ್ದಾರೆ. ಇದೀಗ ಸಚಿವ ಜಮೀರ್ ಅಹ್ಮದ್ ಅವರು ಇಲ್ಲಿಗೆ ಪ್ರಚಾರಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಸಲೀಂ ಅಹ್ಮದ್ ಅವರು ಈ ರೀತಿ ಪ್ರತಿಕ್ರಿಯಿಸಿ ಪರೋಕ್ಷವಾಗಿ ಟಾಂಗ್ ನೀಡಿದರು.

ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು

ಕಾಂಗ್ರೆಸ್‌ ನಿಯಮ ಮೀರಿಲ್ಲ: ಎಲ್ಲರೂ ಒಪ್ಪಿಯೇ ಸಮರ್ಥ್‌ಗೆ ಟಿಕೆಟ್

ಅಲ್ಪಸಂಖ್ಯಾತರ ಬಂಡಾಯ, ಅವರಿಂದ ಕಾಂಗ್ರೆಸ್‌ಗೆ ಹೊಡೆತ ಬೀಳುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಇದ್ದಿದ್ದು ನಿಜ. ಬಳಿಕ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿರಂತರ ಸಭೆ ಮಾಡಿದರು. ಬಳಿಕ ಅಲ್ಪಸಂಖ್ಯಾತರ ಮುಖಂಡರಾದ ಜಮೀರ್ ಅಹ್ಮದ್‌ ಖಾನ್, ಸಿಎಂ, ಡಿಸಿಎಂ, ಮಲ್ಲಿಕಾರ್ಜುನ್ ಖರ್ಗೆ ಅವರ ಆದಿಯಾಗಿ ಎಲ್ಲರು ಪಾಲ್ಗೊಂಡು ತಿರ್ಮಾನಿಸಿ ಒಪ್ಪಿಯೇ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ವಿವರಿಸಿದರು.

ಮೃತ ಶಾಸಕರ ಕುಟುಂಬಸ್ಥರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ನಿಯಮ ಕಾಂಗ್ರೆಸ್‌ನಲ್ಲಿದೆ. ಬಾಗಲಕೋಟೆಯಲ್ಲೂ ಇದೇ ನಿಯಮದಡಿ ಎಚ್‌ವೈ ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿದ್ದೇವೆ. ಇಲ್ಲಿ ನೀಡದಿದ್ದರೆ ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕೆಲಸಗಳು, ಐದು ಗ್ಯಾರಂಟಿ, ಸರ್ಕಾರ ಅಭಿವೃದ್ಧಿ ಯೋಜನೆಗಳಿಂದ ಇಲ್ಲಿ ಜನರಿಗೆ ಒಳಿತಾಗಿದೆ. ಅಭಿವೃದ್ಧಿಗೆ ಮೆಚ್ಚಿದ್ದಾರೆ. ಜನರು ಖಷಿಯಲ್ಲಿದ್ದಾರೆ. ಶಾಮನೂರು ಅವರು ಇದ್ದಿದ್ದರೆ ಅವರೇ ಇನ್ನೆರಡು ವರ್ಷ ಶಾಸಕರಾಗಿರುತ್ತಿದ್ದರು. ಇಂದು ಅವರಿಲ್ಲ, ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡುವುದು ನ್ಯಾಯ ಎಂದು ಈ ತೀರ್ಮಾನಕ್ಕೆ ಬರಲಾಯಿತೆಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿಯೇ ಸಾಧಿಕ್‌ರನ್ನು ಎತ್ತಿ ಕಟ್ಟಲಾಯಿತು?

ಕಾಂಗ್ರೆಸ್ ಪಕ್ಷದೊಳಗೇ ಕೆಲವರು ಷಡ್ಯಂತ್ರ ಮಾಡಿದ್ದರಿಂದ ಸಾಧಿಕ್ ಪೈಲ್ವಾನ್ ಅವರು ಬಂಡಾವೆದಿದ್ದರು. ಅದನ್ನು ಅವರೇ ಸಿಎಂ ಬಳಿ ಹೇಳಿಕೊಂಡಿದ್ದಾರೆ. ಅವರೊಂದಿಗೆ ಸಂಧಾಯ ಮಾತುಕತೆ ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಕೋಮುವಾದಿಗಳಿಗೆ ಅವಕಾಶ ಆಗಬಾರದು. ತಮ್ಮಿಂದ ಪಕ್ಷಕ್ಕೆ ತೊಂದರೆ ಆಗಬಾರದೆಂಬ ಕಾರಣಕ್ಕೆ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಸಮರ್ಥ ಅವರಿಗೆ ಬೆಂಬಲ ಕೊಡುವುದಾಗಿ ಸಾಧಿಕ್ ಹೇಳಿದ್ದಾರೆ ಎಂದರು.

Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ

ಇಲ್ಲಿ 40 ಸಾವಿರ ಮತಗಳಿಂದ ಗೆಲ್ಲುತ್ತೇವೆ

ಉಪಚುನಾವಣೆ ಕಣದಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇರ ಪೈಪೋಟಿ ನೀಡಲಿದೆ. ಅಲ್ಪಸಂಖ್ಯಾತರು ಯಾವತ್ತಿಗೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಬೆಂಬಲಿಸುತ್ತಾರೆ. ದಾವಣಗೆರೆಯಲ್ಲಿ ಕನಿಷ್ಠ 40 ಸಾವಿರ ಹಾಗೂ ಬಾಲಗಕೋಟೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಇಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯರಿಂದ ಪ್ರಚಾರ

ಈಗಾಗಲೇ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಚಾರ ನಡೆಸಿದ್ದು, ಶುಕ್ರವಾರವರೆಗೆ ಸಿಎಂ ಸಿದ್ದರಾಮಯ್ಯ ಅವರು ಪ್ರವಾಸ ಮಾಡಿ ಮತಯಾಚಿಸಲಿದ್ದಾರೆ. ಕ್ಷೇತ್ರದಲ್ಲಿ ಹಿರಿಯ ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆ, ಸಿದ್ಧಾಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮ, ವಿಚಾರಧಾರೆ ಜನರಿಗೆ ಮುಟ್ಟಿಸುವ ಜೊತೆಗೆ ಹನ್ನೆರಡು ವರ್ಷ ಬಿಜೆಪಿ ಮಾಡಿದ್ದೇನು? ಅವರ ಕರ್ಮಕಾಂಡಗಳನ್ನು, ಜನರಿಗೆ ಮಾಡಿದ್ದ ಮೋಸ ತಿಳಿಸಿ ಬಿಜೆಪಿಯನ್ನು ಬೆತ್ತಲೆಗೊಳಿಸುತ್ತೇವೆ ಎಂದು ಗುಡುಗಿದರು. ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಒಬ್ಬ ಯುವಕ. ಅವರಿಗೆ ಜನ ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2028ರ ಚುನಾವಣೆ ಟಿಕೆಟ್ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು

2028ರಲ್ಲಿ ಮತ್ತೆ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುತ್ತಾ? ಎಂಬ ಪ್ರಶ್ನೆಗೆ, ಅವರು ರಾಜ್ಯದಲ್ಲಿನ 224 ಕ್ಷೇತ್ರಗಳಲ್ಲಿ ಯಾರಿಗೆ ಎಲ್ಲಿಂದ ಟಿಕೆಟ್ ಕೊಡುತ್ತೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಅದನ್ನು ಒಪ್ಪಬೇಕಾಗುತ್ತದೆ. ಆಗ ಸಭೆ ಮಾಡಿ ಎಲ್ಲವನ್ನು ತೀರ್ಮಾನಿಸಲಾಗುತ್ತದೆ ಎಂದರು.

ಕರ್ನಾಟಕದ ಬಗ್ಗೆ ಮಾತನಾಡದ ಕೇಂದ್ರದ 5 ಮಂತ್ರಿಗಳು

ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಸಲೀಂ ಕೆಂಡ ಕಾರಿದರು. ಬಿಜೆಪಿ ನಾಯಕರು ನಮ್ಮ ಮೇಲೆ ಟೀಕೆ ಮಾಡುತ್ತಾರೆ. ಪ್ರಧಾನಿ ಹೇಳಿದ ಹದಿನೈದು ಕೋಟಿ ಎಲ್ಲಿದೆ?, ಸುಳ್ಳಿಗೆ ಅವಾರ್ಡ್ ಕೊಡುವುದಿದ್ದರೆ ಅದು ಮೋದಿಗೆ ಸಲ್ಲುತ್ತದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಕೊಡುವುದಾಗಿ ಹೇಳಿದ್ದರು. ಈವರೆಗೆ 24 ಕೋಟಿ ಅಲ್ಲ, 24 ಲಕ್ಷ ಉದ್ಯೋಗ ಸಹ ನೀಡಿಲ್ಲ. ಇಂಧನ, ಅಡುಗೆ ಅನಿಲ ದರವೆಲ್ಲವು ಹೆಚ್ಚಾಗಿದೆ. ದೇಶದ ಜನರಿಗೆ ನಕರ ತೋರಿಸಿದ್ದಾರೆ.

ಕೇಂದ್ರ ಸರ್ಕಾರವು ಮಹದಾಯಿ, ಮೇಕೆದಾಟು ಸೇರಿ ಕೆಲವು ಯೋಜನೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ಹೊಂದಿದೆ. ರಾಜ್ಯಕ್ಕೆ ಅನ್ಯಾಯ ಆದಾಗ ರಾಜ್ಯದ ಐದು ಕೇಂದ್ರ ಸಚಿವರಿದ್ದರು, ಆ ಬಗ್ಗೆ ಮಾತನಾಡುವುದಿಲ್ಲ. ಅವರೆಲ್ಲ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+